Headlines

ಅಹಿಂದ ಮರೆತ ಸಿದ್ದು ಸರ್ಕಾರ..?

ಸಿದ್ಧರಾಮಯ್ಯ ಅವರ ಅಹಿಂದ ಸರ್ಕಾರದಲ್ಲಿ ದಲಿತರಿಗೆ ವಾಸ್ತವವಾಗಿ ನ್ಯಾಯ ಸಿಗುತ್ತಿದೆಯೇ?
ಸುಜಾತಾ ಪೋಳ್ ಪ್ರಕರಣ, ಮಾರುತಿ ರಾವ್ ದೂರು, ತನಿಖೆಗಳ ಮುಚ್ಚುಮರೆ

ವಿಶ್ವವಿದ್ಯಾಲಯದೊಳಗಿನ ಜಾತಿ ದೌರ್ಜನ್ಯಕ್ಕೆ ಎದುರಾಗಿ ಅಹಿಂದ ಸರ್ಕಾರ ಮೌನವಾಗಿರುವುದಕ್ಕೆ ಕಾರಣವೇನು?”

ಅಹಿಂದ ಸರ್ಕಾರದ ಘೋಷಣೆ ಎಲ್ಲಿ? — ರಾಣಿ ಚನ್ನಮ್ಮ ವಿವಿಯಲ್ಲಿ ದಲಿತರಿಗೆ ನ್ಯಾಯ ಕಣ್ಮರೆಯೇ?”

ಸುಜಾತಾ ಪೋಳ್ ಆತ್ಮಹತ್ಯೆ ಯತ್ನ, ಮಾರುತಿ ರಾವ್ ದೂರು, ಮುಚ್ಚಿಹಾಕಲ್ಪಟ್ಟ ತನಿಖೆಗಳು—ವಿವಿ ಒಳಗಿನ ಜಾತಿ ದೌರ್ಜನ್ಯದ ಸರಪಳಿ ರಾಜ್ಯ ರಾಜಕೀಯವನ್ನು ಕವಿದ ಪ್ರಶ್ನೆ!”

ಇ ಬೆಳಗಾವಿ ವಿಶೇಷ ವರದಿ
ಬೆಳಗಾವಿ
ರಾಜ್ಯ ರಾಜಕೀಯದಲ್ಲಿ ಅಹಿಂದ ಪರ ಸರ್ಕಾರ ಎಂದು ಹೆಮ್ಮೆಯಿಂದ ಘೋಷಣೆ ಮಾಡಿಕೊಳ್ಳುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ಪರಿಶಿಷ್ಟರಿಗೆ ನ್ಯಾಯ ನೀಡುವಲ್ಲಿ ವಿಫಲವಾಗಿದೆಯೇ?
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಒಂದರ ಹಿಂದೆ ಒಂದು ಎದುರಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ ಘಟನೆಗಳು ಈಗ ಈ ಪ್ರಶ್ನೆಯನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಿವೆ.
ಪಿಎಚ್.ಡಿ. ವಿದ್ಯಾರ್ಥಿನಿ ಸುಜಾತಾ ಪೋಳ್ ಅವರಿಗೆ ಘಟಿಕೋತ್ಸವದಲ್ಲಿ ರಾಜ್ಯಪಾಲರ ಕೈಯಿಂದ ಪದವಿ ಸ್ವೀಕರಿಸುವ ಅವಕಾಶ ನಿರಾಕರಿಸಿದ್ದಕ್ಕೆ ಜಾತಿ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಇದರಿಂದ ನೊಂದ ವಿದ್ಯಾರ್ಥಿನಿ 18 ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸುವ ಮಟ್ಟಕ್ಕೆಹೋಯಿತು.

ಇಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾದರೂ ಅಲ್ಲಿನ ಪೊಲೀಸರು ಪ್ರಕರಣ ನೊಂದಾಯಿಸಲು ಮುಂದೆ ಬರಲಿಲ್ಲ. ಜೊತೆಗೆ ವಿವಿ ಸಹ ಪ್ರಕರಣ ಮುಚ್ಚಿಹಾಕಲು ಯತ್ನಿಸಿತು ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.

ಇದು ಮೊದಲ ಪ್ರಕರಣವಲ್ಲ
ಇದು ಸುಜಾತಾಳ ಪ್ರಕರಣ ಮಾತ್ರವಲ್ಲ. ವಿವಿಯಲ್ಲೇ ಹಿಂದೆಯೂ ದಲಿತ ಸಿಬ್ಬಂದಿ ಮತ್ತು ಅಧ್ಯಾಪಕರ ಮೇಲೆ ದೌರ್ಜನ್ಯ ನಡೆದಿದೆ ಎನ್ನುವ ದಾಖಲೆಗಳು ಇ ಬೆಳಗಾವಿಗೆ ಲಭ್ಯವಾಗಿವೆ.

