ಬಾಳೇಕುಂದ್ರಿ ಕೆ.ಎಚ್‌ನಲ್ಲಿ ‘ನಕಲಿ ದಾಖಲೆ’ ದಂಧೆ!
ಒಂದೇ ಗಲ್ಲಿಗೆ ಮೂರು ಯೋಜನೆ—ಕೋಟ್ಯಾಂತರ ಲೂಟಿ?.
ಬೆಳಗಾವಿ:
ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ—ಒಂದೇ ಗಲ್ಲಿಗೆ ಮೂರೂ ಬಾರಿ ಯೋಜನೆ ತೋರಿಸಿ, ನಕಲಿ ದಾಖಲೆಗಳ ಮೂಲಕ ಅನುದಾನ ಲೂಟಿ ಮಾಡಿದ ಅಕ್ರಮ ಜಾಲ ಮಾಹಿತಿ ಹಕ್ಕಿನಡಿ ಬಯಲಾಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶ ಜ್ವಾಲೆ ಎದ್ದಿದೆ.

ಪೊಲೀಸರು 2023 ಜೂನ್‌ನಲ್ಲಿ ಎಫ್ಐಆರ್ ದಾಖಲಿಸಿದರೂ, 19 ತಿಂಗಳಾದರೂ ಚಾರ್ಜ್‌ಶೀಟ್ ಸಲ್ಲಿಸದಿರುವುದು, ಈ ಪ್ರಕರಣವನ್ನು ಯಾರು ಕಾಪಾಡುತ್ತಿದ್ದಾರೆ ಎಂಬ ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಒಂದೇ ಗಲ್ಲಿಗೆ ಮೂರು ಯೋಜನೆ!
ಮೂರು ಹೆಸರಿನಲ್ಲಿ ಮೂರೂ ಅನುದಾನ.

ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಬಯಲಾದ ನಕಲಿ ದಾಖಲೆ ದಂಧೆ ಹೀಗಿದೆ:
ಎಸ್ಸಿ–ಎಸ್ಪಿ ಯೋಜನೆ: ₹10 ಲಕ್ಷ
ಎಚ್‌ಎಚ್‌ಟಿಸಿ ಯೋಜನೆ: ಮತ್ತೊಂದು ಅನುದಾನ
14ನೇ ಹಣಕಾಸು ಯೋಜನೆ: ₹1,21,161 – “ಸಿದ್ದಪ್ಪ ಕರೆಣ್ಣವರ ಮನೆ → ಯಲ್ಲಪ್ಪ ಜೋಗಾನಿ ಮನೆಗೆ ಪೈಪ್‌ಲೈನ್” ಎಂದು ತೋರಿಕೆ.
ಆದರೆ ಎರಡೂ ಮನೆಗಳು ಅದೇ ಅಂಬೇಡ್ಕರ್ ಗಲ್ಲಿಯಲ್ಲೇ!

ಒಂದೇ ಪ್ರದೇಶಕ್ಕೆ ಮೂರೂ ಯೋಜನೆ, ಒಂದೇ ಪ್ರದೇಶಕ್ಕೆ ಮೂರೂ ಅನುದಾನ! ಅಂದರೆ—
“ಈಗಿರುವ ಕೆಲಸವನ್ನೇ ಪುನಃ ಮಾಡಿದಂತೆ ತೋರಿಸಿ ಹಣ ಎತ್ತಲಾಗಿದೆ” ಎಂದು ಬಾಳೇಕುಂದ್ರಿ ಕೆ.ಎಚ್. ಗ್ರಾಮದ ಅಂಬೇಡ್ಕರ್ ಗಲ್ಲಿಯ ಮಲ್ಲೇಶಿ ರಾಮಚನ್ನವರ ಸ್ಪಷ್ಟ ಆರೋಪ.
ಮಲ್ಲೇಶಿಯವರು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ ದೂರು ರಾಜ್ಯ ಮಟ್ಟದಲ್ಲೇ ಚರ್ಚೆಯಾಗುತ್ತಿದೆ.
*ಕಾಗದದಲ್ಲಿ ಮಾತ್ರ ಕೆಲಸ—ನೆಲದಲ್ಲಿ ಶೂನ್ಯ!***

