Headlines

ವೀರರಾಣಿ ಹೆಸರಿನ ವಿವಿಯಲ್ಲಿ ‘ತುಘಲಕ’ ಆಡಳಿತ?

ಪಿಎಚ್‌ಡಿ ಸಂಶೋಧಕಿ ಕಣ್ಣೀರು–ಕದನದಲ್ಲಿ ಆರ್ಸಿಯು!

ನಾನು ಎಸ್‌ಸಿ ಮಹಿಳೆ… ಆದ್ದರಿಂದ ಗುರಿ ಮಾಡಿದ್ರು!’ — ಸುಜಾತಾಳ ಸ್ಫೋಟಕ ಆರೋಪ

ರಾಜ್ಯಪಾಲರ ವೇದಿಕೆ ತಲುಪಿದ ಆರ್ಸಿಯು ಆಘಾತ!

ಪದವಿ ಪಡೆಯಬೇಕಿದ್ದ ವಿದ್ಯಾರ್ಥಿನಿ ಈಗ ರಾಜ್ಯಪಾಲರ ಬಾಗಿಲಲ್ಲಿ ನ್ಯಾಯ ಬೇಡಿಕೆ”

ಆರ್ಸಿಯು ಆಡಳಿತದ ಕತ್ತಲೆ ಮುಖ

ಪದವಿ ತಡೆ, ಜಾತಿ ಬ್ರಹ್ಮಾಸ್ತ್ರ, ಮಹಿಳಾ ಹಿಂಸೆ — ಆರ್ಸಿಯು ಬಿಕ್ಕಟ್ಟು ತುದಿಗಾಲಲ್ಲಿ”*

ಬೆಳಗಾವಿ:
ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಅಸಹ್ಯ ಅಧ್ಯಾಯ ಬರೆಯಲಾದಂತ ಘಟನೆ ಬಳಿಕ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ಗಂಭೀರ ಪ್ರಶ್ನೆಗಳ ಸುಳಿವಿನಲ್ಲಿ ಸಿಲುಕಿದೆ.
ಪದವಿ ಪ್ರದಾನ ಸಮಾರಂಭವೇ ವಿದ್ಯಾರ್ಥಿನಿಯ ಬದುಕು ಕತ್ತಲಗೊಳಿಸಿದ ವೇದಿಕೆಯಾಗಿ ಪರಿಣಮಿಸಿದ್ದು, ವಿಶ್ವವಿದ್ಯಾಲಯದ ಆಭರಣವಾಗಬೇಕಿದ್ದ ಸಂಭ್ರಮ ಈಗ ಸೂತಕದ ಮನೆಯಂತಾಗಿ ಮಾರ್ಪಟ್ಟಿದೆ.
ವಿದ್ಯಾರ್ಥಿನಿ ಸುಜಾತಾ ಪೋಳ್ ಆತ್ಮಹತ್ಯೆ ಯತ್ನದ ಬೆನ್ನಲ್ಲೇ ಆರ್ ಸಿಯು ಮುಖ್ಯಸ್ಥರ ವಿರುದ್ಧ ಗಂಭೀರ ಸ್ವರೂಪದ ದೂರುಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲ ವಿವಿಯಲ್ಲಿ ಜಾತಿ ಹಿಡಿದುಕೊಂಡು ಎಲ್ಲ ದೃಷ್ಟಿಯಲ್ಲಿ ಮಹಿಳೆಯರನ್ನು ಹಿಯ್ಯಾಳಿಸುವ ಕೆಲಸ ನಡೆಯುತ್ತಿರುವನ್ನು ಸುಜಾತಾ ವಿಡಿಯೋ ಬಹಿರಂಗಪಡಿಸಿದ್ದಾರೆ.

ವೀರರಾಣಿ ಚನ್ನಮ್ಮನ ಹೆಸರಿಟ್ಟುಕೊಂಡ ಈ ವಿಶ್ವವಿದ್ಯಾಲಯದಲ್ಲಿ ಈಗ ಯಾರು ಎಷ್ಟೇ ಶೋಷಣೆ ನಡೆಸಿದರೂ ಕೂಡ ವಿವಿ ವಿಸಿಯವರು ಎಲ್ಲಕ್ಕೂ ತೇಪೆ ಹೆಚ್ಚುವ ಕೆಲಸ ನಡೆಸಿದ್ದು ಬೆಳಕಿಗೆ ಬರುತ್ತಿದೆ. ಸಧ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಬೆಳಗಾವಿ ಆರ್ಸಿಯು ವಿಸಿ ಮತ್ತು ರಿಜಿಸ್ಟ್ರಾರ್ ಅವರು ರಾಜ್ಯಪಾಲರಿಗಿಂತ ದೊಡ್ಡವರು ಎನ್ನುವ ಹಾಗೆ ವರ್ತಿಸುತ್ತಿದ್ದಾರೆ, ಅಷ್ಟೇ ಅಲ್ಲ ಇಲ್ಲಿ ವಿವಿಯ ಸಿಂಡಿಕೇಟ್ ಸದಸ್ಯರ ದಾರಿ ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎನ್ನುವ ದೂರು ಕೇಳಿ ಬರುತ್ತಿದೆ.

