ಬೆಳಗಾವಿ ರೆಡ್ ಕ್ರಾಸ್ ಸೊಸೈಟಿ ಚುನಾವಣೆ:
ಡಾ. ಢಾಂಗಿ ಪೆನಲ್‌ಗೆ ಭರ್ಜರಿ ವಿಜಯ –
ಬೆಳಗಾವಿ.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳಗಾವಿ ಶಾಖೆಯ ತ್ರೈವಾರ್ಷಿಕ ಚುನಾವಣೆಯಲ್ಲಿ ಡಾ. ವಿ.ಡಿ. ಢಾಂಗಿ ನೇತೃತ್ವದ ಪೆನಲ್ ಭರ್ಜರಿ ಗೆಲುವು ಸಾಧಿಸಿದೆ. ಈ ಪೆನಲ್‌ನ ಎಲ್ಲ ಹತ್ತು ಅಭ್ಯರ್ಥಿಗಳು ಮತ ಎಣಿಕೆಯಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡು ಜಯಶಾಲಿಗಳಾಗಿದ್ದಾರೆ
ಚುನಾವಣೆ ಶನಿವಾರ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಡಿಟೋರಿಯಂ ಸಭಾಂಗಣದಲ್ಲಿ ಜರುಗಿತು.
ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನದಲ್ಲಿ ಸದಸ್ಯರಿಂದ ಉತ್ತಮ ಸ್ಪಂದನೆ ದೊರಕಿತು.
ಸಂಜೆ 4.30ಕ್ಕೆ ಮತ ಎಣಿಕೆ ಪ್ರಾರಂಭವಾಗಿ, ರಾತ್ರಿ 7.30ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಯಿತು. ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದರು

ವಿಜಯಶಾಲಿಗಳ ಪಟ್ಟಿ ಮತ್ತು ಪಡೆದ ಮತಗಳು
- ಡಾ. ವೆಂಕಪ್ಪ ಢಾಂಗಿ – 328 ಮತಗಳು
- ಪ್ರವೀಣ ಹಿರೇಮಠ – 310
- ಪ್ರಿಯಾ ಪುರಾಣಿಕ – 310
- ಡಾ. ಸಂಜಯ ಸಿದ್ದಣ್ಣವರ – 307
- ಅಶೋಕ ಬದಾಮಿ – 303
- ದತ್ತಾತ್ರೇಯ ಮಿಸಾಳೆ – 303
- ರವೀಂದ್ರ ತೋಟಿಗೇರ – 300
- ಶಿವಬಸಪ್ಪ ಸಿದ್ನಾಳ – 300
- ಶಿವಾನಂದ ಮೂಲಿಮಣಿ – 298
- ಲೆ. ಕರ್ನಲ್ ವಿನೋದಿನಿ ಶರ್ಮಾ – 289
ಆರಂಭದಿಂದಲೇ ಡಾ. ಢಾಂಗಿ ಪೆನಲ್ ಮುನ್ನಡೆ ಕಾಯ್ದುಕೊಂಡು ಚುನಾವಣೆಯಲ್ಲಿ ಪ್ರಬಲ ಸ್ಥಾನ ಗಳಿಸಿತು.
ಮುಖ್ಯ ಚುನಾವಣಾಧಿಕಾರಿಗಳಾಗಿ ಬಿಮ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದು ಹುಲ್ಲೋಳಿ ಅವರು ಕರ್ತವ್ಯ ನಿರ್ವಹಿಸಿದರು.
ಸಹಾಯಕ ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಝಬಿವುಲ್ಲಾ ಖಾಜಿ ಇದ್ದರು.
ಚುನಾವಣಾ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ಜರುಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ.
ರಾಜ್ಯ ವೀಕ್ಷಕರಾಗಿ ಧಾರವಾಡ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಮಹಾಂತೇಶ ವೀರಾಪುರ ಆಗಮಿಸಿ ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು.

