ಬೆಳಗಾವಿ ಪಾಲಿಕೆ ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ
ಅಧ್ಯಕ್ಷರು ಯಾರಾಗ್ತಾರೆ ಎನ್ನುವ ಕುತೂಹಲ. ಹಿಂದೆ ಅಧ್ಯಕ್ಷರಾದವರನ್ನು ಬಿಟ್ಡು ಹೊಸಬರಿಗೆ ಅವಕಾಶ? ಮೇಯರಗಿರಿ ಮೇಲೆ ಕಣ್ಣಿಟ್ಟವರಿಗೆ ಅಧ್ಯಕ್ಷಗಿರಿ ಪಟ್ಟ? ಅಭಯ ಪಾಟೀಲಬೆಳಗಾವಿ.ಮೂರು ಬಾರಿ ಮುಂದೂಡಲ್ಪಟ್ಟ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಒಟ್ಟು ಒಂದು ಕಮಿಟಿಯಲ್ಲಿ ಏಳು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಆಡಳಿತ ಪಕ್ಷದಿಂದ ಐವರು ಮತ್ತು ವಿರೋಧ ಪಕ್ಷದವರಿಂದ ಇಬ್ಬರನ್ನು ಆಯ್ಕೆ ಮಾಡಲಾಯಿತು.ಆರಂಭಿಕ ಹಂತದಲ್ಲಿ ವಿರೋಧ ಪಕ್ಷದವರು ತಮಗೆ ಕನಿಷ್ಟ ಮೂರು ಸ್ಥಾನಬೇಕೆಂದು ಪಟ್ಟು ಹಿಡಿದಿದ್ದರು, ಆದರೆ ಅದಕ್ಕೆ…

