.ಜನೇವರಿ 11 ರಂದು ನಡೆಯಲಿರುವ ಸಮಾವೇಶ. ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ ಹಿಂದೂ ಸಮಾವೇಶ
ಸಾವಿರಾರು ಕಾರ್ಯಕರ್ತರ ನಿರೀಕ್ಷೆ
ಬೆಳಗಾವಿ.
ಹಿಂದೂ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಘೋಷಣೆಯೊಂದಿಗೆ ಬೆಳಗಾವಿಯಲ್ಲಿ ಭರ್ಜರಿ ಹಿಂದೂ ಸಮಾವೇಶ ಕ್ಕಾಗಿ ಎಲ್ಲ ಸಿದ್ಧತೆಗಳು ಭರ್ಜರಿ ನಡೆದಿವೆ
ಜನವರಿ 11ರಂದು ಸಂಜೆ 5 ಗಂಟೆಗೆ ಭಾಗ್ಯನಗರದ ರಾಮನಾಥ ಮಂಗಲ ಕಾಯರ್ಾಲಯದಲ್ಲಿ ಈ ಮಹತ್ವದ ಸಮಾವೇಶ ಆಯೋಜಿಸಲಾಗಿದೆ.,
ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.

ಸಮಾವೇಶವನ್ನು ಹಿಂದೂ ಸಮ್ಮೇಳನ ಸಮಿತಿ ಅನಗೋಳ ವತಿಯಿಂದ ಹಮ್ಮಿಕೊಳ್ಳಲಾದ ಈ ಸಮಾವವೇಶದ ಹಿನ್ನೆಲೆಯಲ್ಲಿ ಅಂದೇ ಮಧ್ಯಾಹ್ನ 3 ಕ್ಕೆ ಹರಿಮಂದಿರದಿಂದ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಧರ್ಮ ರಕ್ಷಣೆ, ರಾಷ್ಟ್ರರಕ್ಷಣೆ ಎಂಬ ಧ್ಯೇಯವಾಕ್ಯದಡಿ ನಡೆಯಲಿದೆ.

ಹಿಂದೂ ಒಗ್ಗಟ್ಟು ಅನಿವಾರ್ಯತೆ
ಈ ಹಿಂದೂ ಸಮಾವೇಶದ ಸಾನ್ನಿಧ್ಯವನ್ನು ಬೃಹನ್ಮಠ ಹೊನ್ನಿಹಾಳದ ಬಸವರಾಜ ದೇವರು ವಹಿಸುವರು.ಹೆಸರಾಂತ ಸಾಹಿತಿ ಶ್ರೀಮತಿ ನೀತಾ ರಾವ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಬೌದ್ಧಿಕ ಪ್ರಮುಖರಾದ ರಾಮಚಂದ್ರ ಅಡಕೆ ಮಾತನಾಡುವರು.
ಹಿಂದೂ ಸಮಾಜವನ್ನು ಒಗ್ಗೂಡಿಸುವುದು ಮತ್ತು ಸಂಸ್ಕೃತಿಯ ರಕ್ಷಣೆಗೆ ಜನಜಾಗೃತಿ ಮೂಡಿಸುವುದು ಈ ಸಮಾವೇಶದ ಉದ್ದೇಶ ಎಂದು ಆಯೋಜಕರು ತಿಳಿಸಿದ್ದಾರೆ

