ಎಂಇಎಸ್ ನಿಷೇಧಕ್ಕೆ ಗಂಭೀರ ಚಿಂತನೆ

ನಾಡವಿರೋಧಿ ಚಟುವಟಿಕೆ ಸಹಿಸುವುದಿಲ್ಲ”

ರಾಜ್ಯೋತ್ಸವದ ಮಧ್ಯೆ ಕನ್ನಡಾಭಿಮಾನಿ ನಿಲುವಿನಿಂದ ಉಸ್ತುವಾರಿ ಸಚಿವರು ಸ್ಪಷ್ಟತೆ

ಬೆಳಗಾವಿ,
ರಾಜ್ಯೋತ್ಸವದ ಸಂಭ್ರಮದ ನಡುವೆ ಬೆಳಗಾವಿಯಲ್ಲಿ ಭಾಷಾ – ರಾಜಕೀಯ ಚರ್ಚೆಗೆ ಬಣ್ಣ ತುಂಬಿದ ಘಟನೆಗಳು ನಡೆದಿವೆ. ನಾಡವಿರೋಧಿ ಘೋಷಣೆ ಹಾಕಿದ ಎಂಇಎಸ್ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, “ಇನ್ನು ಮುಂದೆ ಇಂತಹ ನಾಡವಿರೋಧಿ ಚಟುವಟಿಕೆಗಳಿಗೆ ಅವಕಾಶ ಇರದು. ಅಗತ್ಯವಿದ್ದರೆ ಸಂಘಟನೆ ನಿಷೇಧದ ದಾರಿಯಲ್ಲೂ ಸರ್ಕಾರ ಯೋಚಿಸಲಿದೆ,” ಎಂದು ಎಚ್ಚರಿಸಿದರು.
—-
ಕರಾಳ ದಿನ”ದ ಹೆಸರಿನಲ್ಲಿ ನಾಡವಿರೋಧಿ ಆಟ –

ರಾಜ್ಯೋತ್ಸವ ಧ್ವಜಾರೋಹಣದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು,

“ಎಂಇಎಸ್ ನಾಯಕರಿಗೆ ಈ ಬಾರಿ ಕರಾಳ ದಿನಾಚರಣೆಗೆ ಯಾವುದೇ ಅನುಮತಿ ನೀಡಿರಲಿಲ್ಲ. ಆದರೆ ಪ್ರತಿ ವರ್ಷ ಅವರು ಬೇರೆ ಹೆಸರಿನಲ್ಲಿ ಸಮಾವೇಶ ಆಯೋಜಿಸುತ್ತಾರೆ. ಈ ಬಾರಿ ನಾಡವಿರೋಧಿ ಘೋಷಣೆ ಹಾಕಿರುವುದು ಅತ್ಯಂತ ಗಂಭೀರ ವಿಚಾರ. ಇಂತಹ ಚಟುವಟಿಕೆ ಮುಂದುವರಿದರೆ ಸಂಘಟನೆಯನ್ನು ನಿಷೇಧಿಸುವ ವಿಷಯದಲ್ಲೂ ಸರ್ಕಾರ ತೀವ್ರವಾಗಿ ಚಿಂತಿಸುತ್ತದೆ,” ಎಂದರು.. ಅವರು ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಎಂಇಎಸ್ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲು ನಿರ್ದೇಶನ ನೀಡುವೆ ಎಂದರು.
ಪ್ರವಾಸೋದ್ಯಮದಿಂದ 50 ಲಕ್ಷ ರೂ.”

L“ಈ ಬಾರಿ ರಾಜ್ಯೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದಲೇ 50 ಲಕ್ಷ ರೂ. ಅನುದಾನ ಬಂದಿದೆ. ಜಿಲ್ಲಾಧಿಕಾರಿ ಸಭೆ ಕರೆಯಿ ಆ ಹಣವನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.”
ಬೆಳಗಾವಿಯ ಸಾಂಸ್ಕೃತಿಕ ಪಾರಂಪರ್ಯ ಮತ್ತು ಗಡಿನಾಡದ ಗೌರವ ಹೆಚ್ಚಿಸುವ ಚಟುವಟಿಕೆಗಳಿಗೆ ಈ ಅನುದಾನ ವಿನಿಯೋಗವಾಗುವ ನಿರೀಕ್ಷೆ ಇದೆ.

