Headlines

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ!

ಜಾಹೀರಾತಿನಲ್ಲೇ “ಬೆಳಗಾವಿ ಮಹಾರಾಷ್ಟ್ರ” — ಕೊಲ್ಹಾಪುರ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಗಡಿಭಾಗದಲ್ಲಿ ಕಿಡಿ.

ಬೆಳಗಾವಿ
ಕನ್ನಡಿಗರ ಹಕ್ಕು–ಗೌರವದ ನೆಲೆಯಾದ ಗಡಿಭಾಗ ಮತ್ತೆ ಒಂದು ನಿರ್ಲಕ್ಷ್ಯ ಬರಹದಿಂದ ದಹನಗೊಂಡಿದೆ. ಖ್ಯಾತ ಗಾಯಕ ಮಹೇಶ್ ಕಾಳೆ ಅವರ ಡಿಸೆಂಬರ್ 5ರ ಗಾಯನ ಕಾರ್ಯಕ್ರಮಕ್ಕಾಗಿ ಕೊಲ್ಹಾಪುರದ ಏಕದಂತಾ ರಂಗಭೂಮಿ ಸಂಸ್ಥೆ ಪ್ರಕಟಿಸಿದ ಸಾಮಾಜಿಕ ಮಾಧ್ಯಮ ಜಾಹೀರಾತಿನಲ್ಲಿ
Belagavi, Maharashtra”
ಎಂಬ ಪದಬಳಕೆ ಕಂಡುಬಂದಿದೆ.
ಈ ಒಂದು ಸಾಲಿನ ದುರದೃಷ್ಟದ ತಪ್ಪೇ ಕನ್ನಡಿಗರ ಸ್ವಾಭಿಮಾನಕ್ಕೆ ನೇರ ಧಕ್ಕೆ ತಂದುಕೊಟ್ಟಿರುವುದಾಗಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬೆಳಗಾವಿ ಮಹಾರಾಷ್ಟ್ರ?” — ಕನ್ನಡ ಮನಸ್ಸನ್ನು ಕೆಣಕಿದ ಜಾಹೀರಾತು

ಡಿಸೆಂಬರ್ 5ರಂದು ಬೆಳಗಾವಿಯ ಜೀರಗೆ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ “ಬೆಳಗಾವಿ, ಮಹಾರಾಷ್ಟ್ರ” ಎಂದು ಉಲ್ಲೇಖಿಸಿರುವುದು, ಗಡಿಭಾಗದ ಭಾಷಾ–ಸಾಂಸ್ಕೃತಿಕ ಸಂವೇದನೆಯನ್ನು ನೇರವಾಗಿ ಮುಟ್ಟಿದೆ.


ಕನ್ನಡ ಸಂಘಟನೆಗಳ  ಪ್ರತಿಕ್ರಿಯೆ :

> “ಕಲೆಯಲ್ಲಿ ಗೌರವ, ಆದರೆ ಕನ್ನಡ ನಾಡಿನ ಗೌರವಕ್ಕೆ ಧಕ್ಕೆ ತರುವ ಯಾವುದೇ ಬರಹ ಅಸ್ವೀಕಾರ್ಯ!”

ಅಥವಾ ಕನ್ನಡಿಗರ ಮನಸ್ಸನ್ನು ನೋವುಪಡಿಸುವ ನಿರ್ಲಕ್ಷ್ಯವೋ?”

> “ಬೆಳಗಾವಿಯೇ ಕರ್ನಾಟಕದ ಅವಿಭಾಜ್ಯ ಭಾಗ. ಜಾಹೀರಾತಿನಲ್ಲಿ ಅದನ್ನು ‘ಮಹಾರಾಷ್ಟ್ರ’ ಎಂದು ಬರೆದ ಅರ್ಥವೇನು?

“ಗಡಿಭಾಗದ ತೀವ್ರತೆಯನ್ನು ತಿಳಿಯದ ನಿಜವಾದ ತಪ್ಪೋ?

ಕನ್ನಡಿಗರ ಅಸ್ತಿತ್ವವನ್ನು ಪ್ರಶ್ನಿಸುವ ಹೆಮ್ಮೆಯ ಧುರೀಣರಿಗೂ ಇದು ಎಚ್ಚರಿಕೆ!”

ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮತ್ತು ಹಲವು ಕನ್ನಡ ಪರ ಸಂಘಟನೆಗಳು ಮೂರು ಬೇಡಿಕೆಗಳನ್ನು ಮುಂದಿಟ್ಟಿವೆ:

1. ಜಾಹೀರಾತನ್ನು ತಕ್ಷಣ ತಿದ್ದು “Belagavi, Karnataka” ಎಂದು ಸರಿಪಡಿಸಬೇಕು.

2. ಕನ್ನಡದಲ್ಲಿಯೂ ಜಾಹೀರಾತು ಬಿಡುಗಡೆ ಮಾಡಬೇಕು — ಗಡಿಭಾಗದ ಮಾನಕ್ಕೆ ಇದು ಅಗತ್ಯ.

3. ಸಂಸ್ಥೆಯು ಸ್ಪಷ್ಟನೆ ನೀಡಬೇಕು ಅಥವಾ ಸಾರ್ವಜನಿಕ ಕ್ಷಮಾಪಣೆ ಕೇಳಬೇಕು.

> “ಕಲೆ ದೊಡ್ಡದು, ಕಲಾವಿದರಿಗೂ ಗೌರವ ಇದೆ

ಆದರೆ ಕನ್ನಡಿಗರ ಸ್ವಾಭಿಮಾನಕ್ಕಿಂತ ದೊಡ್ಡದು ಏನೂ ಇಲ್ಲ.
ತಕ್ಷಣ ತಿದ್ದುಪಡಿ ನಿರೀಕ್ಷೆ ನಮ್ಮದು ಎಂದು‌ ಕನ್ನಡ ಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳುತ್ತಾರೆ.
ಮಹೇಶ್ ಕಾಳೆಗೆ ಸಂಬಂಧವಿಲ್ಲ—ಆಯೋಜಕರ ಅಜಾಗರೂಕತೆ ಕಾರಣ

ಮಹೇಶ್ ಕಾಳೆ ಅವರ ಕೀರ್ತಿ, ಸಾಧನೆ, ಕಲೆಗೆ ಎಲ್ಲ ಗೌರವವೂ ಇದೆ.
ಆದರೆ ಆಯೋಜಕರ ಅಜಾಗರೂಕ ಕ್ರಮವೇ ವಿವಾದಕ್ಕೆ ಕಾರಣ.
ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ ಈ ತಪ್ಪಿಗೆ ತಕ್ಷಣದ ಸ್ಪಂದನೆ ಅಗತ್ಯ ಎಂದು ಬೆಳಗಾವಿ ಕನ್ನಡ ವೇದಿಕೆಗಳು ಒತ್ತಾಯಿಸುತ್ತಿವೆ.
ಕನ್ನಡಿಗರ ಅಸ್ತಿತ್ವವನ್ನು ಪ್ರಶ್ನಿಸುವ ಅಥವಾ ಕುಂದಿಸುವ ಯಾವುದೇ ಪ್ರಯತ್ನಕ್ಕೆ
‘ಗಡಿಭಾಗದ ಮಣ್ಣು ಮೌನವಾಗುವುದಿಲ್ಲ’
ಎಂಬ ಸ್ಪಷ್ಟ ಸಂದೇಶ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!