Headlines

ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಡಾ. ಪ್ರಭಾಕರ ಕೋರೆಗೆ ಪದ್ಮಶ್ರೀ ಪ್ರಶಸ್ತಿ

ಈ ಗೌರವ ನನ್ನೊಬ್ಬನದು ಅಲ್ಲ; KLE ಸಂಸ್ಥೆಯ ಎಲ್ಲಾ ಸಿಬ್ಬಂದಿ, ಶಿಕ್ಷಕರು, ವೈದ್ಯರು ಮತ್ತು ಸಮಾಜದ ಸಹಕಾರಿಯರ ಶ್ರಮಕ್ಕೆ ಸಲ್ಲುತ್ತದೆ.”
– ಡಾ. ಪ್ರಭಾಕರ ಕೋರೆ
.

ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಕೇವಲ ಸಂಸ್ಥೆಗಳಷ್ಟೇ ಅಲ್ಲ, ಒಂದು ಸಾಮಾಜಿಕ ಬದಲಾವಣೆಯ ಚಳವಳಿಯಾಗಿ ರೂಪಿಸಿದ ಧೈರ್ಯಶಾಲಿ ನಾಯಕ.

ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಉತ್ತರ ಕರ್ನಾಟಕದ ಶಿಕ್ಷಣ–ಆರೋಗ್ಯ ಕ್ರಾಂತಿಗೆ ರಾಷ್ಟ್ರದ ಒಪ್ಪಿಗೆ”

ಬೆಳಗಾವಿ.
ಶಿಕ್ಷಣ ಮತ್ತು ಆರೋಗ್ಯ ಕೇವಲ ಸಂಸ್ಥೆಗಳಷ್ಟೇ ಅಲ್ಲ, ಸಮಗ್ರ ಸಾಮಾಜಿಕ ಬದಲಾವಣೆಯ ಚಿಹ್ನೆಯಾಗಬೇಕು ಎಂಬ ದೃಢ ನಂಬಿಕೆಯಿಂದ ಸಾಧನೆ ಮಾಡಿದ ವ್ಯಕ್ತಿ ಎನಿಸಿಕೊಂಡ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ರಾಷ್ಟ್ರದ ಅತ್ಯಂತ ಗೌರವಪೂರ್ಣ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಈ ಪ್ರಶಸ್ತಿಯು ಉತ್ತರ ