ಸ್ಮಾರ್ಟ್ ಸಿಟಿ ಮಿಶನ್ ಮತ್ತು ಪ್ರವಾಸೋದ್ಯಮ ಅಧಿಕಾರಿಗಳೊಂದಿಗೆ ಸಂಸದ ಜಗದೀಶ ಶೆಟ್ಟರ್ ಸಭೆ.
ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಬೆಳಗಾವಿ ಸ್ಮಾರ್ಟ ಸಿಟಿ ಮಿಷನ್ ಯೋಜನೆಯಡಿ ಹಾಗೂ ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಕೇಂದ್ರ ಸರಕಾರದ ಯೋಜನೆಯಲ್ಲಿ ಕೈಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಬೆಳಗಾವಿ ಸ್ಮಾರ್ಟ ಸಿಟಿ ಮಿಶನ್:
ಪ್ರಥಮವಾಗಿ ಸ್ಮಾರ್ಟ್ ಸಿಟಿ ಮಿಶನ್ ಯೋಜನೆಯ ಅನುದಾನದಲ್ಲಿ ಬೆಳಗಾವಿ ನಗರದಲ್ಲಿ ಇದುವರೆಗೆ ನಡೆದ ವಿವಿಧ ಕಾಮಗಾರಿಗಳ ಪ್ರಗತಿಯ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಲಾಗಿ ಸುಮಾರು ರೂ 990 ಕೋಟಿ ಈ ಯೋಜನೆಯಡಿ ಬಂದ ಅನುದಾನದಲ್ಲಿ ಸುಮಾರು ರೂ 931 ಕೋಟಿ ಅನುದಾನಲ್ಲಿ 104 ಕಾಮಗಾರಿಗಳನ್ನು ಪೂರ್ಣಗೊಳಿಸಿ ಇನ್ನು 04 ಕಾಮಗಾರಿಗಳು ಬಾಕಿ ಇರುವ ಬಗ್ಗೆ ಪ್ರಸ್ತಾಪಿಸಲಾಯಿತು.

ನಗರದಲ್ಲಿ ಪೂರ್ಣಗೊಂಡ ಕಾಮಗಾರಿಗಳ ಪೈಕಿ ತಿಳಕವಾಡಿಯ ಕಲಾ ಮಂದಿರವೊಂದು ಇದರಲ್ಲಿ ನಿರ್ಮಿತಗೊಂಡ ಮಳಿಗೆಗಳ ಹಂಚಿಕೆ ಬಗ್ಗೆ ಕೈಕೊಂಡ ಕ್ರಮದ ಬಗ್ಗೆ ಸಂಸದರು ಅಧಿಕಾರಿಗಳನ್ನು ವಿಚಾರಿಸಲಾಗಿ, ಹಂಚಿಕೆ ಆಗದೆ ಇರುವ ಬಗ್ಗೆ ಸಂಸದರು ತಮ್ಮ ಕಳವಳ ವ್ಯಕ್ತಪಡಿಸಿದರು. ಪೂರ್ಣಗೊಂಡ ಕಟ್ಟಡ ಹೀಗೆ ಬಳಕೆ ಮಾಡದಿದ್ದರೆ ಹಾಳುಬೀಳುತ್ತವೆ. ಈ ನಿಟ್ಟಿನಲ್ಲಿ ಕೂಡಲೇ ಅಧಿಕಾರಿಗಳು ಹಂಚಿಕೆ ಬಗ್ಗೆ ಮುಂದಿನ ಕ್ರಮವನ್ನು ಜರುಗಿಸಲು ಸೂಚಿಸಿದರು.
ಅದರಂತೆ ನಗರದ ಸಿ.ಬಿ.ಬಿ ಹತ್ತಿರ ನಿರ್ಮಿತ ನೂತನ ಬಸ್ ನಿಲ್ದಾಣ ಉದ್ಘಾಟನೆಗೊಂಡಿದ್ದು ಕಂಟೋನಮೆಂಟ್ ಮಾಲಿಕತ್ವದ ಈ ಜಮೀನನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡವ ವಿಷಯದ ಬಗ್ಗೆ ಪ್ರಶ್ನಿಸಲಾಗಿ, ಇನ್ನು ಹಸ್ತಾಂತರವಾಗದೆ ಇರುವ ಬಗ್ಗೆ ವಿಷಯ ತಿಳಿದು ಬಂದಿದ್ದು, ಕೂಡಲೆ ಹಸ್ತಾಂತರ ಮಡಿಕೊಳ್ಳುವ ಬಗ್ಗೆ ಕ್ರಮವನ್ನು ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಸರಕಾರದ “ಅಮೃತ” ಯೋಜನೆಯಡಿ ಕೈಕೊಳ್ಳಲಾಗುತ್ತಿರುವ ಕಾಮಗಾರಿಗಳ ಬಗ್ಗೆಯೂ ಸಹ ಸಂಸದರು ಮಾಹಿತಿ ಪಡೆದರು.
