ಆರ್ಸಿಯು ರಾದ್ದಾಂತ-ಆರೋಪ ಹೊತ್ತ ಪ್ರೊಫೆಸರ್ ಪರ ನಿಂತರಾ ವಿಸಿ?
ಸಿಂಡಿಕೆಟ್ ಗಮನಕ್ಕೂ ತಾರದೇ ಮುಚ್ಚಿಟ್ಟವರು ಯಾರು? ರಾಜ್ಯಪಾಲರು ಅನುಮತಿಸಿದರೂ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡದ RCU! ಬೆಳಗಾವಿ:ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮತ್ತೆ ಗರ್ಭಗಟ್ಟಿದ ಗೊಂದಲ. ವಿಸಿ ಸ್ವತಃ ಆರೋಪ ಹೊತ್ತ ಪ್ರೊಫೆಸರ್ ವಿರುದ್ಧ ವಿಚಾರಣೆ ಪ್ರಾರಂಭಿಸಿದ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅದೇ ಪ್ರೊಫೆಸರ್ ಪರವಾಗಿ ನಿಂತಂತೆ ಕಾಣುವ ವರ್ತನೆ ಕ್ಯಾಂಪಸ್ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.ವಿದ್ಯಾರ್ಥಿ ವಲಯ, ಶಿಕ್ಷಕ ವಲಯ ಮತ್ತು ಸಿಬ್ಬಂದಿ ವಲಯದಲ್ಲಿ ಉಲ್ಭಣಿಸಿದ ಪ್ರಶ್ನೆ ಏನೆಂದರೆ, ವಿವಾದದ ಕೇಂದ್ರದಲ್ಲಿರುವ ಪ್ರೊಫೆಸರ್ ಮೇಲೆ ಆರೋಪ ಗಂಭೀರವಾಗಿದ್ದರೆ, ವಿಸಿ ಏಕೆ…

