ಬೆಳಗಾವಿ.
ಮೋಸ್ಟ ವಾಂಟೆಂಡ್ ರೌಡಿಯೊಬ್ಬ ಮೂವರ ಪೋಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಇಲ್ಲಿನ ಬಾರ್ ಮುಂದೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಪೊಲೀಸರು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು ಮೂಲದ ಮೋಸ್ಟ್ ವಾಂಟೆಂಡ್ ರೌಡಿ ಮೊಹಮ್ಮದ ದರ್ಫಿಕ ಉರ್ಫ್ ಗೋಡಿನಬೈಲು ರಫೀಕ ಇಸ್ಮಾಯಿಲ್ ಎಂಬಾತನೆ ಹಲ್ಲೆ ಮಾಡಿದ ಆರೋಪಿ.
ಯಲ್ಲಾಪುರ ಠಾಣೆಯ ಪಿಎಸ್ ಐ ರಾಜಶೇಖರ ವಂಡಾಳಿ, ಸಿದ್ದಪ್ಪ ಗುಡಿ, ಮುಖ್ಯಪೇದೆ ಮಹಮ್ಮದ ಶಫೀ ಶೇಖ ಎಂಬುವರು ಹಲ್ಲೆಗೊಳಗಾದವರು.
ಇಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕೊನೆಗೆ ತಾನೇ ಸ್ವತಃ ಗಾಯ ಮಾಡಿಕೊಂಡಿದ್ದಾನೆಂದು ಗೊತ್ತಾಗಿದೆ.