(RTI)ಯಲ್ಲಿ ಬಯಲಾದ ಅಂಶಗಳು ಹೃದಯಕ್ಕೆ ನಟ್ಟ ನಡುಗುವಂತಿವೆ:
ಯೋಜನೆಗಳ ಫೋಟೋಗಳು, ಸ್ಥಲ ವರದಿ, ಮಾಪನ—all ಸಂದಿಗ್ಧ, ಅಪೂರ್ಣ, ಮತ್ತು ಮರುಬಳಕೆ ದಾಖಲೆಗಳಂತೆ ಕಾಣಿಸುವಂತೆ.
ಒಂದೇ ಗಲ್ಲಿಯ ಫೋಟೋಗಳನ್ನು ಬೇರೆ ಬೇರೆ ಯೋಜನೆಗಳ ಹೆಸರಿನಲ್ಲಿ ಸೇರಿಸಿರುವುದು ದೃಢಪಟ್ಟಿದೆ.
ಒಂದೇ ದಿನಾಂಕಗಳು, ಒಂದೇ ಸಹಿಗಳು, ಮತ್ತು ಒಂದೇ ಸ್ಥಳದ ‘ಕೃತಕ’ ಅಂದಾಜು ಪತ್ರಗಳು!
ಯೋಜನೆ ಮಾಡದೇ ಹಣ ಎತ್ತಿದ ‘ಗಲ್ಲಿಯ ಮಟ್ಟದ ಲೂಟಿ’ ಎಂದು ಗ್ರಾಮಸ್ಥರ ಸ್ಪಷ್ಟ ಆರೋಪ.
ಆರೋಪ ದೃಢ… ಆದರೆ ಕ್ರಮ ಶೂನ್ಯ!’
ಸಮಾಜ ಕಲ್ಯಾಣ ಇಲಾಖೆ, ನಾಗರಿಕ ಹಕ್ಕು ಜಾರಿ ಪ್ರಾಧಿಕಾರ ಎಸ್ಸಿ–ಎಸ್ಪಿ / ಟಿಎಸ್ಪಿ ನೋಡಲ್ ಏಜೆನ್ಸಿ
ಇವರ ವರದಿಗಳಲ್ಲಿ ಯಾರು ತಪ್ಪಿತಸ್ಥರು ಎನ್ನುವುದೂ ಸ್ಪಷ್ಟವಾಗಿ ಬರೆದಿದೆ.
2023 ಅಕ್ಟೋಬರ್ 11ರ ಸಭೆಯಲ್ಲಿ: ತಕ್ಷಣ ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು”
ಎಂದು ನಡಾವಳಿಯಲ್ಲೇ ಉಲ್ಲೇಖವಾಗಿದೆ.
ಎಫ್ಐಆರ್ ದಾಖಲಾಗಿದೆ. ಸ್ಥಳ ಪರಿಶೀಲನೆ ನಡೆದಿದೆ. ದಾಖಲೆ ಸಂಗ್ರಹಿಸಲಾಗಿದೆ.
ಆದರೂ— 19 ತಿಂಗಳು ಕಳೆದರೂ ದೋಷಾರೋಪ ಪಟ್ಟಿ ಸಲ್ಲಿಸದಿರುವುದು, ಪೊಲೀಸರ ಮೇಲೆ ಯಾರಾದರೂ ಒತ್ತಡವೇ?
ಅಥವಾ ಈ ದಂಧೆಯ ಹಿಂದೆ ‘ದೊಡ್ಡವರು’ ಇದ್ದಾರೆಯೇ?
—
ಮುಚ್ಚಿಹಾಕುವ ಯತ್ನ?
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ:
IPC 406, 420 ಅಡಿ 2023 ಜೂನ್ 10 ರಂದು ದಾಖಲು ಆದರೆ ನಂತರ—
ತನಿಖೆ ನಿಧಾನ
ಚಾರ್ಜ್‌ಶೀಟ್ ಇಲ್ಲ
ತಪ್ಪಿತಸ್ಥರ ವಿರುದ್ಧ ಕ್ರಮ ಇಲ್ಲ
ಇಷ್ಟೊಂದು ಸ್ಪಷ್ಟ ವರದಿಗಳು ಇದ್ದಾಗಲೂ 19 ತಿಂಗಳು ಚಾರ್ಜ್‌ಶೀಟ್ ಬರದಿದ್ದರೆ
ಇದು ತನಿಖೆಯ ವಿಳಂಬವಲ್ಲ—
ಯಾರು ಇದರ ಹಿಂದೆ ಇದ್ದಾರೋ ಅವರನ್ನು ರಕ್ಷಿಸುವ ಯತ್ನ!”

