ಹಿರೇಬಾಗೇವಾಡಿ ಬಳಿ ರೈತರ ಪ್ರತಿಭಟನೆ.
RCU ರೈತ ವಿರೋಧಿ ನೀತಿಗೆ ಬೇಸತ್ತ ರೈತರು.
ರಸ್ತೆ ಮತ್ತು ಪೈಪಲೈನ್ ಕಾಮಗಾರಿಯನ್ನು ಸೋಮವಾರದವರೆಗೆ ಬಂದ್ ಮಾಡಿಸಿದ ರೈತರು.
ವಿಸಿ ಬರೋವರೆಗೂ ಕೆಲಸ ಬಂದ್.
ಸೋಮವಾರ ರೈತರ ಜೊತೆ ಜಮೀನಿನಲ್ಲಿಯೇ ಸಭೆ ನಡೆಸಲು ತೀರ್ಮಾನ.
ಬೆಳಗಾವಿ. ಹಿರೇಬಾಗೇವಾಡಿ ಗ್ರಾಮದ ರೈತರು ಮತ್ತೇ ರಾಣಿ ಚನ್ನಮ್ಮ ವಿವಿ ವಿರುದ್ಧ ಸಿಡಿದೆದ್ದಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿ ಸೇರಿದಂತೆ ಇನ್ನೂ ಕೆಲ ವಿಷಯವನ್ನು ಮುಂದಿಟ್ಡುಕೊಂಡು ರೈತರು ಆಕ್ರೋಶಿತಗೊಂಡಿದ್ದಾರೆ.

ರಾಣಿ ಚನ್ನಮ್ಮ ವಿವಿಯವರು ರೈತರ ಪೂರ್ವಾನುಮತಿ ಇಲ್ಲದೇ ರೈತರ ಜಮೀನಿನ ಮಧ್ಯವೇ ರಸ್ತೆ ನಿರ್ಮಾಣಕ್ಕೆ ಗುರುತು ಹಾಕಿದ್ದರು. ಅಷ್ಟೇ ಅಲ್ಲ ಪೂರ್ವಾನುಮತಿಇಲ್ಲದೇ ಪೈಪಲೈನ ಅಗೆಯುವ ಕೆಲಸ ಕೂಡ ನಡೆಸಿದ್ದರು.

ಇಇದರಿಂದ ಕೆರಳಿದ ರೈತರು ಆ ಕಾಮಗಾರಿಯನ್ನು ಬಂದ್ ಕೂಡ ಮಾಡಿಸಿದರು. ಇದರ ಜೊತೆಗೆ ಅದೇ ಧೂಳಿನ ರಸ್ತೆಯಲ್ಲಿಸಾಗುತ್ತಿರುವ ವಿವಿಯ ವಾಹನಗಳನ್ನು ತೆಡೆದರು..

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದ ರೈತರು ವಿವಿಯವರು ಖುದ್ದು ಬಂದು ಸಮಸ್ಯೆ ಗೆ ಪರಿಹಾರ ಕಙಡುಕೊಳ್ಳುವವರೆಗೆ ಕಾಮಗಾರಿ ಬಂದ್ ಮಾಡಿಲಬೇಕೆಂದರು. ಇದೇ ಸಂದರ್ಭದಲ್ಲಿ ಧೂಳು ರಸ್ತೆಯ ಮೇಲೆ ಸೋಮವಾರದ ಸಭೆಯವರೆಗೆ ಸತತ ನೀರು ಹಾಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಯ ಸಹಾಯಕ ರಿಜಿಸ್ಟ್ರಾರ್ ಶ್ರೀನಿವಾಸ ಅವರು ಹಾಜರಿದ್ದರು.

