ಶಾಸಕರ ಬಾಲ್ಯಕ್ಕೆ ರೀ ಎಂಟ್ರಿ..!

ಶಾಸಕ ಅಭಯ ಪಾಟೀಲರ ವಿನೂತನ ಕಾರ್ಯಕ್ರಮ.

ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಬಾಲ್ಯದ ಆಟಕ್ಕೆ ಯು.ಟಿ‌ ಖಾದರ್ ಚಾಲನೆ.

30 ಜನ ಶಾಸಕರು ಬಾಲ್ಯದ ಆಟದಲ್ಲಿ ಭಾಗಿ

Oplus_16908288

ಬೆಳಗಾವಿ.
ರಾಜ್ಯದ ಚಳಿಗಾಲದ ಅಧಿವೇಶನ ತೀವ್ರ ಚಚರ್ೆಗಳು, ರಾಜಕೀಯ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ, ಆದರೆ ಇದೆಲ್ಲದರ ನಡುವೆ ನಾಳೆ ದಿ. 11 ರಂದು ಬೆಳಿಗ್ಗೆ 7ಕ್ಕೆ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಸುಮಾರು 30 ಜನ ಶಾಸಕರಉ ತಮ್ಮಬಾಲ್ಯದ ಆಟಗಳನ್ನು ನೆನಪಿಸುತ್ತ ಆಟವಾಡುವ ಕ್ಷಣವನ್ನು ಕಾಣಬಹುದು.

ಈ ಬಾಲ್ಯದ ನೆನಪುಗಳನ್ನು ತಂದು ನಗು-ಸಂತಸದ ಜಾತ್ರೆ ಮಾಡಲು ಶಾಸಕ ಅಭಯ ಪಾಟೀಲರು ಆಯೋಜಿಸಿರುವ ಜನಪ್ರತಿನಿಧಿಗಳ ಬಾಲ್ಯದ ಆಟ ಮೇಳ ಈಗ ರಾಜಕೀಯ ವಲಯದಲ್ಲಿ ಚಚರ್ೆಯ ಕೇಂದ ಬಿಂದುವಾಗಿದೆ.

ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಅವರು ನಗುತ್ತಾ ಮತ್ತು ನಗಿಸುತ್ತ ಬಾಲ್ಯದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರೇ ಈ ಆಟವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಲಿದ್ದಾರೆ.
ಇಲ್ಲಿ ರಾಜಕೀಯ ಮಾತುಗಳಿಲ್ಲ, ಇಂದು ಆಟ ಇದೆ ಮಗುತನ ಇದೆ ಎಂದು ಹಾಸ್ಯದ ಮಾತುಗಳನ್ನೇ ಆರಂಭ ಮಾಡಲು ಅವರು ಮೈದಾನಕ್ಕೆ ಕಾಲಿಡುತ್ತಿದ್ದಾರೆ.
ಸುಮಾರು 30 ಜನ ಶಾಸಕರು ಪಕ್ಷ ಬೇಧ ಮರೆತು ಈ ಆಟದಲ್ಲಿ ಭಾಗವಹಿಸಲಿದ್ದಾರೆ. ಬಿಲೆ,್ಲ ಗಲ್ಲಿ ಕ್ರಿಕೆಟ್
ಲಗ್ಗೋರಿ, ಗೋಲಿ ಆಟ, ಪಂಕ್ಷರ ಆದ ಟಾಯರ್ನ್ನು ಬಡಿಗೆಯಿಂದ ಹೊಡೆದು ಓಡಿಸುವುದುಎಲ್ಲವೂ ನಾಳೆ ನೋಡಬಹುದು.

Leave a Reply

Your email address will not be published. Required fields are marked *

error: Content is protected !!