ಸುವರ್ಣ ಸೌಧದಲ್ಲಿ ಬದ್ಧ ‘ವೈರಿಗಳ’ ಸಂಗಮ
ಸತೀಶ್ ಜಾರಕಿಹೊಳಿ–ಅಭಯ ಪಾಟೀಲ ಅಕ್ಕಪಕ್ಕ; ರಾಜಕೀಯ ವಲಯದಲ್ಲಿ ಕುತೂಹಲದ ಚರ್ಚೆ. ಒಂದೇ ವೇದಿಕೆ… ಅಕ್ಕಪಕ್ಕ ಆಸನ… ಆದರೆ ಮನಸ್ಸಿನ ಅಂತರ ಯಥಾಸ್ಥಿತಿ!. (e belagavi SPL report). ಬೆಳಗಾವಿ,ಗಡಿನಾಡ ಬೆಳಗಾವಿ ರಾಜಕೀಯದಲ್ಲಿ ಪರಸ್ಪರ ವಿರುದ್ಧ ಧ್ರುವಗಳೆಂದೇ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲ ಇಂದು ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ, ಅದೂ ಅಕ್ಕಪಕ್ಕ ಕಾಣಿಸಿಕೊಂಡ ಕ್ಷಣ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.ಸಾಮಾನ್ಯವಾಗಿ ಬೇರೆ ಬೇರೆ ರಾಜಕೀಯ ಹಾದಿಗಳಲ್ಲಿ ನಡೆಯುವ, ಹಲವು…

