ಸಚಿವೆ ಹೆಬ್ಬಾ:ಳಕರ ಇಲಾಖೆಯ
ದಾಖಲೆಗಳು ಮಾಧ್ಯಮಗಳಿಗೆ ಹೇಗೆ ತಲುಪುತ್ತಿವೆ?
ಸಚಿವರಿಗೆ ಬಗಲ್ಮೆ ದುಶ್ಮನ್ ಯಾರು ಗೊತ್ತಾ?
(ಇ ಬೆಳಗಾವಿ ವಿಶೇಷ)
ಹಗರಣಗಳ ಇಲಾಖೆ ಎಂದೇ ಹೆಸರಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದಾಖಲೆಗಳನ್ನು ಕೆದಕುತ್ತ ಹೋದರೆ ಬ್ರಹ್ಮಾಂಡ ಭ್ರಷ್ಟಾಚಾರದ ಹೂರಣವೇ ಹೊರಬರುತ್ತದೆ. ಬಿಜೆಪಿ ಸರ್ಕಾರದಲ್ಲೂ ಕೂಡ ಈ ಇಲಾಖೆ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು.
ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಇಲಾಖೆಯ ಹಗರಣದ ದಾಖಲೆಗಳನ್ನು ಶೋಧಿಸಲು ಅಷ್ಟೊಂದು ಹರಸಾಹಸ ಮಾಡಬೇಕಾದ ಅಗತ್ಯವೇ ಬರಲ್ಲ. ಏಕೆಂದರೆ ಸಚಿವರ ಹಿಂದೆ, ಮುಂದಿರುವ ಕೆಲ ವ್ಯಕ್ತಿಗಳೆ ಮಾಧ್ಯಮಗಳಿಗೆ ದಾಖಲೆಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಚಿವರಿಗೆ ಒಂದಿಷ್ಟು ಇರಿಸು ಮುರಿಸು ಉಂಟುಮಾಡುತ್ತಿದೆ.
ಆದರೆ ಪಕ್ಷದ ಹೈಕಮಾಂಡಗೆ ಸಚಿವೆ ಹೆಬ್ಬಾಳಕರ ಅವರು ಇಲಾಖೆಯನ್ನು ಸರಿದೂಗಿಸಿಕೊಂಡು ಹೋಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಪರಿಸ್ಥಿತಿ ಇನ್ನಷ್ಟು ಕೆಡುವುದಕ್ಕಿಂತ ಮುಂಚೆ ಸಚಿವರು ಎಚ್ಚೆತ್ತುಕೊಳ್ಳಬೇಕಾದ ಅನುವಾರ್ಯತೆ ಇದೆ. ಕಾದು ನೋಡೋಣ.
ಬೆಳಗಾವಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೇಂದ್ರವಾಗಿಸಿಕೊಂಡು ಒಂದಾದ ಮೇಲೊಂದಾಗಿ ಹೊರಬರುತ್ತಿರುವ ವಿವಾದಗಳು ಈಗ ಕೇವಲ ಸದನದ ಮಾತುಕತೆಯ ಮಟ್ಟಕ್ಕೆ ಸೀಮಿತವಾಗಿಲ್ಲ.
ಅವರ ಇಲಾಖೆಯೊಳಗಿನ ಒಳಹೋರಾಟ, ದಾಖಲೆಗಳ ಲೀಕ್ ಮತ್ತು ಆಂತರಿಕ ರಾಜಕೀಯ ಸಂಚಲನ ಎಂಬ ಹೊಸ ಆಯಾಮಕ್ಕೆ ಪ್ರವೇಶಿಸಿದೆ.
