ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಸಿಡಿಲಿಗೆ ಕತ್ತಿ ಬಣ ತತ್ತರ! — ತಾಲೂಕು ಗೆಲುವು ಸಾಕಾಗಲಿಲ್ಲ, ಜಿಲ್ಲಾ ಡಿಸಿಸಿ ಆರಂಭದಲ್ಲೇ ಹಿನ್ನೆಡೆ ಅನುಭವಿಸಿದ ಕತ್ತಿ ಬಣ.

ಬೆಳಗಾವಿ ರಾಜಕೀಯ ಅಂಗಳದಲ್ಲಿ ಮತ್ತೊಮ್ಮೆ “ಜಾರಕಿಹೊಳಿ ಎಫೆಕ್ಟ್” ಸಿಡಿಲಿನಂತೆ ಬೀದಿಯಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಕತ್ತಿ ನೇತೃತ್ವದ ಬಣ ತಾಲೂಕು ಮಟ್ಟದಲ್ಲಿ ಅಲ್ಪ ಮುನ್ನಡೆ ಸಾಧಿಸಿದರೂ, ಜಿಲ್ಲಾ ಮಟ್ಟದಲ್ಲಿ ಜಾರಕಿಹೊಳಿ ಬ್ರದರ್ಸ್ ಬಲಕ್ಕೆ ತತ್ತರಿಸಿ ಹಿನ್ನಡೆ ಕಂಡಿದೆ.

ಬಿಜೆಪಿಯ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್‌ನ ಸಚಿವ ಸತೀಶ್ ಜಾರಕಿಹೊಳಿ ಕೈಜೋಡಿಸಿದ ಕ್ಷಣದಿಂದಲೇ ಈ ಚುನಾವಣೆಯ ದಿಕ್ಕು ತಿರುಗಿತು. ಪಕ್ಷಭೇದ ಮರೆತು ಜಾರಕಿಹೊಳಿ ಸಹೋದರರು ರಚಿಸಿದ ಈ ಬಣ, ಸಹಕಾರ ಕ್ಷೇತ್ರದಲ್ಲಿ ಅಪ್ರತಿಮ ಶಕ್ತಿಯೆಂದು ತೋರಿಸಿ ಕೊಟ್ಟಿದೆ.

ಜಾರಕಿಹೊಳಿ ಬಣದ ಆರು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಗೆಲುವು ಸಾಧಿಸಿದ್ದು, ಕತ್ತಿ ಬಣಕ್ಕೆ ರಾಜಕೀಯ ಹಾಗೂ ಮಾನಸಿಕವಾಗಿ ದೊಡ್ಡ ಆಘಾತ ತಂದಿದೆ.
ಅವಿರೋಧವಾಗಿ ಆಯ್ಕೆಯಾದವರು:
🔹 ಚಿಕ್ಕೋಡಿಯಿಂದ ಗಣೇಶ್ ಹುಕ್ಕೇರಿ

🔹 ಯರಗಟ್ಟಿಯಿಂದ ವಿಶ್ವಾಸ ವೈದ್ಯ

🔹 ಮೂಡಲಗಿಯಿಂದ ನೀಲಕಂಠ
🔹 ಸವದತ್ತಿಯಿಂದ ವಿರೂಪಾಕ್ಷ ಮಾಮನಿ
🔹 ಗೋಕಾಕ್‌ನಿಂದ ಅಮರನಾಥ್ ರಮೇಶ್ ಜಾರಕಿಹೊಳಿ

🔹 ಬೆಳಗಾವಿಯಿಂದ ರಾಹುಲ್ ಸತೀಶ್ ಜಾರಕಿಹೊಳಿ

ರಾಹುಲ್ ಜಾರಕಿಹೊಳಿ
ಈ ಫಲಿತಾಂಶದೊಂದಿಗೆ ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆಯ ರಾಜಕೀಯ ಪ್ರವೇಶ ಅಧಿಕೃತವಾಗಿ ಆರಂಭವಾಗಿದೆ. ರಾಹುಲ್ ಮತ್ತು ಅಮರನಾಥ್ ಅವಿರೋಧವಾಗಿ ಆಯ್ಕೆಯಾದದ್ದು ಕುಟುಂಬದ ಭವಿಷ್ಯ ರಾಜಕೀಯ ತಂತ್ರದ ಭಾಗವೆಂದೇ ವಲಯಗಳಲ್ಲಿ ಚರ್ಚೆ.
ಇದೇ ವೇಳೆ, ರಮೇಶ್ ಕತ್ತಿ ಬಣ ತೀವ್ರ ನಿರಾಶೆಗೊಂಡಿದ್ದು, ತಾಲೂಕು ಮಟ್ಟದ ಗೆಲುವು ಜಿಲ್ಲೆಯ ಹಿನ್ನಡೆಯ ಎದುರು ಅಲ್ಪದಾಗಿ ಬಿಟ್ಟಿದೆ. ಕತ್ತಿ ಬಣದ ಕಣ್ಮುಂದೆ ಸಹಕಾರ ರಾಜಕೀಯದ ನಕ್ಷೆ ಬದಲಾಗುತ್ತಿರುವುದು ಸ್ಪಷ್ಟ.
ಒಂದಾದ ಜಾರಕಿಹೊಳಿ ಬ್ರದರ್ಸ್ ಸಿಡಿಲು ಈಗ ಕೇವಲ ಡಿಸಿಸಿ ಬ್ಯಾಂಕ್‌ನಲ್ಲೇ ಅಲ್ಲ — ಬೆಳಗಾವಿ ರಾಜಕೀಯದ ಪೈಪೋಟಿಯನ್ನೇ ಹೊಸ ಹಾದಿಗೆ ಎಳೆದಿದೆ!