ಸಾಕ್ಷ್ಯ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ’

Oplus_16908288

ಬೆಳಗಾವಿ ಪಾಲಿಕೆಯಲ್ಲಿ ದಾಖಲೆಗಳ ಯುದ್ಧ !

ಸಾಕ್ಷ್ಯ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ’
ಬೆಳಗಾವಿ.

ನಗರಸೇವಕರ ಆರೋಪಗಳಿಗೆ 7 ದಿನಗಳ ಗಡುವು – ಮಾನನಷ್ಟ ಮೊಕದ್ದಮೆ ಎಚ್ಚರಿಕೆ.

ಪರಿಷತ್ ಸಭೆಯಲ್ಲಿ ರವಿ ಧೋತ್ರೆ ಮಾಡಿದ ಗಂಭೀರ ಆರೋಪಗಳು ಪಾಲಿಕೆಯನ್ನು ಬೆಚ್ಚಿಬೀಳಿಸಿವೆ.

ವಿರೇಶ ಗದಗಿನರನ್ನು ಮರಳಿ ನೇಮಕ ಮಾಡಿದರೇ? ದಾಖಲೆ ಕೊಡಿ ಎಂದು ಉಪ ಆಯುಕ್ತರ ನೇರ ಸವಾಲು.

ಇ–ಆಸ್ತಿ ತಿರಸ್ಕಾರ ವಿವಾದ
‘ಅವರ ವಾರ್ಡ್‌ನ ಅರ್ಜಿ ಅಲ್ಲ, ದಾಖಲೆ ಅಪೂರ್ಣ’ – ಉಪ ಆಯುಕ್ತರ ಸ್ಪಷ್ಟನೆ.

ಬೆಳಗಾವಿ

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ರಾಜಕೀಯ ಮತ್ತು ಆಡಳಿತ ಯುದ್ಧ ಈಗ ಕಾನೂನು ಮೆಟ್ಟಿಲು ತಲುಪುವ ಹಂತಕ್ಕೆ ಬಂದಿದೆ.

ಉಪ ಆಯುಕ್ತರು ಬರೆದ ಪತ್ರ

ಪಾಲಿಕೆಯ ಉಪ ಆಯುಕ್ತ (ಆಡಳಿತ) ಹಾಗೂ ವಲಯ ಆಯುಕ್ತ ಉದಯಕುಮಾರ ತಳವಾರ ಅವರು, ಪರಿಷತ್ ಸಭೆಯಲ್ಲಿ ಬಿಜೆಪಿ ನಗರಸೇವಕ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ 7 ದಿನಗಳಲ್ಲಿ ಸಾಕ್ಷ್ಯ ಕೊಡದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಪತ್ರವನ್ನು ನೀಡಿದ್ದಾರೆ.

Oplus_16908288

ಈ ಬಗ್ಗೆ ಲಿಖಿತ ಪತ್ರವನ್ನು ಮೇಯರ್, ಉಪಮೇಯರ್, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಸೇರಿದಂತೆ ಆಯುಕ್ತರಿಗೂ ಕಳಿಸಿದ್ದಾಗಿ ಉದಯಕುಮಾರ ತಳವಾರ್ ಸ್ಪಷ್ಟಪಡಿಸಿದ್ದಾರೆ.

ಆದರೆ ಆರೋಪ ಮಾಡಿದ್ದ ನಗರಸೇವಕ ರವಿ ಧೋತ್ರೆ ಸಹ ನಾನೂ ಕೂಡ ಕಾನೂನು ಮೂಲಕವೇ ಎಲ್ಲವನ್ನು ಎದುರಿಸುವುದಾಗಿ ತಿಳಿಸಿದ್ದಾರೆ.

ರವಿ ಧೋತ್ರೆ. ಬಿಜೆಪಿ‌ ನಗರಸೇವಕ

ಪರಿಷತ್ ಸಭೆಯಲ್ಲಿ ಏನಾಯ್ತು?
ಜನವರಿ 12ರಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ನಗರಸೇವಕ ರವಿ ಧೋತ್ರೆ ಅವರು ಉಪ ಆಯುಕ್ತ ಉದಯಕುಮಾರ ತಳವಾರ ವಿರುದ್ಧ ಗಂಭೀರ ಆರೋಪಗಳನ್ನು ಎತ್ತಿದರು.