Oplus_16908288

ಪ್ರೊ. ಎನ್. ಮಾರುತಿ ರಾವ್ 2024 ಸೆಪ್ಟೆಂಬರ್ 30ರಂದು ಕಾಕತಿ ಠಾಣೆಗೆ ದೂರುನೀಡಿದರು,
ಸಿಆರ್ಇಸೆಲ್ ತನಿಖೆ ಸರಿಯಾಗಿ ನಡೆಸದೆ ಪ್ರಕರಣಕ್ಕೆ ತಿಲಾಂಜಲಿ ನೀಡಿತು ಎನ್ನುವ ಆರೋಪಕೇಳಿ ಬರುತ್ತಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದಶನಾಲಯದ ವಿಚಾರಣೆ ಅಂತಿಮ ಹಂತಕ್ಕೆ ತಲುಪದೆ ಕೊಚ್ಚಿಕೊಂಡು ಹೋಗಿರುವ ಸ್ಥಿತಿ ತಂದಿಟ್ಟಿತು.
ಈ ಎಲ್ಲ ಘಟನೆಗಳಿಂದ ಬೇಸತ್ತ ಪ್ರೋ. ಮಾರುತಿ ರಾವ್ ಅವರು ತನಿಖಾಧಿಕಾರಿಗಳ ವಿರುದ್ಧವೇ ಹೊಸ ದೂರು ನೀಡಿದರು.

ಇವೆಲ್ಲ ಬೆಳವಣಿಗೆಗಳು ವಿಶ್ವವಿದ್ಯಾಲಯದೊಳಗಿನ ಜಾತಿ ಸಂವೇದನೆ ಎಲ್ಲಿದೆ? ಎಂಬ ಪ್ರಶ್ನೆ ಎದ್ದಿದೆ.

100ಕ್ಕೂ ಹೆಚ್ಚು ಪುಟಗಳ ದಾಖಲೆಗಳು
ಲಭ್ಯವಾದ 100 ಪುಟಗಳ ದಾಖಲೆಗಳು ವಿಸಿ ತ್ಯಾಗರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಹೊತ್ತಿವೆ.
ಕಿರುಕುಳ, ಅಧಿಕಾರದ ದುರುಪಯೋಗ ವಿಷಯಗಳು ಅತ್ಯಂತ ಸಂವೇದನಾಶೀಲ.
ಸುಜಾತಾ ಪೋಳ್ ಈ ದಾಖಲೆಗಳ ಆಧಾರದ ಮೇಲೆ
ಸೌಧದ ಮುಂದೆ ಅನಿರ್ದಿಷ್ಟ ಅವಧಿ ಪ್ರತಿಭಟನೆಯ ಯೋಜನೆ ಮಾಡಿಕೊಂಡಿದ್ದಾರೆ.

ಆದರೆ ಪೊಲೀಸರ ಅನುಮತಿ ಸಿಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ.

ಸಿಎಂ, ಗೃಹ ಸಚಿವರಿಗೆ ಪತ್ರ .
ಪ್ರೊ. ಮಾರುತಿ ರಾವ್ ಅವರು 2025 ಫೆಬ್ರವರಿ 15ರಂದು
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ, ಡಾ. ಎಚ್.ಸಿ. ಮಹದೇವಪ್ಪ ಮತ್ತು ಪರಿಶಿಷ್ಟ ಜಾತಿ, ಪಂಗಡ ಆಯೋಗಕ್ಕೆ
ವಿವರವಾದ ಪತ್ರ ರವಾನಿಸಿದ್ದಾರೆ.
ಆದರೆ: ಅಧಿಕಾರಿಗಳಿಂದ ಸ್ಪಷ್ಟ ಪ್ರತಿಕ್ರಿಯೆ ಇಲ್ಲ ತನಿಖೆಯ ವೇಗಕ್ಕೆ ಯಾವುದೇ ಹರಿತ ಇಲ್ಲ. ನೊಂದವರ ಕಿರುಕುಳ ಮುಂದುವರಿದೇ ಇದೆ.

ರಾಜ್ಯದಲ್ಲಿ ಅಹಿಂದ ಪರ ಎಂಬ ಘೋಷಣೆಯ ತಳಹದಿ ಬಲಹೀನವಾಗಿ ಕಾಣುತ್ತಿದೆ ಎಂಬ ಟೀಕೆ ಬಲ ಪಡೆದುಕೊಳ್ಳುತ್ತಿದೆ.

ಕಾಡುತ್ತಿರುವ ಪ್ರಶ್ನೆ:
ಸಿದ್ಧರಾಮಯ್ಯ ಅವರ ಅಹಿಂದ ಸಕರ್ಾರದಲ್ಲಿ ದಲಿತರಿಗೆ ನ್ಯಾಯ ಸಿಗುತ್ತಿದೆಯೇ?**
ಸುಜಾತಾ ಪ್ರಕರಣ, ಮಾರುತಿ ರಾವ್ ದೂರು, ಮುಚ್ಚಿಹಾಕಲ್ಪಟ್ಟ ತನಿಖೆಗಳು.
ಇವೆಲ್ಲ ಸೇರಿ ರಾಜಕೀಯ ವಲಯ, ಅಧ್ಯಾಪಕ ವಲಯ, ವಿದ್ಯಾರ್ಥಿ ಸಮೂಹದಲ್ಲಿ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಜಾತಿ ಆಧಾರಿತ ದೌರ್ಜನ್ಯಕ್ಕೆ ಎದುರಾಗಿ ಅಹಿಂದ ಸರ್ಕಾರ ಮೌನವಾಗಿರುವುದಕ್ಕೆ ಕಾರಣವೇನು?

Leave a Reply

Your email address will not be published. Required fields are marked *

error: Content is protected !!