ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ !
ಮಹಾಲಿಂಗಪುರ:ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಕೋಪಗೊಂಡ ರೈತರು ಗುರುವಾರ ಮಹಾಲಿಂಗಪುರದಲ್ಲಿ ಆಕ್ರೋಶದ ಅಗ್ನಿಯನ್ನು ಹಚ್ಚಿದ್ದಾರೆ! ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಶುಕ್ರವಾರದಿಂದ ಕಾರ್ಖಾನೆ ಕಾರ್ಯಾರಂಭ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯವರು ಸುಮಾರು 150 ಟ್ರ್ಯಾಕ್ಟರ್‌ಗಳಲ್ಲಿ ಕಬ್ಬು ತುಂಬಿಸಿ ಇಟ್ಟುಕೊಂಡಿದ್ದರು. ಆದರೆ ಹಿಂದಿನ ಬಾಕಿ ಹಣ ಬಿಡುಗಡೆ ಕುರಿತು ಯಾವುದೇ ಖಚಿತ ಭರವಸೆ ನೀಡದಿರುವುದು, ಜೊತೆಗೆ ಪ್ರತಿ ಟನ್‌ಗೆ ಕೇವಲ…