ಇತ್ತೀಚಿನ ದಿನಗಳಲ್ಲಿ, ಸಚಿವೆ ಹೆಬ್ಬಾಳಕರ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಗೋಲ್ಮಾಲ್, ಆಡಳಿತಾತ್ಮಕ ತೀಮರ್ಾನಗಳ ಅಕ್ರಮಗಳು, ಕಡತ ಚಲಾವಣೆಯ ವೈರುಧ್ಯಗಳ ದಾಖಲೆಗಳು ಅಚ್ಚರಿಯಂತೆ ವ್ಯವಸ್ಥಿತವಾಗಿ ಮಾಧ್ಯಮಗಳಿಗೆ ತಲುಪುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚಚರ್ೆಗೆ ಕಾರಣವಾಗಿದೆ.

ದಾಖಲೆಗಳು ಮೂಲ ಎಲ್ಲಿ?
ಇಲ್ಲಿ ಇಲಾಖೆಯ ದಾಖಲೆಗಳನ್ನು ಮಾಧ್ಯಮಗಳಿಗೆ ತಲುಪಿಸುತ್ತಿರುವ ಆ ‘ವ್ಯಕ್ತಿ’ ಯಾರು ಎನ್ನುವ ಬಹುದೊಡ್ಡ ಪ್ರಶ್ಮೆ ಬುತೇಕರನ್ನು ಕಾಡುತ್ತಿದೆ.
ವಿಶೇಷವೆಂದರೆ, ಈ ದಾಖಲೆಗಳು ಗಾಳಿ ಮಾತುಗಳಲ್ಲ. ಕಡತ ಸಂಖ್ಯೆ, ದಿನಾಂಕ, ಟೆಂಡರ್ ಪ್ರಕ್ರಿಯೆಯ ವಿವರಗಳು, ಅಧಿಕಾರಿಗಳ ಸಹಿಗಳು ಎಲ್ಲವೂ ಇರುವಂತೆ, ಸಕರ್ಾರಿ ದಾಖಲೆಗಳ ನಕಲುಗಳೇ ಮಾಧ್ಯಮದ ಕೈ ಸೇರುತ್ತಿವೆ.
ಇದರಿಂದಾಗಿ, ಇದು ಹೊರಗಿನ ಯಾರೋ ಮಾಡಿದ ಕಿತಾಪತಿ ಅಲ್ಲ,. ಇದು ಇಲಾಖೆಯೊಳಗಿನಿಂದಲೇ ಅಥವಾ ಸಚಿವರ ಆಪ್ತರೇ ಎನಿಸಿಕೊಂಡಿರುವ ಹೊರಗಿನವರುಮಾಡುತ್ತಿರಬಹುದೇ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.
ವಿವಾದಾಸ್ಪದ ಅಧಿಕಾರಿ ಮೌನದ ನೆರಳು
ಆಡಳಿತ ವಲಯದಲ್ಲಿ ಬಹಳ ಕಾಲದಿಂದಲೇ ‘ಅತ್ಯಂತ ವಿವಾದಾಸ್ಪದ ವ್ಯಕ್ತಿ’ ಎಂದೇ ಗುರುತಿಸಿಕೊಂಡಿರುವ ಇಲಾಖೆಯ ಒಬ್ಬ ಹಿರಿಯ ಅಧಿಕಾರಿಯ ಹೆಸರು ಒಳಗಟ್ಟಿನ ಚಚರ್ೆಗಳಲ್ಲಿ ಮರುಮರು ಕೇಳಿಬರುತ್ತಿದೆ.
ಟೆಂಡರ್ ವಿಷಯದಲ್ಲಿ ನಡೆದ ಎನ್ನಲಾದ ಅಕ್ರಮಗಳು, ನಿದರ್ಿಷ್ಟ ಗುತ್ತಿಗೆದಾರರಿಗೆ ಲಾಭವಾಗುವಂತೆ ರೂಪಿಸಿದ ಷರತ್ತುಗಳು, ತುತರ್ು ಅನುಮೋದನೆಗಳು ಇವೆಲ್ಲದರ ಕುರಿತ ದಾಖಲೆಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂಯೋಗವೇ?
