Headlines

ಅಭಯ ಪಾಟೀಲರ ಹಠವೇ ಗೆಲುವಿನ ಹಾದಿ – ಪವಾರ್–ಜಾಧವ್ ಅನರ್ಹತೆ ರದ್ದು.

ಖಾವು ಕಟ್ಟಾ ಪ್ರಕರಣದಲ್ಲಿ ಸತ್ಯಕ್ಕೆ ಜಯ.

ಬೆಳಗಾವಿ,
ಖಾವು ಕಟ್ಟಾ ಅಂಗಡಿ ಹಂಚಿಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದ ಸತ್ಯಕ್ಕೆ ಕಾನೂನು ಮುದ್ರೆ ಬಿದ್ದಿದೆ. ನಗರಸೇವಕರಾದ ಮಂಗೇಶ ಪವಾರ್ ಮತ್ತು ಜಯಂತ ಜಾಧವ್ ಅವರನ್ನು ಅನರ್ಹಗೊಳಿಸಿದ್ದ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯದ ನಿರ್ಣಯ, ಈ ಹೋರಾಟದ ಹಿಂದೆ ನಿಂತಿದ್ದ ಶಾಸಕ ಅಭಯ ಪಾಟೀಲರ ಹಠ ಮತ್ತು ದೃಢ ನಿಲುವಿಗೆ ದೊರೆತ ನೈತಿಕ ಜಯವಾಗಿಯೇ ಕಾಣುತ್ತಿದೆ.

ಅನರ್ಹತೆಯ ರಾಜಕೀಯಕ್ಕೆ ಬ್ರೇಕ್..
2020ರಲ್ಲಿ ನಡೆದ ಖಾವು ಕಟ್ಟಾ ಅಂಗಡಿಗಳ ಹರಾಜು ವಿಚಾರವನ್ನು ಹಿಡಿದುಕೊಂಡು, ಪವಾರ್–ಜಾಧವ್ ಅವರು ತಮ್ಮ ನಗರಸೇವಕ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ,
ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯ ಕಲಂ 26(1)(K) ಅಡಿಯಲ್ಲಿ ಅವರನ್ನು ಅನರ್ಹಗೊಳಿಸಲಾಗಿತ್ತು.
ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಕೋರ್ಟ್ ಹೇಳಿದ್ದೇನು?
“ಅಂಗಡಿಗಳ ಹರಾಜು ನಡೆದ ಸಮಯದಲ್ಲಿ ಪವಾರ್ ಮತ್ತು ಜಾಧವ್ ನಗರಸೇವಕರಾಗಿರಲಿಲ್ಲ. ಹೀಗಾಗಿ ಅವರ ವಿರುದ್ಧ ಅನರ್ಹತಾ ಕ್ರಮ ಜರುಗಿಸುವ ಪ್ರಶ್ನೆಯೇ ಇಲ್ಲ.”
ಈ ಆಧಾರದ ಮೇಲೆ ಅನರ್ಹತಾ ಆದೇಶವನ್ನು ಸಂಪೂರ್ಣವಾಗಿ ರದ್ದುಪಡಿಸಿ, ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿದೆ.

ಅಭಯ ಪಾಟೀಲರ ಹಠವೇ ತಿರುವು
ಈ ಪ್ರಕರಣದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಅವರು ಆರಂಭದಿಂದಲೇ
“ಇದು ಸುಳ್ಳು ಆರೋಪ. ಸತ್ಯ ಕಾನೂನಿನಲ್ಲಿ ಗೆಲ್ಲುತ್ತದೆ” ಎಂದು ಸ್ಪಷ್ಟ ನಿಲುವು ತೆಗೆದುಕೊಂಡಿದ್ದರು.
ರಾಜಕೀಯ ಒತ್ತಡ, ವಿರೋಧಿಗಳ ಟೀಕೆಗಳ ನಡುವೆಯೂ ಅವರು ಹಿಂತಿರುಗಲಿಲ್ಲ.

ಇಂದಿನ ತೀರ್ಪು, ಅವರ ಆ ಹಠ ಮತ್ತು ನ್ಯಾಯನಿಷ್ಠ ರಾಜಕೀಯಕ್ಕೆ ದೊರೆತ ಜಯ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ…
ಸತ್ಯಕ್ಕೆ ಕಾನೂನು ಮುದ್ರೆ..
ಪವಾರ್–ಜಾಧವ್ ವಿರುದ್ಧ ನಡೆದ ರಾಜಕೀಯ ಪ್ರೇರಿತ ಆರೋಪಗಳು ನ್ಯಾಯಾಲಯದಲ್ಲಿ ಪತನಗೊಂಡಿವೆ.
ಈ ತೀರ್ಪಿನಿಂದ ಅವರ ರಾಜಕೀಯ ಭವಿಷ್ಯಕ್ಕೆ ಬಲ ಸಿಕ್ಕಿದ್ದು, ಅಭಯ ಪಾಟೀಲರ ರಾಜಕೀಯ ದೃಢತೆಯೂ ಮತ್ತೊಮ್ಮೆ ಸಾಬೀತಾಗಿದೆ.
ಖಾವು ಕಟ್ಟಾ ಪ್ರಕರಣದ ತೀರ್ಪು – ಸತ್ಯ, ಕಾನೂನು ಮತ್ತು ಹಠದ ರಾಜಕೀಯದ ಗೆಲುವಾಗಿ ದಾಖಲೆಯಾಗಿದೆ.

Leave a Reply

Your email address will not be published. Required fields are marked *

error: Content is protected !!