ಸಿಎಂ ಆದೇಶಕ್ಕೆ ಡಿಸಿಎಂ ಕೌಂಟರ್!
ಅಂಗನವಾಡಿ ವರ್ಗಾವಣೆಯಲ್ಲಿ ಸರ್ಕಾರವೇ ಎರಡು ಭಾಗ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲೇ ‘ಡ್ಯುಯಲ್ ಪವರ್’. ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡುವಿನ ಅಧಿಕಾರ ಸಂಘರ್ಷ ಇದೀಗ ರಾಜಕೀಯ ವೇದಿಕೆಗಳನ್ನು ಮೀರಿ ಸರ್ಕಾರದ ಆಡಳಿತ ಯಂತ್ರದೊಳಗೆ ನುಗ್ಗಿದೆ. ಮುಖ್ಯಮಂತ್ರಿ ನೀಡಿದ ಲಿಖಿತ ಆದೇಶವನ್ನೇ ಇಲಾಖೆಯೊಳಗೆ ಡೋಂಟಕೇರ್ ಮಾಡುವ ಹಂತಕ್ಕೆ ಈ ಸಂಘರ್ಷ ತಲುಪಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿಯ ವರ್ಗಾವಣೆ ಪ್ರಕರಣ ಇದಕ್ಕೆ ಅತ್ಯಂತ ಸ್ಪಷ್ಟ ಸಾಕ್ಷಿಯಾಗಿದೆ. ಕೈ ಶಾಸಕ ಶಿವಣ್ಣ ಅವರ…

