ಪ್ರಯಾಗದಲ್ಲಿ 12 ತಾಸು ಕಾಲ್ತುಳಿತ..!
ಬೆಳಗಾವಿ:ನಾವು ಬದುಕಿ ಬಂದಿದ್ದೇ ಪವಾಡ “: ಪ್ರಯಾಗರಾಜನಲ್ಲಿ ಪವಿತ್ರ ಕುಂಭಸ್ನಾನ ಮುಗಿಸಿ ನೂಕು ನುಗ್ಗಲಿನಲ್ಲಿ ಪಾರಾಗಿ ಬಂದ ಸರೋಜಾ ನಡುವಿನಹಳ್ಳಿ ಹೇಳಿದ ಮಾತಿದು,ಈ ಮಾತನ್ನು ಹೇಳುವಾಗ ಅವರು ಭಾವುಕರಾಗಿದ್ದರು. ಮಾತುಗಳು ಮೌನವಾಗಿದ್ದವು.“ಪ್ರಯಾಗ್ರಾಜ್ದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕೆಂದು ಜ.28ರಂದು ರಾತ್ರಿ 12 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ನಾನ ಮುಗಿಸಿ ಲಕ್ಷಾಂತರ ಜನರು ನಮ್ಮ ಎದುಗಡೆಯಿಂದ ಬರುತ್ತಿದ್ದರು. ಜನರು ಮುಖಾಮುಖಿಯಾಗಿ ಒಬ್ಬರನ್ನೊಬ್ಬರು ತಳ್ಳಲು ಆರಂಭಿಸಿದರು. ಎಲ್ಲರೂ ಗಾಬರಿಯಿಂದ ಓಡುವ ರಭಸದಲ್ಲಿದ್ದರು. ತುಳಿದುಕೊಂಡೇ ಹೋಗುತ್ತಿದ್ದರು. ಕಿರುಚಾಡಿದರೂ ಯಾರೂ ರಕ್ಷಣೆಗೆ ಬರಲಿಲ್ಲ….

