ಬೆಳಗಾವಿ ಪಾಲಿಕೆ- 25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ

ಬೆಳಗಾವಿ ಪಾಲಿಕೆ
25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ

25 ಮಂದಿಗೆ ಲೋಕಾಯುಕ್ತರ ಬಿಸಿ ಬಲೆ!?

ಬೆಳಗಾವಿ:
ವೆಗಾ ಕಂಪನಿಯ ತೆರಿಗೆ ವಂಚನೆ ಪ್ರಕರಣ ಇದೀಗ ಕೇವಲ ಆರ್ಥಿಕ ಹಗರಣ ಮಾತ್ರವಲ್ಲ, ಬೆಳಗಾವಿ ಪಾಲಿಕೆಯ ಭ್ರಷ್ಟಾಚಾರದ ಗೂಡು ಬಯಲಿಗೆಳೆಯುವ ಪ್ರಚಂಡ ಕಾನೂನು ಹೋರಾಟದ ದಾರಿಯಾಗಿದೆ.

ಲೋಕಾಯುಕ್ತರು ಸರ್ಕಾರಕ್ಕೆ 25 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇದರಲ್ಲಿ ಹಾಲಿ ಅಧಿಕಾರಿಗಳ ಜೊತೆಗೆ ನಿವೃತ್ತರು, ವರ್ಗಾವಣೆಗೊಂಡ ಅಧಿಕಾರಿಗಳೂ ಸೇರಿರುವುದು ವಿಷಯದ ಗಂಭೀರತೆಯನ್ನು ಇನ್ನಷ್ಟು ಗಾಢಗೊಳಿಸಿದೆ.

ಇದು ತನಿಖೆಯ ಅಂತಿಮ ಹಂತ – ಪಾಲಿಕೆಯ ಇತಿಹಾಸದಲ್ಲೇ ದೊಡ್ಡ ‘ಕಾನೂನು ಬಲೆ’ ಬೀಳಲು ಹೊರಟಿದೆ.

ಹಗರಣದ ಪಥಯಾತ್ರೆ

ವೆಗಾ ಕಂಪನಿಯ ತೆರಿಗೆ ಪಾವತಿಯಲ್ಲಿ ಅಕ್ರಮದ ಸುಳಿವು

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿರುಗಾಳಿ – ಲೋಕಾಯುಕ್ತ ತನಿಖೆಗೆ ಶಿಫಾರಸು

ಆಯುಕ್ತರಿಂದ ಲೋಕಾಯುಕ್ತರಿಗೆ ಅಧಿಕೃತ ಪತ್ರ

ebelagavi ಸರಣಿ ವರದಿ – ಹಗರಣವನ್ನು ರಾಜ್ಯಮಟ್ಟಕ್ಕೆ ಎತ್ತಿತು

ದಾಖಲೆಗಳನ್ನು ಸರ್ಕಾರದಿಂದಲೇ ಪಡೆದು ಲೋಕಾಯುಕ್ತ ತನಿಖೆ ಬಿಗಿಗೊಳಿಸಿದರು

25 ಮಂದಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಲೋಕಾಯುಕ್ತರು ಸರ್ಕಾರಕ್ಕೆ ಪತ್ರ?


ಮಾಧ್ಯಮದ ಶಕ್ತಿ – ವರದಿ ಪ್ರತಿಧ್ವನಿ

ಈ ಹಗರಣವನ್ನು ರಾಜ್ಯಮಟ್ಟಕ್ಕೆ ಎತ್ತಿ ಹಿಡಿದದ್ದು ಸಂಯುಕ್ತ ಕರ್ನಾಟಕ ‌ಮತ್ತು ‘ e belagavi ಡಿಜಿಟಲ್ ಮಾಧ್ಯಮವು ಸರಣಿ ವರದಿಗಳೇ. ಜನಮನದ ಒತ್ತಡ, ಪ್ರತಿಧ್ವನಿಸಿದ ಸುದ್ದಿಗಳ ಬಿರುಸು – ಇವೆಲ್ಲವು ಲೋಕಾಯುಕ್ತರನ್ನು ಕಾನೂನು ಕ್ರಮದ ಹಾದಿಗೆ ತಳ್ಳಿದ ಪ್ರಮುಖ ಕಾರಣ.