7 ಲಕ್ಷ ನಷ್ಟ ಮಾಡಿದ ಸಿಬ್ಬಂದಿ ವಿರೇಶ ಗದಗಿನರನ್ನು ಮರಳಿ ಕೆಲಸಕ್ಕೆ ಪಡೆದು ಲೋಕೋಪಯೋಗಿ ಶಾಖೆಗೆ ಹಾಕಲಾಗಿದೆ. ಮತ್ತೆ ಅಗತ್ಯ ದಾಖಲೆಗಳಿದ್ದರೂ ನಾಗರಿಕರ ಇ ಆಸ್ತಿ ಅರ್ಜಿಗಳನ್ನು ಅನ್ಯಾಯವಾಗಿ ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಆದರೆ ಇದಕ್ಕೆ ಸ್ಪಂದಿಸಿದಂತೆ ಉಪ ಆಯುಕ್ತ ಉದಯಕುಮಾರ ತಳವಾರ ಅವರು ಯಾವುದೇ ರಾಜಿ ಇಲ್ಲದೆ ಸ್ಪಷ್ಟನೆ ನೀಡಿದ್ದು,
ಆ ದಿನ ನಾನು ಸಕರ್ಾರದ ನಗರಾಭಿವೃದ್ಧಿ ಇಲಾಖೆಯ ಸಭೆಯಲ್ಲಿದ್ದೆ. ನಾನು ಪಾಲಿಕೆ ಸಭೆಗೆ ಹೋಗಲೇ ಇಲ್ಲ.
ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ವಿರೇಶ ಗದಗಿನರನ್ನು ಮರಳಿ ನೇಮಕ ಮಾಡಿದ್ದರೆ ಅದರ ಆದೇಶ, ದಾಖಲೆ, ಪೂರಾವೆ ನೀಡಿ ಎಂದು ಅವರು ನೇರ ಸವಾಲು ಸಹ ಹಾಕಿದ್ದಾರೆ.

ಇನ್ನು ಇ ಆಸ್ತಿ ವಿಷಯದಲ್ಲೂ ಆ ಅರ್ಜಿ ಅವರ ವಾರ್ಡಗೆ ಸೇರದ್ದಲ್ಲ. ದಾಖಲೆಗಳು ಸರಿಯಾಗಿರಲಿಲ್ಲ. ಆದ್ದರಿಂದಲೇ ತಿರಸ್ಕಾರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

7 ದಿನಗಳ ಗಡುವು..!
ಈ ಬಗ್ಗೆ ಉಪ ಆಯುಕ್ತ ಉದಯಕುಮಾರ ತಳವಾರ ಅವರು ಮೇಯರ್ ಮೂಲಕ ನಗರಸೇವಕ ರವಿ ಧೋತ್ರೆಗೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಒದಗಿಸಲು ಕೇವಲ 7 ದಿನದ ಗಡುವು ನೀಡಿದ್ದಾರೆ.
ನನ್ನ ಮೇಲೆ ಮಾಡಿದ ಪ್ರತಿಯೊಂದು ಆರೋಪಕ್ಕೂ
ದಾಖಲೆ ಮತ್ತು ಸಾಕ್ಷ್ಯವನ್ನು 7 ದಿನಗಳಲ್ಲಿ ನೀಡಬೇಕು. ಇಲ್ಲದಿದ್ದರೆ ಮಾನನಷ್ಟ ದಾವೆ ದಾಖಲಿಸಿ ನ್ಯಾಯಾಲಯದ ಬಾಗಿಲು ತಟ್ಟುವುದಾಗಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ..
ಹೀಗಾಗಿ ಕಳೆದ ಹಲವು ತಿಂಗಳಿಂದ ಪಾಲಿಕೆಯೊಳಗಿನ ಸಂಘರ್ಷ ಈಗ ಸಾರ್ವಜನಿಕ ರಾಜಕೀಯ-ಕಾನೂನು ಯುದ್ಧವಾಗಿ ಪರಿವರ್ತನೆಯಾಗಿದೆ.

Leave a Reply

Your email address will not be published. Required fields are marked *

error: Content is protected !!