ಕೃಷ್ಣಮೃಗಗಳ ಸಾವಿನ ಬಗ್ಗೆ ನಿರ್ಲಕ್ಷ್ಯ ಬೇಡ- ಸಚಿವ ಸತೀಶ್

ಬೆಳಗಾವಿ: ರಾಣಿ ಚೆನ್ನಮ್ಮ ಮಿನಿ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವುಗಳು ಆತಂಕ ಸೃಷ್ಟಿಸಿರುವ ಹಿನ್ನೆಲೆ, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ತುರ್ತುವಾಗಿ ಮೃಗಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು.ಪ್ರಾಣಿಗಳ ಆರೈಕೆ, ಕಾಯಿಲೆ ವ್ಯಾಪಕಗೊಳ್ಳುತ್ತಿರುವ ಶಂಕೆ ಹಾಗೂ ಮೃಗಾಲಯದ ಒಳಗಿನ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು, “ಯಾವುದೇ ನಿರ್ಲಕ್ಷ್ಯ ಮರುಕಳಿಸಬಾರದು” ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಕೃಷ್ಣಮೃಗಗಳಲ್ಲಿ ವೈರಲ್‌ ರೋಗ ಕಾಣಿಸಿಕೊಂಡಿದ್ದರಿಂದ ಅನೇಕ ಮೃಗಗಳು…

Read More

ರಾಜ್ಯದಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿ ಬೆಳೆದಿದೆ: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ : ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಅತ್ಯಂತ ಬಲಿಷ್ಟವಾಗಿ ಬೆಳೆದಿದ್ದು, ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.ಸೋಮವಾರ ದಾಸ್ತಿಕೊಪ್ಪ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 101ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅನೇಕ ಮಹನೀಯರು ಸಹಕಾರ ಕ್ಷೇತ್ರವನ್ನು ಬೆಳೆಸಿದ್ದಾರೆ. ಹಿರಿಯರ ಆಶಯದಂತೆ ಬೆಳೆಸಿಕೊಂಡು ಹೋಗಬೇಕು. ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು ಸಹಕಾರ ತತ್ವದಡಿ ಕೆಲಸ ಮಾಡಿದರೆ ಜನರಿಗೆ ಬಹಳಷ್ಟು ಅನುಕೂಲ ಮಾಡಿಕೊಡಬಹುದು…

Read More

ಅಧಿವೇಶನದೊಳಗೆ ಪತ್ರಕರ್ತರ ಭವನ ಕಾಮಗಾರಿ ಆರಂಭ

ಪತ್ರಕರ್ತರ ಭವನಕ್ಕೆ 9 ಕೋಟಿ 90 ಲಕ್ಷ ರೂ ಮಂಜೂರು ಮಾಡಿಸಿದ ಸಚಿವ ಸತೀಶ ಜಾರಕಿಹೊಳಿ. ವಾರ್ತಾ ಇಲಾಖೆ ಅಧೀನದಲ್ಲಿ ಪತ್ರಕರ್ತರ ಭವನ ನಿರ್ಮಾಣ. ಡಿಸೆಂಬರ ಅಧಿವೇಶನ ಸಂದರ್ಭದಲ್ಲಿ ಸಿಎಂರಿಂ ಕಾಮಗಾರಿಗೆ ಪೂಜೆ ಸಚಿವ ಜಾರಕಿಹೊಳಿ ಅವರನ್ನು ಅಭಿನಂದಿಸಿದ ಬೆಳಗಾವಿ ಪತ್ರಕರ್ತರ ( ಮುದ್ರಣ) ಸಂಘ. ಬೆಳಗಾವಿ ಬೆಳಗಾವಿ ಪತ್ರಕರ್ತರ ಭವನಕ್ಕೆ 9 ಕೋಟಿ 90 ಲಕ್ಷ ರೂ ಮಂಜೂರಾತಿ ಸಿಕ್ಕಿದ್ದು, ಅಧಿವೇಶನದಲ್ಲೇ‌ ಕಟ್ಟಡ ಕಾಮಗಾರಿ ಆರಂಭಿಸುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು…

Read More

ಬಿಹಾರ ಎಫೆಕ್ಟ್-ಕರ್ನಾಟಕ ಸಮೀಕರಣ ಬದಲಾವಣೆ?

