ಸತೀಶ್ ಬಣಕ್ಕೆ ಹುಕ್ಕೇರಿ ಶಾಕ್..!

ಸತೀಶ್ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ?

ಹುಕ್ಕೇರಿ ನಾಡಿಮಿಡಿತ ಅರಿತುಕೊಳ್ಳಲು ಸತೀಶ್ ಜಾರಕಿಹೊಳಿ ವಿಫಲವಾದರಾ?

ಸತೀಶ್ ಜಾರಕಿಹೊಳಿಯವರಿಗೆ ವಾಸ್ತವತೆ ಬಿಟ್ಟು ತಪ್ಪು ಮಾಹಿತಿ ನೀಡಿದ್ದು ಇದಕ್ಕೆ ಕಾರಣವಾಯಿತಾ?

ಕಿವಿ ಚುಚ್ಚುವವರ ಮಾತು ಕೇಳಿ ವಾಸ್ತವತೆ ಮರೆತುಬಿಟ್ಡರಾ ಸಚಿವ ಸತೀಶ್ ಜಾರಕಿಹೊಳಿ.

ಬೆಳಗಾವಿ.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಬಣ ಭರ್ಜರಿ ಜಯ ಸಾಧಿಸಿದ್ದು, ಸಚಿವ ಸತೀಶ್ ಜಾರಕಿಹೊಳಿ ಬಣಕ್ಕೆ ದೊಡ್ಡ ಆಘಾತ ತಂದಿದೆ.
ಈ ಸೋಲು ಕೇವಲ ಸಹಕಾರಿ ಕ್ಷೇತ್ರಕ್ಕೆ ಸೀಮಿತವಾಗದೇ, ಮುಂದಿನ ರಾಜಕೀಯ ಸಮೀಕರಣಗಳತ್ತ ಕಣ್ಣು ಹಾಯಿಸುವಂತಾಗಿದೆ.

  1. ಜಾರಕಿಹೊಳಿ ಬಣದ ತಪ್ಪು ಅಂದಾಜು

ಚುನಾವಣೆಯನ್ನು ಸಚಿವ ಸತೀಶ್ ಜಾರಕಿಹೊಳಿ ಪ್ರತಿಷ್ಠೆಯ ಪ್ರಶ್ನೆ ಮಾಡಿಕೊಂಡಿದ್ದರು. ಆದರೆ ನೆಲಮಟ್ಟದ ನಾಡಿದ್ರಷ್ಟಿ ಬಿಟ್ಟು “ಕಿವಿ ಚುಚ್ಚುವವರ ಸಲಹೆ” ಮೇಲೆ ಅವರು ಅವಲಂಬಿತರಾಗಿದ್ದು, ಈ ಸೋಲಿಗೆ ಕಾರಣವಾಯಿತು. ಅದೆಲ್ಲದರ ಪರಿಣಾಮವಾಗಿ, ಕಾರ್ಯಕರ್ತರ ಮನಸ್ಥಿತಿ ಸಂಪೂರ್ಣವಾಗಿ ಅರಿತುಕೊಳ್ಳಲು ವಿಫಲರಾದರು.

  1. ಹೊರಗಿನವರ ಹಸ್ತಕ್ಷೇಪ – ಲಾಭಕ್ಕಿಂತ ನಷ್ಟ

ಚುನಾವಣಾ ಪ್ರಚಾರದಲ್ಲಿ ಹೊರಗಿನವರ ಹಸ್ತಕ್ಷೇಪ ಹೆಚ್ಚಾಗಿತ್ತು. ಹುಕ್ಕೇರಿಯ ಸಾಂಪ್ರದಾಯಿಕ ಸಮೀಕರಣದಲ್ಲಿ ಇದು “ಬಾಹ್ಯ ಹಸ್ತಕ್ಷೇಪ” ಎಂಬ ಭಾವನೆ ಮೂಡಿಸಿ ಸ್ಥಳೀಯರಲ್ಲಿ ಅಸಮಾಧಾನ ಹುಟ್ಟಿಸಿತು. ಹುಕ್ಕೇರಿ ತಾಲೂಕಿನ‌ ಹಳ್ಳಿಯಲ್ಲಿ ಬೆಳಗಾವಿಯ‌ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ಆಯಿಷಾ ಸೆಡ್ಡು ಹೊಡೆದಿದ್ದು ಸಹ ಸೋಲಿಗೆ ಪ್ರಮುಖ ಕಾರಣ ಅದೆ ಸಮಯದಲ್ಲಿ ಕತ್ತಿ ಬಣವು “ನಾವು ಸ್ಥಳೀಯರ ಬಣ” ಎಂಬ ಸಂದೇಶವನ್ನು ಬಲಪಡಿಸಲು ಯಶಸ್ವಿಯಾಯಿತು.

