Headlines

ಡಿಕೆಶಿ ‘ನಂಬರ ಗೇಮ್’ ದಲ್ಲಿ ವೀಕ್

ಡಿಕೆಶಿ ನಂಬರ್ ಗೇಮ್‌ನಲ್ಲಿ ವೀಕ್ — ಜಾರಕಿಹೊಳಿ
🔹 50 ಮಂದಿ ತೋರಿಸಿದರೆ ‘ಇವತ್ತೇ ಸಿಎಂ ಮಾಡ್ತೀವಿ’ ಎಂಬ ಚವಣಿಕೆ
🔹 ಸಮ್ಮಿಶ್ರ ಸರ್ಕಾರ ಪತನಕ್ಕೆ ಡಿಕೆಶಿ ಕಾರಣ ಎಂಬ ತೀವ್ರ ಆರೋಪ

ಬೆಳಗಾವಿ ರಾಜಕೀಯ ಹಸ್ತಕ್ಷೇಪವೇ ಕಾರಣ
🔹 “ನಾನು ಜೀವನದಲ್ಲಿ ಡಿಕೆಶಿ ನಾಯಕತ್ವ ಒಪ್ಪುವುದಿಲ್ಲ” — ಸ್ಪಷ್ಟ ಸಂದೇಶ .

ಬೆಳಗಾವಿ:
ರಾಜ್ಯ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಸಂಖ್ಯಾಬಲದ ಬಗ್ಗೆ ಪುನಃ ಪ್ರಶ್ನೆಗಳು ಎದ್ದಿರುವ ನಡುವೆಯೇ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ನೇರ ರಾಜಕೀಯ ಬಾಣ ಹಾರಿಸಿದರು.
“ಡಿಕೆಶಿ 50 ಶಾಸಕರ ನಂಬರ ತೋರಿಸಿದ್ರೆ ನಾವೇ ಇವತ್ತೇ ಸಿಎಂ ಮಾಡ್ತೀವಿ. ಆದರೆ ನಂಬರ್ ಗೇಮ್‌ನಲ್ಲಿ ಅವರ ದುರ್ಬಲತೆ ಎಲ್ಲರಿಗೂ ಗೊತ್ತಿದೆ” ಎಂದು ತೀವ್ರ ಟೀಕೆ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕಾಂಗ್ರೆಸ್‌ನ ಒಳಗಿನ ವಿಷಯ. ನಾವು ವಿರೋಧ ಪಕ್ಷದ ಜವಾಬ್ದಾರಿ ಮಾಡ್ತಿದ್ದೇವೆ” ಎಂದು ಹೇಳಿದರು.

“ *ನಾನು ಜೀವನದಲ್ಲಿ ಡಿಕೆಶಿ ನಾಯಕತ್ವ ಒಪ್ಪೋದಿಲ್ಲ”*

ಡಿಕೆಶಿಯವರ ನಾಯಕತ್ವದ ಬಗ್ಗೆ ಪ್ರಶ್ನಿಸಿದಾಗ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದು—
“ನಾನು ಜೀವನದಲ್ಲಿ ಡಿಕೆಶಿ ನಾಯಕತ್ವ ಒಪ್ಪುವುದಿಲ್ಲ. ಅವರು ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿದರಾ? ನನಗೆ ಗೊತ್ತಿಲ್ಲ… ಮಾಧ್ಯಮದಲ್ಲೇ ನೋಡಿರುವೆ” ಎಂದರು.
ಅಷ್ಟೇ ಅಲ್ಲ, ಡಿ.ಕೆ.ಶಿವಕುಮಾರ್ ಬಿಜೆಪಿ ಸೇರಿದರೆ ನನ್ನ ಬುದ್ಧಿ ಏನು ತೀರ್ಮಾನ ಮಾಡುತ್ತದೋ ಆಗಲೇ ಹೇಳ್ತೀನಿ” ಎಂದು ಗೂಢಸಂದೇಶದ ಉತ್ತರ ನೀಡಿದರು
“ *ಛೀ ಥೂ ಅನ್ನಿಸಿಕೊಳ್ಳಲಿ”

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಅವರು ವ್ಯಂಗ್ಯವಾಡಿದಂತೆ,
“ಈ ಸರ್ಕಾರ ಇನ್ನೂ ಹೀಗೇ ಇರಲಿ… ಜನರಿಗೆ ಛೀ ಥೂ, ಛೀ ಥೂ ಅನ್ನಿಸಿಕೊಳ್ಳಲಿ” ಎಂದು ಕಟುವಾಗಿ ಟೀಕಿಸಿದರು.

*ಸಿಎಂ ಬದಲಾವಣೆ ಚರ್ಚೆ: “ಅದು ಕಾಂಗ್ರೆಸ್ ಒಳಕಚ್ಚಾಟ”*

ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಅವರು,
“ಅದು ಕಾಂಗ್ರೆಸ್ ಆಂತರಿಕ ಸಮಸ್ಯೆ. ಯಾರನ್ನೇ ಸಿಎಂ ಮಾಡಲಿ, ನಮಗೆ ಸಂಬಂಧವಿಲ್ಲ. ಹಿಂದೆ ನಾನು ಕಾಂಗ್ರೆಸ್‌ನಲ್ಲಿ ಇದ್ದಾಗ ಸತೀಶ್ ಸಿಎಂ ಆಗಬೇಕು ಎಂದಿದ್ದೆ. ಈಗ ನಾನು ಬಿಜೆಪಿ ಯಲ್ಲಿದ್ದೇನೆ, ಅದನ್ನ ಇವತ್ತು ಕೇಳುವುದು ಸರಿಯಲ್ಲ” ಎಂದರು.
ಎಚ್.ಡಿ. ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸದೆ, ಜಾರಕಿಹೊಳಿ ತೀವ್ರ ಆರೋಪ ಹಾರಿಸಿದರು:
“ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಬೀಳಲು ಮೂಲ ಕಾರಣ ಡಿಕೆಶಿ. ಆಪರೇಷನ್ ಕಮಲದ ಮೂಲ ಸೂತ್ರಧಾರ ನಾನು. ಸರ್ಕಾರದ ಪತನಕ್ಕೆ ಡಿಕೆಶಿಯೇ ಕಾರಣ… ಇದು ರಾಜ್ಯದ ಚಿಕ್ಕಮಕ್ಕಳಿಗೂ ಗೊತ್ತಿರುವ ವಿಷಯ” ಎಂದರು.

ಬೆಳಗಾವಿ ರಾಜಕೀಯ ಹಸ್ತಕ್ಷೇಪವೇ ಕಾರಣ

“ಡಿಕೆಶಿ ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ನಾವು ಪ್ರತಿಕ್ರಿಯಿಸಿದ್ದೇವೆ. ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯರಿಗೆ ಯಾವ ಸಂಬಂಧವೂ ಇರಲಿಲ್ಲ” ಎಂದು ಜಾರಕಿಹೊಳಿ ಹೇಳಿದರು.
“ಈಗಿನ ರಾಜಕೀಯ ಸಂದರ್ಭದಲ್ಲಿಬಿಜೆಪಿ ತಟಸ್ಥ ಇರಬೇಕು. ಕಾಂಗ್ರೆಸ್ ನಾಯಕರ ಕಚ್ಚಾಟದಲ್ಲಿ ತಲೆ ಹಾಕಿ ಹೊಲಸು ತಲೆ ಮೇಲೆ ಹಾಕಿಕೊಳ್ಳಬಾರದು” ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!