ಬಿಹಾರ ಚುನಾವಣಾ ಗಾಳಿ ಕರ್ನಾಟಕದಲ್ಲೂ  ಸಮೀಕರಣಗಳ ಬದಲಾವಣೆ? (E belagavi ವಿಶೇಷ)ಬೆಂಗಳೂರು:ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ದಾಖಲೆಯ ಗೆಲುವು ಸಾಧಿಸಿದ ಬಳಿಕ, ದೇಶದಾದ್ಯಂತ ರಾಜಕೀಯ ಚರ್ಚೆಗಳು ಪುನರುತ್ಥಾನಗೊಂಡಿವೆ. ಅದರ ಪರಿಣಾಮ ಕರ್ನಾಟಕದಲ್ಲಿಯೂ ಮುಂಬರುವ ವಿಧಾನಸಭೆ ಚುನಾವಣೆಗೆ ಹೊಸ ರಾಜಕೀಯ ವಾತಾವರಣ ನಿರ್ಮಾಣವಾಗಬಹುದೇ? ಎಂಬ ಪ್ರಶ್ನೆ ತೀವ್ರವಾಗಿ ಕೇಳಿಬರುತ್ತಿದೆ.ಬಿಹಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವಕ್ಕೆ ದೊರೆತ ಭರ್ಜರಿ ಬೆಂಬಲ, ಕರ್ನಾಟಕ BJP ಶಿಬಿರದಲ್ಲಿ ಚೈತನ್ಯ ಮೆರೆಯುತ್ತಿದೆ.(E belagavi) ಇದೊಂದು ಐತಿಹಾಸಿಕ…

Read More

ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ !

ಮಹಾಲಿಂಗಪುರ:ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಕೋಪಗೊಂಡ ರೈತರು ಗುರುವಾರ ಮಹಾಲಿಂಗಪುರದಲ್ಲಿ ಆಕ್ರೋಶದ ಅಗ್ನಿಯನ್ನು ಹಚ್ಚಿದ್ದಾರೆ! ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಶುಕ್ರವಾರದಿಂದ ಕಾರ್ಖಾನೆ ಕಾರ್ಯಾರಂಭ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯವರು ಸುಮಾರು 150 ಟ್ರ್ಯಾಕ್ಟರ್‌ಗಳಲ್ಲಿ ಕಬ್ಬು ತುಂಬಿಸಿ ಇಟ್ಟುಕೊಂಡಿದ್ದರು. ಆದರೆ ಹಿಂದಿನ ಬಾಕಿ ಹಣ ಬಿಡುಗಡೆ ಕುರಿತು ಯಾವುದೇ ಖಚಿತ ಭರವಸೆ ನೀಡದಿರುವುದು, ಜೊತೆಗೆ ಪ್ರತಿ ಟನ್‌ಗೆ ಕೇವಲ…

Read More

ಧೂಮ್ ಸ್ಟೈಲ್ ಕಳ್ಳನ‌ ಬಂಧಿಸಿದ ಯಮಕನಮರಡಿ ಪೊಲೀಸ್

₹95 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ನಗದು ಮತ್ತು ವಾಹನ ವಶ – ಜಿಲ್ಲಾ ಪೊಲೀಸ್ ತಂಡದ ಶ್ಲಾಘನೀಯ ಪತ್ತೆ. ಬೆಳಗಾವಿ: ಧೂಮ್ ಚಲನ ಚಿತ್ರದ ಮಾದರಿಯಲ್ಲಿ ಕಳ್ಳತನ ಮಾಡಿ ಫರಾರಿಯಾಗುತ್ತಿದ್ದ ಪಕ್ಕಾ ಕಳ್ಳನನ್ನು ಚಾಲಾಕಿ ಯಮಕನಮರಡಿ ಸಿಎಸ್ ಐ ಜಾವೇದ್ ಮುಷಾಪುರೆ ನೇತೃತ್ವದ ತಂಡ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಹಲವು ಕಳ್ಳತನಗಳಲ್ಲಿ ತೊಡಗಿದ್ದ ಕುಖ್ಯಾತ ಮನೆಗಳ್ಳ ಸುರೇಶ್ ಮಾರುತಿ ನಾಯಿಕ ಸನದಿ (37, ಹೋಸೂರು, ಬೆಳಗಾವಿ) ಬಂಧನಕ್ಕೆ ಒಳಗಾಗಿದ್ದು, ಪೊಲೀಸರು ₹95 ಲಕ್ಷಕ್ಕೂ ಹೆಚ್ಚು ಮೌಲ್ಯದ…

