Headlines

ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ರದ್ದು

ಬೆಳಗಾವಿ:
ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸನ್ನವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಹಾಗೂ ಅದರ ಆಧಾರದಲ್ಲಿ ಕೈಗೊಂಡಿದ್ದ ಚುನಾವಣಾ ಪ್ರಕ್ರಿಯೆಯನ್ನು ಕನರ್ಾಟಕ ಹೈಕೋರ್ಟ್ ಧಾರವಾಡ ಪೀಠ ರದ್ದುಗೊಳಿಸಿದೆ.

ಈ ಮೂಲಕ ಕಿವಡಸನ್ನವರ ಅವರು ಅಧ್ಯಕ್ಷ ಸ್ಥಾನದಲ್ಲೇ ಕಾರ್ಯನಿರ್ವಹಿಸಲು ಅವಕಾಶ ದೊರೆತಿದೆ.
ಸೆಪ್ಟೆಂಬರ್ 20 ರಂದು ಹೊಸ ಪದಾಧಿಕಾರಿಗಳ ಆಯ್ಕೆಗಾಗಿ ಕೈಗೊಳ್ಳಲಾಗಿದ್ದ ಪ್ರಕ್ರಿಯೆ ಸಂಘದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ನಡೆದ ಎಲ್ಲ ಕ್ರಮಗಳನ್ನು ನ್ಯಾಯಾಲಯ ಅಮಾನ್ಯಗೊಳಿಸಿದೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಿವಡಸನ್ನವರ, ಬಾರ್ ಅಸೋಸಿಯೇಷನ್ನ ಚಟುವಟಿಕೆಗಳು ಸಂಪೂರ್ಣವಾಗಿ ಕಾನೂನು ಚೌಕಟ್ಟಿನೊಳಗೇ ನಡೆಯುತ್ತಿದ್ದು, ಅವಿಶ್ವಾಸ ನಿರ್ಣಯಕ್ಕೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.
2025ರ ಡಿಸೆಂಬರ್ 15ರಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ನೀಡಿದ ತೀರ್ಪು ಎದುರಾಳಿಗಳಿಂದ ಮುಂದಿಟ್ಟಿದ್ದ ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿದ್ದು, ನನಗೆ ಮತ್ತೊಮ್ಮೆ ವಕೀಲರ ಸೇವೆ ಸಲ್ಲಿಸುವ ಅವಕಾಶ ನೀಡಿದೆ ಎಂದು ತಿಳಿಸಿದರು.

ಕಾನೂನು ಉಲ್ಲಂಘಿಸಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದು ಮಾನ್ಯವಾಗುವುದಿಲ್ಲ ಎಂಬುದಕ್ಕೆ ಈ ತೀರ್ಪು ಸ್ಪಷ್ಟ ಉದಾಹರಣೆ ಎಂದು ಕಿವಡಸನ್ನವರ ಹೇಳಿದರು.
ಕಳೆದ ಕೆಲ ತಿಂಗಳ ಬೆಳವಣಿಗೆಗಳನ್ನು ಕೆಟ್ಟ ಕನಸಿನಂತೆ ಪರಿಗಣಿಸುವುದಾಗಿ ಹೇಳಿದ ಅವರು, ಮುಂದಿನ ದಿನಗಳಲ್ಲಿ ಬಾರ್ನ ಹಿರಿಯರು ಹಾಗೂ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಬರುವ ದಿನಗಳಲ್ಲಿ ಬೆಳಗಾವಿ ಬಾರ್ ಅಸೋಸಿಯೇಷನ್ನ 150 ವರ್ಷಗಳ ಸಂಭ್ರಮವನ್ನು ಎಲ್ಲರನ್ನು ಒಗ್ಗೂಡಿಸಿಕೊಂಡು ವಿನಮ್ರತೆಯಿಂದ ಆಚರಿಸುವ ಗುರಿಯಿದೆ ಎಂದರು.


ಈ ಪ್ರಕರಣದಲ್ಲಿ ಬೆಂಬಲ ನೀಡಿದ ಧಾರವಾಡ ಹೈಕೋಟರ್್ನ ಹಿರಿಯ ವಕೀಲರಾದ ವಿ.ಎಂ. ಶೀಲವಂತ್ ಹಾಗೂ ಎ.ಎಲ್. ನೀಲೋಪಂತ್ ಸೇರಿದಂತೆ, ಸಹೋದ್ಯೋಗಿ ವಕೀಲರಾದ ಧನರಾಜ್ ಗವಳಿ, ವಿಜಯ ಎನ್. ಹೊನ್ಮಣಿ, ಪ್ರಶಾಂತ್ ವಾಡೇಯರ್ ಮತ್ತು ಸುಭಾಷ್ ಪಟ್ಟನಶೆಟ್ಟಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು

Leave a Reply

Your email address will not be published. Required fields are marked *

error: Content is protected !!