ಚೋರ್ಲಾ ಘಾಟ್ ₹400 ಕೋಟಿ ಪ್ರಕರಣ: ಅಪರಾಧಕ್ಕಿಂತ ಅನುಮಾನವೇ ಹೆಚ್ಚು
ಸೋಮವಾರದ ಇ ಬೆಳಗಾವಿ ವಿಶೇಷ ಒಂದು ಸಂಖ್ಯೆ ದೇಶವನ್ನು ನಡುಗಿಸಿತು – ₹400 ಕೋಟಿ. ಸಾಮಾನ್ಯವಾಗಿ ಭಾರೀ ಅಪರಾಧಗಳು ಸಾಕ್ಷ್ಯಗಳಿಂದ ಮಾತನಾಡುತ್ತವೆ. ಆದರೆ ಚೋರ್ಲಾ ಘಾಟ್‌ನ ‘₹400 ಕೋಟಿ ದರೋಡೆ’ ಪ್ರಕರಣದಲ್ಲಿ ಮಾತನಾಡುತ್ತಿರುವುದು ಸಾಕ್ಷ್ಯವಲ್ಲ, ಅನುಮಾನ. ಅಪರಾಧವಲ್ಲ, ಅಸಂಗತತೆ. ತನಿಖೆಯ ದಿಕ್ಕು ಅಲ್ಲ, ಗೊಂದಲ.:ಇದು ನಿಜವಾದ ದರೋಡೆ ಪ್ರಕರಣವೇ, ಅಥವಾ ದಾರಿ ತಪ್ಪಿಸುವ ಕಥೆಯೊಂದು ಜಾಣ್ಮೆಯಿಂದ ಹೆಣೆದಿದೆಯೇ?—ದೂರು: ಪ್ರಕರಣದ ಅಡಿಪಾಯವೇ ಅಸ್ಥಿರ 2026ರ ಜನವರಿ 1ರಂದು ನಾಸಿಕ್ ಪೊಲೀಸ್ ಠಾಣೆಗೆ ಸಲ್ಲಿಸಲಾದ ದೂರು ಈ ಪ್ರಕರಣದ ಏಕೈಕ…