  1. ಕತ್ತಿ ಬಣದ ನೆಲಮಟ್ಟದ ಶಕ್ತಿ

ರಮೇಶ ಕತ್ತಿ ಬಣವು ಪ್ರಬಲ ಸಂಘಟನೆ, ಹಳೆಯ ಕಾರ್ಯಕರ್ತರ ನಿಷ್ಠೆ ಮತ್ತು ಸಮುದಾಯದ ಏಕತೆ ಎಂಬ ಮೂರು ಅಸ್ತ್ರಗಳನ್ನು ಬಳಸಿಕೊಂಡಿತು. ಈ ಬಾರಿ ಚುನಾವಣೆಯಲ್ಲಿ ಸಮಗ್ರ ಕಾರ್ಯತಂತ್ರ ಮತ್ತು ವ್ಯಕ್ತಿಗತ ಸಂಪರ್ಕವನ್ನು ಕತ್ತಿ ಶಿಬಿರ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.

  1. ಸೋಲಿನ ತಾತ್ಪರ್ಯ

ಈ ಫಲಿತಾಂಶವು ಜಾರಕಿಹೊಳಿ ಬಣದ ಅಜೇಯತೆ ಕಲ್ಪನೆಗೆ ದೊಡ್ಡ ಬಿರುಕು ತಂದಿದೆ.

ಸಹಕಾರಿ ಕ್ಷೇತ್ರದಲ್ಲಿ ಕತ್ತಿ ಬಣವು ಮರುಸ್ಥಾಪನೆಯ ಹಾದಿ ಹಿಡಿದಿದೆ.

ಮುಂದಿನ ಚುನಾವಣೆಗಳ ಮೇಲೆ ಇದು ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

  1. ರಾಜಕೀಯ ಭವಿಷ್ಯದ ಸಂಕೇತ

ಈ ಫಲಿತಾಂಶದಿಂದ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಜಾರಕಿಹೊಳಿ vs ಕತ್ತಿ ಪೈಪೋಟಿ ಮತ್ತಷ್ಟು ತೀವ್ರಗೊಳ್ಳಲಿದೆ. ಕತ್ತಿ ಬಣವು ಸಂಘಟನೆಗೆ ಬಲ ಸಿಕ್ಕಂತೆಯೇ, ಜಾರಕಿಹೊಳಿ ಬಣವು ತಮ್ಮ ತಂತ್ರ ಮರುಪರಿಶೀಲನೆ ಮಾಡುವ ಅಗತ್ಯಕ್ಕೆ ಬಿದ್ದಿದೆ.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಫಲಿತಾಂಶ ಕೇವಲ ಒಂದು ಸಂಘದ ನಿರ್ದೇಶಕರ ಆಯ್ಕೆಯಷ್ಟೇ ಅಲ್ಲ, ಅದು ಸ್ಥಳೀಯ ಸಮೀಕರಣಗಳನ್ನು ಕಡೆಗಣಿಸುವ ಅಪಾಯ, ಹೊರಗಿನ ಪ್ರಭಾವದ ಮಿತಿಯ ಅರಿವು, ಮತ್ತು ನೆಲಮಟ್ಟದ ನಿಷ್ಠೆಯ ಬಲ ಎಂಬ ಮೂರು ಪಾಠಗಳನ್ನು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!