Read More

ಅಮೇರಿಕನ್ನರನ್ನೇ ವಂಚಿಸುತ್ತಿದ್ದ ಅಂತರರಾಜ್ಯ ಕಾಲ್‌ಸೆಂಟರ್ ಗ್ಯಾಂಗ್

ಬೆಳಗಾವಿ: ಅಮೇರಿಕಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಸೈಬರ್ ಅಪರಾಧ ಪ್ರಕರಣವನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.ಅಜಂ ನಗರ ಸರ್ಕಲ್ ಬಳಿ ಅಕ್ರಮವಾಗಿ ಕಾಲ್ ಸೆಂಟರ್‌ ನಡೆಸುತ್ತಿದ್ದ 33 ಮಂದಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 37 ಲ್ಯಾಪ್‌ಟಾಪ್‌ಗಳು, 37 ಮೊಬೈಲ್‌ಗಳು ಮತ್ತು 3 ವೈ-ಫೈ ರೌಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಅಂತರಿಕ ಭದ್ರತಾ ವಿಭಾಗ ನೀಡಿದ ಮಾಹಿತಿ ಹಾಗೂ ಅನಾಮದೇಯ ಪತ್ರದ ಆಧಾರದ ಮೇಲೆ ಎ.ಎಸ್‌.ಐ ಎಲ್‌.ಎಸ್‌. ಚಿನಗುಂಡಿ ಅವರು ನೀಡಿದ ಫಿರ್ಯಾದಿನ ಮೇರೆಗೆ ಪ್ರಕರಣ…

Read More

ಸಕ್ಕರೆ ಸಿಹಿಯ ಹಿಂದೆ ಕಹಿ ರಾಜಕೀಯ!

ಪ್ರಹ್ಲಾದ ಜೋಶಿ–ಸಿದ್ದರಾಮಯ್ಯ ನಡುವೆ ಪತ್ರ ಯುದ್ಧ…. “ಕೇಂದ್ರ ಸರ್ಕಾರ ರೈತ ಪರ, ಆದರೆ ರಾಜ್ಯದ ತೆರಿಗೆ ನೀತಿಗಳೇ ಕಷ್ಟದ ಮೂಲ” — ಪ್ರಹ್ಲಾದ ಜೋಶಿಯ ಸಿಟ್ಟಿನ ಪತ್ರ ರಾಜ್ಯ ರಾಜಕೀಯಕ್ಕೆ ಹೊಸ ಕುದಿ ಸಕ್ಕರೆ ನೀತಿ ಕುರಿತು ಪತ್ರ ಯುದ್ಧ! ಬೆಳಗಾವಿ:ಕಬ್ಬು ಬೆಳೆಗಾರರ ಹಿತಾಸಕ್ತಿ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಆರೋಪ-ಪ್ರತ್ಯಾರೋಪ ಪತ್ರ ವ್ಯವಹಾರ ರಾಜಕೀಯ ಬಿಸಿಯನ್ನು ಹೆಚ್ಚಿಸಿದೆ. ಸಿದ್ದರಾಮಯ್ಯ ಅವರ “ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಕಡೆ ನಿರ್ಲಕ್ಷ್ಯ…

Read More

ಡಿಸೆಂಬರ್ ಅಂತ್ಯದೊಳಗೆ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ

ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಮೂಡಲಗಿ- ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ– ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರುವ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರದಂದು ಹೊರವಲಯದ ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆಯೂ ಅವರು ಸೂಚಿಸಿದರು. ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್…

Read More

ಪಾಲಿಕೆಯಲ್ಲಿ ಆಡಿಟ್ ಆಕ್ಷೇಪಣೆ ಭುಗಿಲು

ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ₹217 ಕೋಟಿ ಅಡಿಟ್ ಆಕ್ಷೇಪಣೆ ಸಿಡಿಲು! ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರ ಒಕ್ಕೊರಲ ನಿರ್ಣಯ – ಮೇಯರ್ ಅವರಿಂದ ಎರಡು ತಿಂಗಳ ಒಳಗೆ ವರದಿ ಸೂಚನೆ ಬೆಳಗಾವಿ:ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ₹217 ಕೋಟಿ ರೂ.ಗಳ ಅಡಿಟ್ ಆಕ್ಷೇಪಣೆ ವಿಷಯ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ದಾಖಲೆ ಕೊರತೆ ಕುರಿತಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ…

Read More
error: Content is protected !!