ಪೊಲೀಸ್ ವಿರುದ್ಧವೇ ಗಂಭೀರ ಆರೋಪ
ಬೆಳಗಾವಿ:
ವಿದೇಶಿಗರನ್ನು ಟಾರ್ಗೆಟ್ ಮಾಡಿ ನಡೆದ ದೊಡ್ಡ ಮಟ್ಟದ ಕಾಲ್‌ಸೆಂಟರ್ ವಂಚನೆ ಪ್ರಕರಣದಲ್ಲಿ ಈಗ ಖಾಕಿ ವಲಯವೇ ನುಂಗುವಷ್ಟು ಬೆಂಕಿ ಹತ್ತಿಕೊಂಡಿದೆ! ಬೆಳಗಾವಿ ಪೊಲೀಸ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂಟರ್ಪೋಲ್ ಜೊತೆ ನೇರ ಸಂಪರ್ಕ ಬೆಳೆಸಿರುವುದು ಹೊಸ ತಿರುವು ಪಡೆಯುತ್ತಿದೆ.

ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಈ ವಿಷಯದಲ್ಲಿ ಕೆಲ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ., ಮುಖ್ಯವಾಗಿ ಈ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆಂದು ವಿಶ್ವಾಸಾರ್ಹ ಮೂಲಗಳು ಹೇಳುತ್ತಿವೆ.

ಕಾಲ್‌ಸೆಂಟರ್ ಜಾಲದ ಹಿಂದೆ ದಾಂಡೇಲಿ ಮೂಲದ ವ್ಯಕ್ತಿಯ ಕೈವಾಡವಿದ್ದುದು ಸ್ಪಷ್ಟವಾಗಿದೆ.
ಆದರೆ ಅಚ್ಚರಿ ಏನೆಂದರೆ—ಅವನನ್ನು ಸಂಬಂಧಪಟ್ಟ ಅಧಿಕಾರಿಗಳೇ ಸುಮ್ಮನೆ ಬಿಟ್ಟು ಕಳಿಸಿದ್ದು ಇಲಾಖೆಯೊಳಗೆ ದೊಡ್ಡ ಚರ್ಚೆ ಮತ್ತು ಅನುಮಾನಗಳಿಗೆ ಕಾರಣವಾಗಿದೆ.
ಈ ತನಿಖೆಯಲ್ಲಿ, ಕಾಣೆಯಾಗಿರುವ ಈ ವ್ಯಕ್ತಿ ಮೂಲತಃ ಗುಜರಾತ್ ಮೂಲದವನು ಎಂಬುದೂ ದೃಢಪಟ್ಟಿದೆ.

ಹವಾಲಾ ಹಣ… ಪೊಲೀಸ್ ಅಧಿಕಾರಿಗೆ?!*
ಈ ಪ್ರಕರಣದಲ್ಲಿ ಹವಾಲಾ ಜಾಲದ ಮೂಲಕ ಒಬ್ಬ ಪೊಲೀಸ್ ಅಧಿಕಾರಿಗೆ ಹಣ ತಲುಪಿದೆ ಎಂಬ ಶಾಕಿಂಗ್ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.
ಈ ಕುರಿತು ಮಾಹಿತಿ ತಿಳಿದ ತಕ್ಷಣ ಸ್ವತಃ ಪೊಲೀಸ್ ಆಯುಕ್ತರು ವಿಶೇಷ ವಿಚಾರಣೆ ನಡೆಸಿರುವುದು ಗಂಭೀರತೆಯನ್ನು ಹೆಚ್ಚಿಸಿದೆ.
ಅಷ್ಟೇ ಅಲ್ಲ— ಹವಾಲಾ ಹಣ ಸಂಪರ್ಕ ಹೊಂದಿದ್ದ ವ್ಯಕ್ತಿಯೊಂದಿಗೆ ಒಬ್ಬ ಪೊಲೀಸ್ ಅಧಿಕಾರಿಗೆ ನಿಕಟ ಸ್ನೇಹವಿದ್ದುದು ಗೊತ್ತಾಗಿದೆ
ಅಲ್ಲದೆ ಆ ಅಧಿಕಾರಿ ಹಲವಾರು ಬಾರಿ ಗುಜರಾತ್‌ಗೆ ಹೋಗಿಬಂದಿದ್ದಾರೆ ಎಂಬ ದಾಖಲೆಗಳು ಈಗ ರಹಸ್ಯಕ್ಕೆ ಮತ್ತೊಂದು ಪದರ ಸೇರಿಸುತ್ತಿವೆ.