ಅಚ್ಚರಿಯ ಸಂಗತಿ ಎಂದರೆ, ರಾಜ್ಯಪಾಲರಿಂದ ಪದವಿ ಪ್ರಮಾಣ ಪತ್ರ ಪಡೆದು ಸಂಭ್ರಮಿಸಬೇಕಾಗಿದ್ದ ವಿದ್ಯಾರ್ಥಿನಿ ಸುಜಾತಾ ಈಗ ಕಣ್ಣೀರಿನಿಂದ ಕೈ ತೊಳೆಯುವಂತಾಗಿದೆ.
ರಾಜ್ಯದ ಶಿಕ್ಷಣ ಗುಣಮಟ್ಟದ ಪ್ರಶ್ನೆಗಳು ಸರ್ಕಾರದ ಬಾಗಿಲಿಗೂ ತಲುಪಿವೆ. ವಿಧಾನ ಸೌಧದೊಳಗೆ ಈ ಘಟನೆ ವಿಶ್ವ ವಿದ್ಯಾಲಯಗಳಲ್ಲಿ ಜವಾಬ್ದಾರಿತ್ವದ ಕೊರತೆಯ ಉದಾಹರಣೆಯಂತೆ ಚರ್ಚೆ ಗದ್ದಲವಾಗಿ‌ ಮಾರ್ಪಟ್ಟಿದೆ.

ಬೆಳಗಾವಿಯ ಅಧಿವೇಶನದಲ್ಲಿ ಈ ವಿವಿಯ ಕರ್ಮಕಾಂಡವನ್ನು ವಿರೋಧ ಪಕ್ಷಗಳುಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

ಅವರಿಬ್ಬರೇ ಕಾರಣ
ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ತಮ್ಮ ಕೆಲಸಕ್ಕೂ ಕುಲಪತಿ ಮತ್ತು ರಿಜಿಸ್ಟ್ರಾರ್ ಅವರು ಕಿರಿಕಿರಿ ಮಾಡುತ್ತಿದ್ದಾರೆ. ಅವರ ನಿರಂತರ ಹಿಂಸೆ ನನಗೆ ಆತ್ಮಹತ್ಯೆ ಯೋಚನೆ ತರಿಸಿದೆ. ಬದುಕಿಬಿಟ್ಟೆ. ಆದರೆ ಇನ್ನೂ ಭಯದಲ್ಲೇ ಇದ್ದೇನೆ. ನನಗೆ ಏನಾದರೂ ಆದರೆ ಇದರ ಸಂಪೂರ್ಣ ಜವಾಬ್ದಾರಿ ಕುಲಪತಿ ಮತ್ತು ರಿಜಿಸ್ಟ್ರಾರದ್ದು, ಎಂದು ಸುಜಾತಾ ಕಣ್ಣೀರಿಡುತ್ತ ಹೇಳಿದ್ದಾರೆ.

ನನ್ನಂಥ 10-15 ಮಹಿಳೆಯರು RCU ನಿರ್ವಹಣೆಯಿಂದ ಹಿಂಸೆ ಅನುಭವಿಸಿದ್ದಾರೆ. ಅವರಿಗೆ ನ್ಯಾಯ ದೊರೆಯಲಿ ಎಂಬುದು ನನ್ನ ಹೋರಾಟ ಎಂದರು.

ರಾಜ್ಯಪಾಲರ ಮೊರೆ…!
ನಾನು ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವ ಉದ್ದೇಶದಿಂದ ದೂರು ಹಿಂಪಡೆದಿದ್ದರೂ ಇವರ ಕಿರಿಕಿರಿ ತಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಸುಜಾತಾ ಸ್ಪಷ್ಟಪಡಿಸಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮಹಿಳೆಯರ ಮಾತಿಗೆ ಬೆಲೆ ಇಲ್ಲ. ಹೀಗಾಗಿ ರಾಜ್ಯಪಾಲರೇ ನನ್ನ ಕೊನೆಯ ನೆಲೆ. ಅಲ್ಲಿ ನಡೆಯುತ್ತಿರುವ ಅನ್ಯಾಯ, ಜಾತಿ ಭೇದ, ಆಡಳಿತದ ಒತ್ತಡ ಎಲ್ಲವನ್ನೂ ವಿವರಿಸಿ ರಾಜ್ಯಪಾಲರಿಗೆ ನೇರ ಪತ್ರ ಬರೆಯುತ್ತೇನೆ ಎಂದರು.

ಮಾರ್ಗದರ್ಶಕನ ವಿರುದ್ಧ ದೂರು
ಇಲ್ಲಿ ನೊಂದ ವಿದ್ಯಾಥರ್ಣಟಿಜಜಜಿಟಿಜಜನಿ ಮೊದಲು ತನಗೆ ಪಿಎಚ್ಡಿ ಮಾರ್ಗದರ್ಶಕರಾದ ಮೂ,ರ್ತಿ ವಿರುದ್ಧ ದೂರು ಸಲ್ಲಿಸಿದ್ದರು.

ಅದಕ್ಕೆ ಸಾಕ್ಷಿ ಕೂಡ ಕೊಟ್ಟರು, ವಿಚಾರಣಾ ಸಮಿತಿ ವರದಿ ಬಂದ ನಂತರ ಆರೋಪಿತ ಪ್ರಾಧ್ಯಾಪಕ ಮೂತರ್ಣಟಿಜಜಜಿಟಿಜಜ ಅಮಾನತು ಆದರು.
ಇದಾದ ಬಳಿಕ ಸುಜಾತಾ ದೂರು ಹಿಂಪಡೆದರು. ಅಷ್ಟೇ ಅಲ್ಲ ರಾಜ್ಯಪಾಲರು ಪದವಿಗೆ ಒಪ್ಪಿಗೆ ನೀಡಿದರು. ಆದರೆ ಆ ಪದವಿ ಪಡೆಯುವುದಕ್ಕೆ ರಿಜಿಸ್ಟ್ರಾರ್ ಅವರು ತಡೆ ನೋಟೀಸ್ ನೀಡಿದ್ದು ಈಗ ಚರ್ಚ ವಸ್ತುವಾಗಿದೆ.

Leave a Reply

Your email address will not be published. Required fields are marked *

error: Content is protected !!