ಧೂಮ್ ಸ್ಟೈಲ್ ಕಳ್ಳನ‌ ಬಂಧಿಸಿದ ಯಮಕನಮರಡಿ ಪೊಲೀಸ್

₹95 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ನಗದು ಮತ್ತು ವಾಹನ ವಶ –

ಜಿಲ್ಲಾ ಪೊಲೀಸ್ ತಂಡದ ಶ್ಲಾಘನೀಯ ಪತ್ತೆ.

ಬೆಳಗಾವಿ: ಧೂಮ್ ಚಲನ ಚಿತ್ರದ ಮಾದರಿಯಲ್ಲಿ ಕಳ್ಳತನ ಮಾಡಿ ಫರಾರಿಯಾಗುತ್ತಿದ್ದ ಪಕ್ಕಾ ಕಳ್ಳನನ್ನು ಚಾಲಾಕಿ ಯಮಕನಮರಡಿ ಸಿಎಸ್ ಐ ಜಾವೇದ್ ಮುಷಾಪುರೆ ನೇತೃತ್ವದ ತಂಡ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಹಲವು ಕಳ್ಳತನಗಳಲ್ಲಿ ತೊಡಗಿದ್ದ ಕುಖ್ಯಾತ ಮನೆಗಳ್ಳ ಸುರೇಶ್ ಮಾರುತಿ ನಾಯಿಕ ಸನದಿ (37, ಹೋಸೂರು, ಬೆಳಗಾವಿ) ಬಂಧನಕ್ಕೆ ಒಳಗಾಗಿದ್ದು, ಪೊಲೀಸರು ₹95 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
*ಕಳ್ಳತನದ ಘಟನೆಯ ವಿವರಣೆ*
ಅಕ್ಟೋಬರ್ 16ರಿಂದ 22ರ ನಡುವಿನ ಅವಧಿಯಲ್ಲಿ ಯಮಕನಮರಡಿ ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು ಟ್ರೇಜರಿ ಕಬಟುಗಳನ್ನು ಒಡೆದು, ₹89.60 ಲಕ್ಷ ಮೌಲ್ಯದ 128 ತೊಲೆ (1,280 ಗ್ರಾಂ) ಬಂಗಾರದ ಆಭರಣಗಳು, ₹5.95 ಲಕ್ಷ ಬೆಳ್ಳಿಯ ಆಭರಣಗಳು ಹಾಗೂ ₹1.25 ಲಕ್ಷ ನಗದು ಕದ್ದೊಯ್ದಿದ್ದರು.
ಘಟನೆಯ ನಂತರ ಫಿರ್ಯಾದಿಯ ಆಧಾರದ ಮೇಲೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.

ಪೊಲೀಸರ ತಾಂತ್ರಿಕ ತನಿಖೆ*
ಜಿಲ್ಲಾ ಪೊಲೀಸ್ ಅಧೀಕ್ಷಕ  ಭೀಮಾಶಂಕರ . ಗುಳೇದ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ, ಡಿ.ಎಸ್‌.ಪಿ ರವಿ ಡಿ. ನಾಯ್ಕ (ಗೋಕಾಕ) ಹಾಗೂ ಸಿ.ಇ.ಎನ್ ಘಟಕದ ವೀರೇಶ ದೊಡಮನಿ ಅವರ ಸಹಕಾರದೊಂದಿಗೆ, ಪಿಐ ಜಾವೀದ ಎಫ್. ಮುತಾಪುರಿ ನೇತೃತ್ವದ ವಿಶೇಷ ತಂಡ ರಚಿಸಲಾಯಿತು.
ತಾಂತ್ರಿಕ ಸುಳಿವುಗಳು, ಸಿಸಿಟಿವಿ ದೃಶ್ಯಗಳು ಮತ್ತು ವೈಜ್ಞಾನಿಕ ತನಿಖಾ ವಿಧಾನಗಳ ಆಧಾರದ ಮೇಲೆ ಪೊಲೀಸರು ಆರೋಪಿತನ ಪತ್ತೆಹಚ್ಚಿ ಬಂಧಿಸಲು ಯಶಸ್ವಿಯಾದರು.

*ಬಂಧಿತನ ವಿರುದ್ಧದ ಪ್ರಕರಣಗಳು*

ಸುರೇಶ್ ನಾಯಿಕ ಸನದಿ ಕಳೆದ ಎರಡು ವರ್ಷಗಳಲ್ಲಿ ವಿವಿಧ ಠಾಣೆಗಳಲ್ಲಿ ನಡೆದ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ:

ಯಮಕನಮರಡಿ ಪಿಎಸ್ ಪ್ರಕರಣ 155/2025: ₹89.60 ಲಕ್ಷ ಮೌಲ್ಯದ ಬಂಗಾರ-ಬೆಳ್ಳಿ, ₹1.25 ಲಕ್ಷ ನಗದು
ಪ್ರಕರಣ 22/2024: ₹22,000 ನಗದು, 70 ಗ್ರಾಂ ಬಂಗಾರ, 170 ಗ್ರಾಂ ಬೆಳ್ಳಿ.
ಮನಗುತ್ತಿ (ಪ್ರಕರಣ 05/2025): ₹8,500 ನಗದು ಮತ್ತು ಆಭರಣಗಳು.
ಸಂಕೇಶ್ವರ ಪಿಎಸ್ (182/2025): ಕಳ್ಳತನ ಪ್ರಯತ್ನ.
ಬಂಧಿತನಿಂದ ಒಟ್ಟು ₹95 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣಗಳು, ನಗದು, 1 ಥಾರ್ ವಾಹನ ಮತ್ತು 2 ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ತೆಕಾರ್ಯದಲ್ಲಿ ಪಿಐ ಜಾವೀದ ಮುತಾಪುರಿ ಅವರ ನೇತೃತ್ವದಲ್ಲಿ ಪಿಎಸ್‌ಐಗಳು ಎಸ್‌.ಕೆ. ಮನ್ನಿಕೇರಿ, ಎಮ್‌.ಕೆ. ಮುಗಳಿ, ಆರ್‌.ವಿ. ಪಾಟೀಲ, ವಿಠಲ ನಾಯಿಕ, ಎಎಸ್‌ಐ ಬಿ.ಎಸ್‌. ಚಿನ್ನಿಕುಪ್ಪಿ, ಹೆಡ್‌ಕಾನ್ಸ್‌ಟೇಬಲ್‌ಗಳು ಪುರುಷೋತ್ತಮ ನಾಯಿಕ, ಅರ್ಜುನ ಮಸರಗುಪ್ಪಿ, ಗಳತಗಿ, ಗುಂಜಗಿ, ಸಿಪಿಸಿ ಗಜಾನನ ಕಾಂಬಳೆ, ವಿಠಲ ನಾಯಕ, ಗೋವಿಂದ ನಾಗನ್ನವರ, ಪ್ರವೀಣ ಕಿಳ್ಳಿಕೇತರ, ಕರಗುಪ್ಪಿ, ಚೌಗಲಾ, ಪ್ರಲಾದ ಭಂಡಗಾರ ಮತ್ತು ತಾಂತ್ರಿಕ ಘಟಕದ ಸಿಬ್ಬಂದಿ ವಿನೋದ ಠಕ್ಕನ್ನವರ, ಎಲ್‌.ಎಸ್‌. ಜೊಕ್ಕಾನಟ್ಟಿ ಶ್ರಮಿಸಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ ಗುಳೇದ ತಂಡವನ್ನು ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ
.

Leave a Reply

Your email address will not be published. Required fields are marked *

error: Content is protected !!