ಈ ಯೋಜನೆಯಡಿ ನಗರದ ಏಳು ಕೆರೆಗಳ ಪುನಶ್ಚೇತನಕ್ಕೆ ಮತ್ತು ಉದ್ಯಾನವನದ ಸುಧಾರಣೆ ಕಾರ್ಯ ರೂ: 24 ಕೋಟಿ ವೆಚ್ಚದಲ್ಲಿ ನಡೆಸಲಾಗುವ ಬಗ್ಗೆ ತಿಳಿಸಲಾಯಿತು.
ಬೆಳಗಾವಿ ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ಸರಿಪಡಿಸುವ ಬಗ್ಗೆ ಕೂಡಲೇ ಕಾರ್ಯಗತರಾಗಲು ಸಂಸದರು ಸೂಚಿದರು. ಮುಂಬರುವ ದಿನಗಳಲ್ಲಿ ವಿಧಾನ ಮಂಡಳ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿರುವ ಕಾರಣ ಈ ಕ್ರಮ ತುಂಬಾ ಮಹತ್ವದ್ದಾಗಿದೆ, ನಗರ ಸ್ವಚ್ಚತೆಯ ಬಗ್ಗೆ ಕಾಳಜಿ ವಹಿಸುವಂತೆ ಸಂಸದರು ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಬೆಳಗಾವಿ ಕುರಿತು ನಗರ ಘನತ್ಯಾಜ ವಿಲೇವಾರಿ “VISHWAS” ಯೋಜನೆಯಡಿ ರೂ: 135 ಕೋಟಿ ಅನುದಾನ ಕೇಂದ್ರದಿಂದ ಮಂಜೂರಾಗಿದೆ. ಇದು ಸನ್ 2023 ರಲ್ಲಿ ಮಂಜೂರಾಗಿದ್ದು, ಈ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಲಾಗಿ ಆದಷ್ಟು ಬೇಗನೆ ಇದನ್ನು ಪ್ರಾರಂಭಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕೊನೆಯದಾಗಿ ಬೆಳಗಾವಿ ಹತ್ತಿರದಲ್ಲಿ SEWAGE TREATMENT PLANT (STP) ನಿರ್ಮಿಸುವ ಬಗ್ಗೆ ರೈತರ ಜಮೀನು ಸ್ವಾಧೀನ ಪಡೆಯಲು ಇನ್ನು ಹೆಚ್ಚಿನ ಅನುದಾನ ರೈತರ ಬೇಡಿಕೆಯಂತೆ ಅವರಿಗೆ ನೀಡುವ ಬಗ್ಗೆ ವಿಚಾರಿಸಲಾಗಿ, ಈ ಕುರಿತು ಕಡತ ರಾಜ್ಯ ಸರಕಾರದ ಕ್ಯಾಬಿನೆಟನಲ್ಲಿ ಅನುಮೋದನೆ ಪಡೆಯಲಾಗಿದ್ದು, ಈ ಬಗ್ಗೆ ಸರಕಾರದಿಂದ ಆದೇಶ ಬಂದ ಕೂಡಲೇ ಸ್ಥಾಪನೆಯ ಬಗ್ಗೆ ಕ್ರಮ ಜರುಗಿಸಲಾಗುವ ಬಗ್ಗೆ ಅಧಿಕಾರಿಗಳು ಭರವಸೆಯನ್ನು ಸಂಸದರಿಗೆ ನೀಡಿದರು.
ಈ ಇಲಾಖೆಯ ಸಭೆಯ ಕೊನೆಯಲ್ಲಿ ಸ್ಮಾರ್ಟ ಸಿಟಿ ಮಿಶನ್ ಅಡಿ ಪ್ರಸ್ತಾಪಿತ ಮತ್ತು ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಹೆಚ್ಚಿನ ಸಮಯಾವಕಾಶಕ್ಕೆ ಕಾಯದೆ ಆದಷ್ಟು ಬೇಗ ಪೂರ್ಣಗೊಳಿಸುವ ಬಗ್ಗೆ ಸಂಸದ ಜಗದೀಶ ಶೆಟ್ಟರ ಅವರು ಅಧಿಕಾರಿಗಳೆಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯ್ತುಕರು ಹಾಗೂ ಸ್ಮಾರ್ಟ ಸಿಟಿ ಮಿಶನ್ ವ್ಯವಸ್ಥಾಪಕ ನಿರ್ದೇಶಕi ಶ್ರೀಮತಿ ಶುಭಾ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

