ಸೈಕಲ್, ಸಮವಸ್ತ್ರ, ಪಾಠಿಚೀಲ…
ಶಾಸಕ ಅಭಯ್ ಪಾಟೀಲರೊಂದಿಗೆ ಬಾಲ್ಯದ ಬೀದಿಗಳಲ್ಲಿ ಹರಿದ ನೂರು ನೆನಪುಗಳು**
ಚಿಂತಾಮಣ್‌ರಾವ್ ಶಾಲೆ ಶತಮಾನೋತ್ಸವ – ‘ನೂರು ವರ್ಷ, ನೂರು ಜೀವಿತಗಳು’
ಬೆಳಗಾವಿ:
ಶಾಲೆಯ ಬೆಲ್ ಶಬ್ದ ಕೇಳುತ್ತಿದ್ದಂತೆಯೇ ಹೃದಯದಲ್ಲಿ ಏನೋ ಕಂಪನ…
ಕ್ಲಾಸ್‌ರೂಮ್‌ನ ಸುಗಂಧ, ಚಾಕ್‌ನ ಧೂಳು, ಪೆನ್ನಿನ ಸದ್ದು,
ಮಾತಿನ ಮಧ್ಯೆ ನಗು, ಕಣ್ಣಂಚಿನ ಕನಸು…
ಈ ಎಲ್ಲವೂ ಶನಿವಾರ ಮತ್ತೆ ಜೀವಂತವಾಯಿತು.
ಕಾರಣ —

ಶಹಾಪುರದ ಹೆಮ್ಮೆ ಚಿಂತಾಮಣ್‌ರಾವ್ ಸರ್ಕಾರಿ ಶಾಲೆ ತನ್ನ ನೂರು ವರ್ಷದ ಪಯಣವನ್ನು
ನೆನಪುಗಳ ಮಹೋತ್ಸವವಾಗಿ ಆಚರಿಸಿತು.
ಆ ಸಂಭ್ರಮಕ್ಕೆ ಆತ್ಮ ತುಂಬಿದವರು —
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲರು.
“ಒಂದು ದಿನ ಶಾಸಕನಲ್ಲ… ನಾನು ಮತ್ತೆ ವಿದ್ಯಾರ್ಥಿ”
ಬೆಳಿಗ್ಗೆ ಮನೆ ಬಾಗಿಲು ತೆರೆದ ಕ್ಷಣದಿಂದಲೇ
ಅಭಯ್ ಪಾಟೀಲರು ಶಾಸಕರಲ್ಲ —
ಅವರು ಚಿಂತಾಮಣ್‌ರಾವ್ ಶಾಲೆಯ ವಿದ್ಯಾರ್ಥಿ.
ಹೆಗಲಿಗೊಂದು ಪಾಠಿಚೀಲ,

ದೇಹದ ಮೇಲೆ ಹಳೆಯ ಶೈಲಿಯ ಸಮವಸ್ತ್ರ,
ಮುಂಭಾಗದಲ್ಲಿ ಸೈಕಲ್… ಅದೇ ಅವರ ಕಾಲಯಂತ್ರ.
ಶಾಲೆಗೆ ಹೊರಡುವ ಮುನ್ನ ನಾರ್ವೇಕರ ಗಲ್ಲಿಯ ರವಿ ಅಂಗಡಿಗೆ ನಿಂತು, ಹಳೆಯ ನಾಣ್ಯಗಳನ್ನು ಕೈಯಲ್ಲಿ ಹಿಡಿದು ಪೇಪರ್‌ಮೆಂಟ್, ನೀಲಂ ಸುಪಾರಿ, ಚಾಕಲೇಟ್ ಖರೀದಿಸಿದ ಕ್ಷಣ —
ಶಹಾಪೂರವೇ ಒಂದು ದೊಡ್ಡ ತರಗತಿಯಾಗಿ ಮಾರ್ಪಟ್ಟಿತ್ತು. ಅಂಗಡಿಯಲ್ಲೊಂದು ಕಾಲಪ್ರಯಾಣ
ಅದು ಕೇವಲ ಖರೀದಿಯಲ್ಲ… ಅದು ಬಾಲ್ಯದ ಕಿಟಕಿ ತೆರೆದ ಕ್ಷಣ. ಇದೇ ಅಂಗಡಿಯೇ 1985ರಲ್ಲಿ ನಮ್ಮ ಕನಸುಗಳ ತಾಣವಾಗಿತ್ತು.