ಆದರೆ ಇಲ್ಲಿಯವರೆಗೆ ಯಾವುದೇ ಅಧಿಕೃತ ತನಿಖೆ ಆರಂಭವಾಗಿಲ್ಲ. ಆರೋಪಗಳಿವೆ, ದಾಖಲೆಗಳಿವೆ, ಆದರೆ ಸ್ಪಷ್ಟ ಉತ್ತರಗಳಿಲ್ಲ.
ಆಪ್ತ ಬಳಗದಲ್ಲೇ ಭೇದವೇ?

ಈ ದಾಖಲೆ ಲೀಕ್ಗಳ ಹಿಂದೆ ಸಚಿವೆ ಹೆಬ್ಬಾಳಕರ ಅವರ ಆಪ್ತ ಬಳಗದಲ್ಲೇ ಸೇರಿದ ವ್ಯಕ್ತಿಯೊಬ್ಬರ ಕೈವಾಡವಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಸಚಿವೆ ಸಮೀಪದಲ್ಲೇ ಇದ್ದು, ಇಲಾಖೆಯ ಒಳ ವ್ಯವಸ್ಥೆ ಗೊತ್ತಿರುವ ವ್ಯಕ್ತಿಯೊಬ್ಬರು ಇಂತಹುದನ್ನುಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಒಂದು ಕಡೆ ಅಧಿಕಾರಿಗಳೊಂದಿಗೆ ನಿಕಟತೆ, ಇನ್ನೊಂದು ಕಡೆ ರಾಜಕೀಯ ಲೆಕ್ಕಾಚಾರ ಈ ಎರಡರ ನಡುವೆ ಆಡುತ್ತಿರುವ ಡಬಲ್ ಗೇಮ್ ಇದಾಗಿರಬಹುದೇ?

ಈ ಪ್ರಶ್ನೆಗೆ ಉತ್ತರ ಸಿಗದಿರುವುದೇ ಇಡೀ ವಿವಾದಕ್ಕೆ ಇನ್ನಷ್ಟು ಇಂಧನ ಸುರಿಯುತ್ತಿದೆ.
ಯಾರ ವಿರುದ್ಧ ಯುದ್ಧ?
ಈ ದಾಖಲೆ ಲೀಕ್ ಮಾಡುತ್ತಿರುವವರ ಮುಖ್ಯ ಟಾಗರ್ೆಟ್ ಸಚಿವ ಹೆಬ್ಬಾಳಕರ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಸಚಿವರನ್ನು ಟಾರ್ಗೆಟ್ ಮಾಡುತ್ತಿರುವವರು ಇಲಾಖೆಯೊಳಗಿನ ಅಧಿಕಾರಿಗಳ ಗುಂಪೇ? ಅಥವಾ ಸಚಿವರೊಂದಿಗೆ ಇದ್ದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವವರು ಯಾರು ಎನ್ನುವ ಮಾತುಗಳು ಎಲ್ಲೆಡೆ ಚರ್ಚೆಯ ವಸ್ತುವಾಗಿದೆ.
ಒಂದು ಕಡೆ, ಸದನದಲ್ಲಿ ಸಚಿವೆ ವಿರುದ್ಧ ಪ್ರತಿಪಕ್ಷ ತೀವ್ರ ದಾಳಿ ನಡೆಸುತ್ತಿದೆ. ಇನ್ನೊಂದು ಕಡೆ, ಹೊರಗೆ ದಾಖಲೆಗಳ ಮೂಲಕ ಒತ್ತಡ ಹೆಚ್ಚುತ್ತಿದೆ. ಇದನ್ನೆಲ್ಲ ಒಟ್ಟಿಗೆ ನೋಡಿದರೆ, ಇದು ಕೇವಲ ರಾಜಕೀಯ ವಿರೋಧಿಗಳ ಕಾರ್ಯವಲ್ಲ; ಸಕರ್ಾರದೊಳಗಿನ ಶಕ್ತಿ ಸಂಘರ್ಷದ ಪ್ರತಿಫಲನವೋ? ಎಂಬ ಅನುಮಾನವೂ ಮೂಡುತ್ತದೆ.