ಲೋಕಾಯುಕ್ತರ ಉತ್ತಮ ಕೆಲಸ

ಬೆಳಗಾವಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿಗಳು ವಿಶೇಷ ಆಸಕ್ತಿ ವಹಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.

ಸಾರ್ವಜನಿಕ ಹಣ ನುಂಗುವವರನ್ನು ಬಿಟ್ಟು ಬಿಡುವುದಿಲ್ಲ” ಎಂಬ ಸಂದೇಶ ಸ್ಪಷ್ಟವಾಯಿತು.

ಇನ್ನೂ ಕೆಲವು ಸ್ವಯಂ ಪ್ರೇರಿತ ದೂರುಗಳ ಮೇಲೂ ಪ್ರತ್ಯೇಕ ತನಿಖೆ ನಡೆಯುತ್ತಿದೆ.

*ಯಾರು ಯಾರು ಸಿಕ್ಕಿಬೀಳಬಹುದು ?*

ಹಳೆಯ ಆಯುಕ್ತರುಗಳು

ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ

ಹಣಕಾಸು ವಿಭಾಗದ ಸಿಬ್ಬಂದಿಗಳು

ಅಕ್ರಮ ದಾಖಲೆಗಳಿಗೆ ಸಹಿ ಹಾಕಿದ ಸಹಾಯಕ ಹುದ್ದೆಯವರು

ಒಟ್ಟು 27 ಮಂದಿಯ ಹೆಸರುಗಳು ವಿಚಾರಣಾ ಪಟ್ಟಿಯಲ್ಲಿ ಸಿಕ್ಕಿಬೀಳುವ ಲಕ್ಷಣಗಳು ಸ್ಪಷ್ಟ.

ಮುಂದೆ ಏನಾಗಬಹುದು?

ಸರ್ಕಾರ ಹಸಿರು ನಿಶಾನೆ ತೋರಿದ ಕ್ಷಣವೇ, ಬೆಳಗಾವಿ ಪಾಲಿಕೆಯ ಇತಿಹಾಸದಲ್ಲೇ ದೊಡ್ಡ ಭ್ರಷ್ಟಾಚಾರ ಪ್ರಕರಣ ಕೋರ್ಟ್ ಬಾಗಿಲು ತಟ್ಟಲಿದೆ.
ಭ್ರಷ್ಟ ಅಧಿಕಾರಿಗಳ ಮೇಲೆ ಕಾನೂನು ಬಲೆ ಬಿಗಿಯಾಗುವುದು ಖಚಿತ.

ಜನರ ತೆರಿಗೆ ಹಣವನ್ನು ದೋಚಿದ ಗೂಳಿಗೆ ಇದು ಅಂತಿಮ ಹೊಡೆತವಾಗುವ ಸಾಧ್ಯತೆ.

ಒಟ್ಟಾರೆ, ಬೆಳಗಾವಿ ಪಾಲಿಕೆಯ ದಶಕಗಟ್ಟಲೆ ಮುಂದುವರೆದಿದ್ದ ದುರಾಡಳಿತಕ್ಕೆ ಲೋಕಾಯುಕ್ತರು ಹಾಕಿರುವ ಬಲೆ ತಳಮಳ ಉಂಟುಮಾಡಿದ್ದು, “ಈ ಬಾರಿಯಾದರೂ ದೊಡ್ಡ ಮೀನುಗಳು ಪಾರಾಗುವುವಾ?” ಎಂಬ ಪ್ರಶ್ನೆ ನಗರದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

error: Content is protected !!