Headlines

‘ರಾಣಿ’ ಚನ್ನರಾಜ ಕೈಗೆ ಸಿಕ್ಕರೆ..!?

ಮಲಪ್ರಭಾ ಶುಗರ್ಸ್: ಅಧಿಕಾರ ಹಟ್ಟಿಹೊಳಿ ಕೈಗೆ ಸಿಕ್ಕರೆ?

ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ ಕೈಗೆ ಬಿದ್ದರೆ, ಅದು ಒಂದು ಕಾರ್ಖಾನೆಯ ಚುನಾವಣೆ ಫಲಿತಾಂಶವಲ್ಲ – ಬೆಳಗಾವಿ ರಾಜಕೀಯದಲ್ಲಿ ಹೊಸ ಸಮೀಕರಣ ಹೊಸ ಅಧ್ಯಾಯದ ಆರಂಭ. ಹೆಬ್ಬಾಳಕರ ಕುಟುಂಬದ ಬಲವರ್ಧನೆ, ಜಾರಕಿಹೊಳಿ–ಕತ್ತಿ ಪ್ರಭಾವಕ್ಕೆ ಪರೋಕ್ಷವಾಗಿ ಸವಾಲು ಎನ್ನಬಹುದು ಮತ್ತು ರೈತರ ನಿರೀಕ್ಷೆಯ ದೊಡ್ಡ ಹೊಣೆಗಾರಿಕೆ . ಇವೆಲ್ಲದರ ಪರೀಕ್ಷಾ ವೇದಿಕೆ ಇದೇ ಕಾರ್ಖಾನೆ.

M K HUBLIರಾಣಿ ಎಂದೇ ಕರೆಯಲ್ಪಡುವ ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ ಕೈಗೆ ಸಿಕ್ಕರೆ ಏನಾಗಬಹುದು?,

ಹೆಬ್ಬಾಳಕರ ಕುಟುಂಬದ ಬಲವರ್ಧನೆ, ಜಾರಕಿಹೊಳಿ–ಕತ್ತಿ ಪ್ರಭಾವಕ್ಕೆ ಪರೋಕ್ಷವಾಗಿ ಸವಾಲು ಎನ್ನಬಹುದು ಮತ್ತು ರೈತರ ನಿರೀಕ್ಷೆಯ ದೊಡ್ಡ ಹೊಣೆಗಾರಿಕೆ . ಇವೆಲ್ಲದರ ಪರೀಕ್ಷಾ ವೇದಿಕೆ ಇದೇ ಕಾರ್ಖಾನೆ.

ಜಾರಕಿಹೊಳಿ–ಕತ್ತಿ ಪ್ರಭಾವಕ್ಕೆ ಸವಾಲು

ಇಲ್ಲಿಯವರೆಗೆ ಬೆಳಗಾವಿ ರಾಜಕೀಯವನ್ನು ಜಾರಕಿಹೊಳಿ–ಕತ್ತಿ ಕುಟುಂಬಗಳು ಎರಡೂ ಧ್ರುವಗಳಂತೆ ಹಿಡಿದಿಟ್ಟಿವೆ.

ಜಾರಕಿಹೊಳಿ: ಹುಕ್ಕೇರಿ–ಗೋಕಾಕ್ ವಲಯದಲ್ಲಿ ಸಹಕಾರಿ ಸಂಸ್ಥೆಗಳ ಮೇಲೆ ಕಠಿಣ ಹಿಡಿತ.

ಕತ್ತಿ: ಚಿಕ್ಕೋಡಿ–ನಿಪ್ಪಾಣಿ belt‌ನಲ್ಲಿ ಕೃಷಿ–ಸಹಕಾರಿ ವಲಯದ ಬಲಿಷ್ಠ ಆಧಾರ.
ಈ ಮಧ್ಯೆ ಮಲಪ್ರಭಾ ಶುಗರ್ಸ್ ಹಟ್ಟಿಹೊಳಿ ಕೈಗೆ ಹೋದರೆ, “ಮೂರನೇ ಧ್ರುವ” ಬೆಳಗಾವಿ ಸಹಕಾರಿ ರಾಜಕೀಯದಲ್ಲಿ ಉದಯವಾಗಲಿದೆ. ಇದರಿಂದ ಮುಂದಿನ ಚುನಾವಣೆಗಳಲ್ಲಿ ಲೆಕ್ಕಾಚಾರವೇ ಬದಲಾಗುವ ಸಾಧ್ಯತೆ.

ರೈತರ ನಿರೀಕ್ಷೆಯ ಕಠಿಣ ಪರೀಕ್ಷೆ

ಮಲಪ್ರಭಾ ಕಾರ್ಖಾನೆಯ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಸತ್ಯ. ಬಾಕಿ, ಸಾಲ, ಉತ್ಪಾದನಾ ಕುಸಿತ – ಎಲ್ಲವೂ ರೈತರ ಬೆನ್ನೆಲುಬಿಗೆ ಹೊಡೆತ ನೀಡಿವೆ. ಹಟ್ಟಿಹೊಳಿ ಆಯ್ಕೆಯಾದರೆ, ರೈತರ ಪ್ರಥಮ ಬೇಡಿಕೆ:
ಬ “ಕಾರ್ಖಾನೆ ಉಳಿಸಿ, ನಮ್ಮ ಬೆಳೆ ಉಳಿಸಿ”

ಇದನ್ನು ಪೂರೈಸಿದರೆ ಅವರು “ರೈತರ ನಾಯಕ” ಎಂಬ ಬಿರುದು ಪಡೆದುಕೊಳ್ಳಬಹುದು. ಇಲ್ಲವಾದರೆ ಆಕ್ರೋಶ ನೇರವಾಗಿ ಹೆಬ್ಬಾಳಕರ ಕುಟುಂಬದತ್ತ ತಿರುಗುವುದು ಅನಿವಾರ್ಯ.

2028ರ ರಾಜಕೀಯ ಲೆಕ್ಕಾಚಾರ

ಮುಂದಿನ ವಿಧಾನಸಭೆ–ಲೋಕಸಭೆ ಚುನಾವಣೆಗಳತ್ತ ಎಲ್ಲಾ ರಾಜಕೀಯ ಕುಟುಂಬಗಳ ದೃಷ್ಟಿ ನೆಟ್ಟಿದೆ.

ಮಲಪ್ರಭಾ ಕಾರ್ಖಾನೆಯ ಹಿಡಿತ,

ಸಾವಿರಾರು ರೈತರ ಮತಬ್ಯಾಂಕ್,

ಸಹಕಾರಿ ಬ್ಯಾಂಕು–ಮಾರುಕಟ್ಟೆ ಸಂಸ್ಥೆಗಳ ಜಾಲ –

ಈ ಎಲ್ಲವೂ ಹಟ್ಟಿಹೊಳಿ ಕೈಗೆ ಬಂದರೆ, 2028ರಲ್ಲಿ ಜಿಲ್ಲೆಯ ರಾಜಕೀಯ ಸಮೀಕರಣವೇ ಬದಲಿಸಬಲ್ಲ ಬಲವಾಗಿ ಪರಿಣಮಿಸಲಿದೆ

Leave a Reply

Your email address will not be published. Required fields are marked *

error: Content is protected !!