ಕರಾಳ ದಿನಕ್ಕೆ – ಅನುಮತಿ ಕೊಟ್ಟರೆ ನುಗ್ತೇವೆ
ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ರಾಜ್ಯೋತ್ಸವದ ಮುನ್ನವೇ ಕಾವೇರಿದ ವಾತಾವರಣ ನಿರ್ಮಾಣವಾಗುತ್ತಿದೆ –ಗಡಿನಾಡ ಬೆಳಗಾವಿ ರಾಜ್ಯೋತ್ಸವದ ಸಂಭ್ರಮಕ್ಕೆ ಸಜ್ಜಾಗಿರುವ ಈ ವೇಳೆಯಲ್ಲೇ, ನಾಡದ್ರೋಹಿ ಎಂಇಎಸ್ ಸಂಘಟನೆಯವರು “ಕರಾಳ ದಿನ”ದ ಹೆಸರಿನಲ್ಲಿ ಮತ್ತೆ ನಾಡದ್ರೋಹದ ನಾಟಕಕ್ಕೆ ವೇದಿಕೆ ಸಿದ್ಧಪಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಪೊಲೀಸರು ಮೇಲ್ನೋಟಕ್ಕೆ “ಅನುಮತಿ ಇಲ್ಲ” ಎನ್ನುತ್ತಿದ್ದರೂ, ಅವರ ನಿಲುವು “ಮೌನ ಸಮ್ಮತಿ”ಯಂತೆಯೇ ಕಾಣುತ್ತಿದೆ. ನಾಡದ್ರೋಹಿಗಳ ಚಟುವಟಿಕೆಗಳ ಮೇಲೆ ಸ್ಪಷ್ಟ ಕ್ರಮಕೈಗೊಳ್ಳದಿರುವ ಪೊಲೀಸರ ಈ ನಿಷ್ಕ್ರಿಯತೆ ಈಗ ಕನ್ನಡ ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ. *ಕರಾಳ ದಿನಕ್ಕೆ ಬ್ರೇಕ್…

