ಉಸಿರುಗಟ್ಟಿಸಿ ಪತ್ನಿಯ ಕೊಂದ ಪತಿ ಅಂದರ್

ಬೆಳಗಾವಿ:
ತವರು ಮನೆಗೆ ಹೊರಟ ಪತ್ನಿಯನ್ನು ತಡೆದುದಕ್ಕೆ ನಡೆದ ಜಗಳ ವಿಕೋಪಕ್ಕೆ ತೆರಳಿ ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಪತಿರಾಯನೊಬ್ಬಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ
ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನೇಗಿನಾಳದ ಫಕ್ಕಿರಪ್ಪ ಗಿಲಕ್ಕನವರ ಪತ್ನಿ ರಾಜೇಶ್ವರಿ ಗಿಲಕ್ಕನವರ (21) ಎಂದು ಗುರುತಿಸಲಾಗಿದೆ. ಆರೋಪಿತನಾದ ಆಕೆಯ ಗಂಡ ಕೃಷಿಕ ನೇಗಿನಾಳದ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರ (28) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜೇಶ್ವರಿ ಹಾಗೂ ಫಕ್ಕಿರಪ್ಪ ಅವರಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯಾದ ಮೂರು ವರ್ಷವಾದರೂ ಮಕ್ಕಳಾಗಿಲ್ಲ ಎಂಬ ವಿಷಯವನ್ನು ಮುಂದಿಟ್ಟು ದಂಪತಿಗಳ ನಡುವೆ ನಿತ್ಯ ಗೃಹ ಕಲಹ ನಡೆಯುತ್ತಿತ್ತೆನ್ನಲಾಗಿದೆ. ಮಂಗಳವಾರ ಮೃತ ಮಹಿಳೆಯು ತನ್ನ ತಮ್ಮ ಮುತ್ತುವಿಗೆ ಕೈಗೆ ಗಾಯವಾಗಿದ್ದರಿಂದ ತವರು ಮನೆಗೆ ಹೋಗುವುದಾಗಿ ತಿಳಿಸಿದ್ದಾಳೆ. ಆಗ ಗಂಡಜಮೀನಿನಲ್ಲಿ ಕೆಲಸ ಜಾಸ್ತಿ ಇದೆ ಈಗ ಹೋಗಬೇಡ ಎಂದು ಹೇಳಿದ್ದನು. ಇದರಿಂದ ದಂಪತಿಗಳ ನಡುವೆ ತೀವ್ರ ಜಗಳ ಉಂಟಾಗಿದೆ ಎನ್ನಲಾಗಿದೆ.

ಈ ಜಗಳ ವಿಕೋಪಕ್ಕೆ ತೆರಳಿ ಕೋಪಗೊಂಡ ಆರೋಪಿತನು, ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹಗ್ಗವನ್ನು ತೆಗೆದುಕೊಂಡು ಬಂದು ಮಲಗಿದ್ದ ರಾಜೇಶ್ವರಿಯ ಕೊರಳಿಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದನು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಬೈಲಹೊಂಗಲ, ಸಿಪಿಐ ಕಿತ್ತೂರ ಹಾಗೂ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!