Headlines

ಸಿದ್ದರಾಮಯ್ಯನ ಬಳಿಕ ‘ಜಾರಕಿಹೊಳಿ ಯುಗ’ ಆರಂಭ?”

ಎಂಎಲ್‌ಸಿ ಡಾ. ಯತೀಂದ್ರನ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಹೊಸ ಚರ್ಚೆ

ತಂದೆಯವರ ಸಿದ್ಧಾಂತದ ಮುಂದುವರಿಕೆ ಸತೀಶ್ ಕೈಯಲ್ಲಿ’ — ಎಂಎಲ್‌ಸಿ ಡಾ. ಯತೀಂದ್ರ ಹೇಳಿಕೆ ರಾಜಕೀಯ ವಲಯ ಕಾದು ನೋಡುವಂತಿದೆ

ಬೆಳಗಾವಿ,
ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ವೇದಿಕೆ ಸಿಕ್ಕಿದೆ.

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕೊನೆಯ ಹಂತದಲ್ಲಿದೆ, 2028ರ ಬಳಿಕ ಸೈದ್ಧಾಂತಿಕ ನಾಯಕತ್ವವನ್ನು ಮುಂದುವರಿಸಬಲ್ಲವರು ಸತೀಶ್ ಜಾರಕಿಹೊಳಿ” ಎಂಬ ಎಂಎಲ್‌ಸಿ ಡಾ. ಯತೀಂದ್ರ ಅವರ ಈ ಹೇಳಿಕೆ, ಕಾಂಗ್ರೆಸ್ ಒಳಗಡೆ ಹೊಸ ನಾಯಕತ್ವದ ಸಾಧ್ಯತೆಗಳ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಆದರೆ ಯತೀಂದ್ರ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಸಹ ಕೊಟ್ಟರು. — “ನಾನು ರಾಜಕೀಯ ಉತ್ತರಾಧಿಕಾರಿಯ ವಿಷಯ ಮಾತನಾಡಿಲ್ಲ, ಆದರೆ ನಮ್ಮ ತಂದೆಯವರು ನಂಬಿದ ಸಾಮಾಜಿಕ ನ್ಯಾಯ, ಸಮಾನತೆಯ ತತ್ವದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕೂಡ ನಂಬಿಕೆ ಇಟ್ಟುಕೊಂಡಿದ್ದಾರೆ. 2028ರ ಬಳಿಕ ಅಂತಹ ವೈಚಾರಿಕ ನಾಯಕರು ಪಕ್ಷವನ್ನು ಮುನ್ನಡೆಸಲಿ ಎಂಬ ಆಶಯದಿಂದಲೇ ಹೇಳಿದ್ದೇನೆ” ಎಂದಿದ್ದಾರೆ.

2028ರಲ್ಲಿ ತಂದೆಯವರು ಸ್ಪರ್ಧಿಸಲಾರರು” – ಯತೀಂದ್ರ
ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಮುಂದಿನ ಚುನಾವಣಾ ಯೋಜನೆ ಬಿಚ್ಚಿಟ್ಟಿದ್ದಾರೆ.
“2028ರ ವಿಧಾನಸಭಾ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸಲಾರರು. ಅವರು ನಿವೃತ್ತಿಯಾದ ನಂತರವೂ, ಪಕ್ಷದ ಒಳಗೆ ಜಾತ್ಯತೀತ ಸಿದ್ಧಾಂತವನ್ನು ಮುಂದುವರಿಸುವ ನಾಯಕರ ಕೊರತೆ ಇಲ್ಲ. ಆ ಪೈಕಿ ಸತೀಶ್ ಜಾರಕಿಹೊಳಿ ಪ್ರಮುಖರು” ಎಂದಿದ್ದಾರೆ.

‘ *ಸಿದ್ಧಾಂತದ ರಾಜಕಾರಣ’ದ ಹೊಸ ಹಾದಿ*
ಡಾ. ಯತೀಂದ್ರನ ಹೇಳಿಕೆಯು ಕೇವಲ ವೈಯಕ್ತಿಕ ಅಭಿಪ್ರಾಯವಷ್ಟೇ ಅಲ್ಲ — ಅದು ಪಕ್ಷದ ಒಳಗಿನ ಶಕ್ತಿ ಸಮತೋಲನದ ಸೂಚನೆಯಂತಾಗಿದೆ. “ಸೈದ್ಧಾಂತಿಕ ರಾಜಕಾರಣ ಮಾಡುವವರ ಪೈಕಿ ಸತೀಶ್ ಒಬ್ಬರು. ಅವರು ಮುಂದಿನ ತಲೆಮಾರಿಗೆ ಮಾರ್ಗದರ್ಶನ ನೀಡಬಲ್ಲರು” ಎಂದಿರುವುದು, ಸಿದ್ದರಾಮಯ್ಯ ನಂತರದ ಕಾಂಗ್ರೆಸ್ ನಾಯಕತ್ವದಲ್ಲಿ ‘ಜಾರಕಿಹೊಳಿ ಶಕ್ತಿ’ ಪ್ರಭಾವಶಾಲಿಯಾಗುವ ಲಕ್ಷಣ ಎಂದು ರಾಜಕೀಯ ವಲಯ ವಿಶ್ಲೇಷಿಸುತ್ತದೆ.

*ನವೆಂಬರ್ ಕ್ರಾಂತಿ’ ಕೇವಲ ಊಹಾಪೋಹ!*
ಇತ್ತೀಚಿನ ‘ನವೆಂಬರ್ ಕ್ರಾಂತಿ’ ಅಥವಾ ನಾಯಕತ್ವ ಬದಲಾವಣೆ ಕುರಿತ ಮಾತುಗಳು ಸಂಪೂರ್ಣ ಊಹಾಪೋಹ ಎಂದು ಯತೀಂದ್ರ ಸ್ಪಷ್ಟನೆ ನೀಡಿದ್ದಾರೆ. “ಪಕ್ಷದೊಳಗೆ ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಆದರೆ ಸಿದ್ದರಾಮಯ್ಯನ ನಂತರ ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲ ನಾಯಕರಿಗೇ ಇದೆ” ಎಂದು ಹೇಳಿದ್ದಾರೆ.
ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ಕನಕದಾಸರ ಮೂರ್ತಿ ಲೋಕಾರ್ಪಣೆ ವೇಳೆ ಯತೀಂದ್ರ ಮಾತನಾಡಿದ್ದು ವಿಶೇಷ ಸಂದರ್ಭ.
“ನಮ್ಮ ತಂದೆಯವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ಪ್ರಗತಿಪರ, ವೈಚಾರಿಕ ಮತ್ತು ಜನಪರ ನಾಯಕತ್ವ ಮುಂದುವರಿಸಬೇಕು. ಸತೀಶ್ ಜಾರಕಿಹೊಳಿ ಅಂತಹ ಜವಾಬ್ದಾರಿ ನಿಭಾಯಿಸಬಲ್ಲರು” ಎಂದು ಅವರು ಬಣ್ಣಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!