ಇವತ್ತೂ ಅದೇ ನಾಣ್ಯಗಳಿಂದ ಖರೀದಿ ಮಾಡಿದ್ದೇನೆ…
ಅದು ಬದುಕಿನ ಅಮೂಲ್ಯ ಕ್ಷಣ ಎಂದು
ಅಭಯ್ ಪಾಟೀಲ್ ಹೇಳಿದರು.
ಬೀದಿಗಳಲ್ಲಿ ಹರಿದ ಬಾಲ್ಯದ ಸಂಗೀತ
ಸರಸ್ವತಿ ಶಾಲೆ ರಸ್ತೆ, ಖಡೇ ಬಜಾರ್, ಮೀರಾಪುರ ಗಲ್ಲಿ… ಸೈಕಲ್ ಚಕ್ರಗಳ ಸದ್ದು, ಗೆಳೆಯರ ನಗು,
ಹಳೆಯ ಮನೆಗಳ ನೆರಳು —
ಎಲ್ಲವೂ ಸೇರಿ ಒಂದು ಚಿತ್ರಕಥೆಯಂತಿತ್ತು.
ಚಿಂತಾಮಣ್‌ರಾವ್ ಶಾಲೆಯ ಬಾಗಿಲು ದಾಟುತ್ತಿದ್ದಂತೆಯೇಅವರ ಕಣ್ಣುಗಳಲ್ಲಿ ಒಂದು ಮಗು ನಗುತ್ತಿತ್ತು.
ಜನಗಣಮನ ಕೇಳುತ್ತಿದ್ದಂತೆಯೇ ಕಣ್ಣಲ್ಲಿ ನೀರು
ಪ್ರಾರ್ಥರಾಷ್ಟ್ರಗೀತೆ…ಬೆಲ್…ಬಾರಿಸುತ್ಬತಿದ್ಬೆದಂತೆಲ್…
ಶಿಕ್ಷಕಿ ನೀಲಗಂಗಾ ಚರಂತಿಮಠ ಹಾಜರಿ ತೆಗೆದುಕೊಳ್ಳುತ್ತಿದ್ದಂತೆ ಎಲ್ಲರೂ ಎದ್ದು “ನಮಸ್ತೆ ಟೀಚರ್” ಎಂದ ಕ್ಷಣದಲ್ಲಿ ಹಳೆಯ ವಿದ್ಯಾರ್ಥಿಗಳ ಹೃದಯದಲ್ಲಿ ವರ್ಷಗಳ ಮೌನ ಒಡೆದಿತ್ತು.

ಸಾವಿರ ಕೋಟಿ ಕೊಟ್ಡರೂ ಸಿಗದ ನೆನಪುಗಳು..

“ನಾವು 1988ರಲ್ಲಿ ಇಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದೇವೆ.ಇಂದು ಮತ್ತೆ ವಿದ್ಯಾರ್ಥಿಯಾಗಿದ್ದು —
ಜೀವನದ ಅಮೂಲ್ಯ ಅನುಭವ.
ಈ ನೆನಪುಗಳು ಸಾವಿರಾರು ಕೋಟಿ ಕೊಟ್ಟರೂ ಮರಳುವುದಿಲ್ಲ.”
ಅಭಯ ಪಾಟೀಲ. ಶಾಸಕರು. ಬೆಳಗಾವಿ

“ನಾವು ಜಗತ್ತಿನ ಬೇರೆ ಬೇರೆ ಕಡೆ ಇದ್ದರೂ,
ಇಂದು ಮತ್ತೆ ಚಿಂತಾಮಣ್‌ರಾವ್ ಶಾಲೆಯ ಮಕ್ಕಳಾಗಿದ್ದೇವೆ.” *ಚಿಂತಾಮಣ್‌ರಾವ್ ಶಾಲೆಯ ಶತಮಾನೋತ್ಸವ ಬೆಳಗಾವಿಯ ಆತ್ಮಕ್ಕೆ ಮತ್ತೆ ಬಾಲ್ಯದ ಧ್ವನಿ ಕೊಟ್ಟ ದಿನವಾಯಿತು.
ಚಂದ್ರಶೇಖರ್ ಹಿರೇಮಠ (ಜರ್ಮನಿಯಿಂದ):

