*ತಿರುವನಂತಪುರಂನಲ್ಲಿ ‘ಕಮ್ಯುನಿಸ್ಟ್ ಕೋಟೆ’ ಕುಸಿತ!
ಕೇರಳ ರಾಜಧಾನಿಯಲ್ಲಿ ಬಿಜೆಪಿ ಇತಿಹಾಸ – ಮೊದಲ ಬಾರಿಗೆ ಮೇಯರ್

ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯ 101 ವಾರ್ಡ್‌ಗಳಲ್ಲಿ 50 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹೊಸ ಇತಿಹಾಸ ಬರೆದಿದೆ. ಇದು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಗೆ ಭಾರಿ ಹೊಡೆತ ನೀಡಿದೆ. ತಿರುವನಂತಪುರಂನಲ್ಲಿ ಬಿಜೆಪಿಯ ಬಲಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
ತಿರುವನಂತಪುರಂ:
ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ದಶಕಗಳಿಂದ ಮುಂದುವರಿದಿದ್ದ ಸಿಪಿಎಂ ಯುಗಕ್ಕೆ ತೆರೆ ಬಿದ್ದಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ, ಇತಿಹಾಸದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಮೇಯರ್ ನೀಡುವತ್ತ ದಾಪುಗಾಲಿಟ್ಟಿದೆ.

50 ಸ್ಥಾನಗಳ ಪಾಲಿಕೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ರಾಜಕೀಯ ಭೂಕಂಪ ಸೃಷ್ಟಿಸಿದೆ. ಎಡಪಕ್ಷಗಳ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ರಾಜಧಾನಿಯೇ ಕಮಲದ ಬಣ್ಣದಲ್ಲಿ ಮುಳುಗಿದ್ದು, ಕೇರಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.
ಫಲಿತಾಂಶ –
ಬಿಜೆಪಿ (ಎನ್‌ಡಿಎ) – 50
ಎಲ್‌ಡಿಎಫ್ – 29
🤚 ಯುಡಿಎಫ್ – 19
🔹 ಇತರರು – 2
ಅಭ್ಯರ್ಥಿಯ ಸಾವಿನ ಹಿನ್ನೆಲೆಯಲ್ಲಿ ಒಂದು ವಾರ್ಡ್‌ನಲ್ಲಿ ಮತದಾನ ನಡೆಯಲಿಲ್ಲ.
- ಬಿಜೆಪಿ ನೇತೃತ್ವದ ಎನ್‌ಡಿಎ ತಿರುವನಂತಪುರಂ ಮಹಾನಗರ ಪಾಲಿಕೆಯ ಅಧಿಕಾರ ಸ್ವೀಕರಿಸಲು ಸಿದ್ಧ.
- ಎಡಪಕ್ಷಗಳ ಗಡಸುಗೋಡೆ ಕುಸಿತ – ಸಿಪಿಎಂಗೆ ಭಾರೀ ಆಘಾತ.
- ಮಾಜಿ ಕರ್ನಾಟಕ ಡಿಜಿಪಿ, ಬಿಜೆಪಿ ನಾಯಕಿ ಆರ್. ಶ್ರೀಲೇಖಾ ಸಸ್ತಮಂಗಲಂ ವಾರ್ಡ್‌ನಲ್ಲಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.
* ನಗರ ರಾಜಕಾರಣದಲ್ಲಿ ಬಿಜೆಪಿಯ ಶಿಸ್ತಿನ ಸಂಘಟನೆ, ತಂತ್ರಜ್ಞಾನ ಆಧಾರಿತ ಪ್ರಚಾರ ಫಲ ನೀಡಿದೆ.
ಫಲಿಸಿದ ‘ರಾಜೀವ್ ಚಂದ್ರಶೇಖರ ತಂತ್ರ’
ಕೇರಳದಲ್ಲಿ ಬಿಜೆಪಿ ಬಲವರ್ಧನೆಗೆ ರೂಪಿಸಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಅವರ ಸೂಕ್ಷ್ಮ ತಂತ್ರ, ನೆಲಮಟ್ಟದ ಸಂಘಟನೆ ಮತ್ತು ಯುವ ಮತದಾರರ ಸೆಳೆತ ಈ ಇತಿಹಾಸಾತ್ಮಕ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಎಡಪಕ್ಷಗಳ ಅಜೇಯ ಕೋಟೆ ಎಂದೇ ಹೆಸರು ಪಡೆದಿದ್ದ ತಿರುವನಂತಪುರಂ ಇಂದು ಕಮಲದ ನಗುವಿಗೆ ಸಾಕ್ಷಿಯಾಗಿದೆ.
ಇದು ಕೇವಲ ಪಾಲಿಕೆ ಚುನಾವಣೆ ಫಲಿತಾಂಶವಲ್ಲ –
👉 ಕೇರಳ ರಾಜಕೀಯದ ದಿಕ್ಕು ಬದಲಿಸುವ ಸೂಚನೆ
👉 ಬಿಜೆಪಿಯ ದಕ್ಷಿಣ ಭಾರತದ ದಾಪುಗಾಲಿನ ಘೋಷಣೆ

