ವಿದೇಶಿಗರಿಗೆ ವಂಚನೆ ಮಾಡಿದ ಪ್ರಕರಣ.
ಎಲ್ಲರನ್ನೂಅರೆಸ್ಟ್ ಮಾಡಿ ದಾಂಡೇಲಿ ಮೂಲದ ವ್ಯಕ್ತಿಯನ್ನು ಬಿಟ್ಟು ಕಳಿಸಿದ್ರಾ ಪೊಲೀಸರು?
ದಾಂಡೇಲಿ ವ್ಯಕ್ತಿ ಅಲ್ಲಲ್ಲಿ ರೆಸಾರ್ಟ್ ಹೊಂದಿದ್ದಾನೆಂಬ ಮಾಹಿತಿ.
ಈತನಿಗೂ ಈ ವಂಚನೆ ಪ್ರಕರಣಕ್ಕೂ ಲಿಂಕ್ ಇದೆ ಎನ್ನುವ ಪ್ರಾಥಮಿಕ ಮಾಹಿತಿ.
ಬೆಳಗಾವಿ.
ವಿದೇಶಿಗರಿಗೆ ಕಾಲ್ ಸೆಂಟರ್ ಮೂಲಕ ವಂಚನೆ ಪ್ರಕರಣವನ್ನು ಬೇಧಿಸಿದ ಬೆಳಗಾವಿ ಪೊಲೀಸರು ದಾಂಡೇಲಿ ಮೂಲದ ಆ ಪ್ರಭಾವಿ ವ್ಯಕ್ತಿಯನ್ನು ಯಾಕೆ ಬಿಟ್ಟರು ಎನ್ನುವ ಚರ್ಚೆ ಜೋರಾಗಿ ನಡೆದಿದೆ.

ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಈ ವಂಚನೆ ಪ್ರಕರಣದಲ್ಲಿ ದಾಂಡೇಲಿ ವ್ಯಕ್ತಿಯ ಲಿಂಕ್ ಇದೆ ಎನ್ನುವ ಮಾಹಿತಿಯು ಉನ್ನತ ಮೂಲಗಳಿಂದ ಗೊತ್ತಾಗಿದೆ.
ಆದರೆ ಬೆಳಗಾವಿ ಪೊಲೀಸರು ಆತನನ್ನು ಯಾಕೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿಲ್ಲ ಎನ್ನುವ ಪ್ರಶ್ನೆ ಈಗ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