ಸಹಜ ತಾಂತ್ರಿಕ ದೋಷ”

ರಾಜ್ಯೋತ್ಸವದ ಕವಾಯತು ವೇಳೆ ಧ್ವಜಾರೋಹಣದ ವಾಹನ ನಿಂತುಹೋದ ಘಟನೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ,ಇದು ಕೇವಲ ತಾಂತ್ರಿಕ ದೋಷ. ಇಂತಹವು ಸಹಜವಾಗಿಯೇ ಸಂಭವಿಸುತ್ತವೆ. ಇದನ್ನು ಗಂಭೀರ ಲೋಪ ಎಂದು ಪರಿಗಣಿಸಬಾರದು,” ಎಂದು ಹೇಳಿದರು.

ಪ್ರಶಸ್ತಿ ವಿವಾದಕ್ಕೆ ಸ್ಪಷ್ಟನೆ – “ಕನ್ನಡ ಬಳಕೆಗೆ ಗಮನ

ಮರಾಠ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಬಗ್ಗೆ ವಿವಾದ ಉಂಟಾಗಿದ್ದು, ಅದಕ್ಕೆ ಸ್ಪಷ್ಟನೆ ನೀಡಿದ ಜಾರಕಿಹೊಳಿ,
ಆ ಸಂಸ್ಥೆಯಲ್ಲಿ ಕನ್ನಡ ಬಳಕೆಗೆ ಗಮನ ನೀಡಲಾಗುತ್ತದೆ. ಯಾರೂ ಕನ್ನಡ ವಿರೋಧಿ ಧೋರಣೆಯಲ್ಲಿ ತೊಡಗಬಾರದು ಎಂಬುದು ಸರ್ಕಾರದ ನಿಲುವು,” ಎಂದು ಹೇಳಿದರು

ಶ್ರೀಕೃಷ್ಣದೇವರಾಯ ಪ್ರತಿಮೆಗೆ ಭರವಸೆ

ಕೊಲ್ಹಾಪುರ ವೃತ್ತವನ್ನು ವರ್ಷಗಳ ಹಿಂದೆ “ಶ್ರೀಕೃಷ್ಣದೇವರಾಯ ವೃತ್ತ” ಎಂದು ನಾಮಕರಣ ಮಾಡಲಾಗಿದ್ದರೂ ಪ್ರತಿಮೆ ಸ್ಥಾಪನೆ ಆಗದಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ,

> “ಮಹಾನಗರ ಪಾಲಿಕೆಯಲ್ಲಿ ಚರ್ಚೆ ನಡೆಸಿ ಬೇಡಿಕೆ ಈಡೇರಿಸಲಾಗುವುದು,” ಎಂದು ಸಚಿವರು ಭರವಸೆ ನೀಡಿದರು.

ಸಂಪುಟ ಪುನರ್ ರಚನೆ ವಿಚಾರದಲ್ಲಿ ಸ್ಪಷ್ಟ ನಿಲುವು

ಸಂಪುಟ ಪುನರ್ ರಚನೆ ಕುರಿತಂತೆ ಮಾತನಾಡಿದ ಜಾರಕಿಹೊಳಿ ಈ ವಿಷಯ ಸಂಪೂರ್ಣವಾಗಿ ಹೈಕಮಾಂಡ್‌ನ ನಿರ್ಧಾರಕ್ಕೆ ಒಳಪಟ್ಟಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗಲು ಅರ್ಹರು ಅನೇಕರಿದ್ದಾರೆ, ಆದರೆ ಅವಕಾಶ ಕೇವಲ 34 ಮಂದಿಗೆ ಮಾತ್ರ. ಯಾರನ್ನು ಒಳಪಡಿಸಬೇಕು, ಯಾರನ್ನು ಕೈಬಿಡಬೇಕು ಎಂಬುದು ಪಕ್ಷದ ತೀರ್ಮಾನ. ನನ್ನಿಂದ ಅದಕ್ಕೆ ಹೇಳುವ ಅಧಿಕಾರವಿಲ್ಲ,” ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!