Headlines

ಪೊಲೀಸ್‌ ಮೇಲಿನ ದಾಳಿ: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಬ್ರೇಕ್!“

ಸಚಿವ ಪ್ರಿಯಾಂಕ್ ಸೂಚನೆಗೆ ನ್ಯಾಯದ ಅಡ್ಡಿ. ಪೊಲೀಸ್‌ ದಾಳಿ ಪ್ರಕರಣ ಹಿಂಪಡೆದ ಕ್ರಮಕ್ಕೆ ಹೈಕೋರ್ಟ್ ತಡೆ“

ಒಮ್ಮೆ ತಿರಸ್ಕಾರ, ಮತ್ತೆ ಹಿಂಪಡೆ… ಸರ್ಕಾರದ ನಡೆಗೆ ಹೈಕೋರ್ಟ್ ಕಟ್ಟೆಚ್ಚರ“

2019ರ ಪೊಲೀಸ್ ದಾಳಿ ಕೇಸ್: ಸರ್ಕಾರದ ಹಿಂಪಡೆದಿತ್ತು.

ಅಧಿಕಾರದ ದುರುಪಯೋಗ? ಹೈಕೋರ್ಟ್ ಸ್ಪಷ್ಟ ಸಂದೇಶ – ‘ಪೊಲೀಸ್‌ ಮೇಲೆ ದಾಳಿ ಕೇಸ್ ಹಿಂಪಡೆಯಲು ಸಾಧ್ಯವಿಲ್ಲ’“

ಕಲಬುರಗಿ:
ಚಿತ್ತಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಪೊಲೀಸ್ ಸಿಬ್ಬಂದಿಯ ಮೇಲೆ ಗುಂಪು ದಾಳಿ ಪ್ರಕರಣವನ್ನು ವಾಪಸ್ ಪಡೆದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಚಿವ ಪ್ರಿಯಾಂಕಾ ಖರ್ಗೆ ಅವರ ಶಿಫಾರಸ್ಸಿನ‌ ಮೇರೆಗೆ ರಾಜ್ಯ‌ಸರ್ಕಾರ ಈ ಕ್ರಮ‌ತೆಗೆದುಕೊಂಡಿತ್ತು. ಅದಕ್ಕೆ ಹೈಕೋರ್ಟ್ ತಡೆ ನೀಡಿದ್ದರಿಂದ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.

(Crime No. 71/2019)ವನ್ನು ರಾಜ್ಯ ಸರ್ಕಾರವು ಪ್ರಿಯಾಂಕ್ ಖರ್ಗೆ ಅವರ ಶಿಫಾರಸಿನ ಆಧಾರದ ಮೇಲೆ ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು.
ಕ್ಯಾಬಿನೆಟ್ ಅನುಮೋದನೆ ಪಡೆದ ಈ ಕ್ರಮವು ಅಧಿಕಾರದ ದುರುಪಯೋಗವಾಗಿದ್ದು, CrPC ಸೆಕ್ಷನ್ 321ರ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಲಾಗಿದೆ.

Oplus_16908288

ಇದಕ್ಕೂ ಮುನ್ನ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ WP No. 3817/2025 (ಗಿರೀಶ್ ಭಾರಧ್ವಾಜ್ ವಿ. )ನಲ್ಲಿ ಕರ್ನಾಟಕ ಹೈಕೋರ್ಟ್ ಸರ್ಕಾರದ ಹೋಲುವ ಕ್ರಮದ ಕ್ಯಾಬಿನೆಟ್ ನಿರ್ಧಾರವನ್ನು ಹಾಗೂ ಅದರ ಆಧಾರದ ಮೇಲೆ ಮಾಡಿದ ಹಿಂಪಡೆದುಕೊಳ್ಳುವ ಆದೇಶವನ್ನೂ ಈಗಾಗಲೇ ರದ್ದುಪಡಿಸಿತ್ತು.

ಇದಾದರೂ ಕೂಡ, ಸರ್ಕಾರ ಮತ್ತೊಮ್ಮೆ ಅದೇ ಪೊಲೀಸ್‌–ಆಕ್ರಮಣ ಪ್ರಕರಣವನ್ನು ಹಿಂಪಡೆಯಲು ಮುಂದಾದಿದ್ದು, ಚಿತ್ತಾಪುರ, ಕಲಬುರಗಿ ಪ್ರಾಥಮಿಕ ಸಿವಿಲ್ ನ್ಯಾಯಾಧೀಶ ಹಾಗೂ JMFC ನ್ಯಾಯಾಲಯ (C.C. No. 286/2020) ಸೆಕ್ಷನ್ 321 CrPC ಅಡಿಯಲ್ಲಿ ಈ ಹಿಂಪಡೆಯುವಿಕೆಯನ್ನು ಅಂಗೀಕರಿಸಿತ್ತು.
ಈ ಹೊಸ ಹಿಂಪಡೆದುಕೊಳ್ಳುವ ಆದೇಶಕ್ಕೆ ಇದೀಗ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ‘ಸ್ಟೇ’ ಜಾರಿಗೊಳಿಸಿದೆ.

,

Leave a Reply

Your email address will not be published. Required fields are marked *

error: Content is protected !!