ನಾಡದ್ರೋಹಿ ಎಂಇಎಸ್‌ಗೆ ‘ಬ್ರೇಕ್’ ಬೀಳಲಿದೆಯೇ
ಬೆಳಗಾವಿ ಪೊಲೀಸರಿಗೆ ಅಗ್ನಿಪರೀಕ್ಷೆ! ನಾಡದ್ರೋಹಿ ಎಂಇಎಸ್‌ಗೆ ‘ಬ್ರೇಕ್’ ಬೀಳಲಿದೆಯೇ? ಬೆಳಗಾವಿ:ಈಗ ಇಡೀ ರಾಜ್ಯದ ಕಣ್ಣು ಗಡಿನಾಡ ಬೆಳಗಾವಿಯತ್ತ ನೆಟ್ಟಿದೆ.ನವೆಂಬರ್ 1 — ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡ ಧ್ವಜಗಳ ಹಿರಿಮೆ ತೇಲಬೇಕಾದ ದಿನವೇ ಬೆಳಗಾವಿಯಲ್ಲಿ “ಕರಾಳ ದಿನ”ದ ಹೆಸರಿನಲ್ಲಿ ನಾಡದ್ರೋಹದ ನಾಟಕ ನಡೆಯುತ್ತಿರುವುದು ನಿಜಕ್ಕೂ ಲಜ್ಜಾಸ್ಪದ.ವರ್ಷದಿಂದ ವರ್ಷಕ್ಕೆ “ಅನುಮತಿ ಇಲ್ಲ” ಎಂದು ಹೇಳುತ್ತಾ ಕೊನೆಯ ಕ್ಷಣದಲ್ಲಿ ಎಂಇಎಸ್ ಪುಂಡರಿಗೆ ಕಾನೂನು ಬಾಹಿರವಾಗಿ ಮೆರವಣಿಗೆ ನಡೆಸಲು ಅವಕಾಶ ನೀಡಿರುವ ಅಧಿಕಾರಿಗಳ ನಿಲುವು ಈಗ ಪ್ರಶ್ನಾರ್ಥಕವಾಗಿದೆ. ಇದೇ ವೇಳೆ, “ಕರಾಳ ದಿನ”…

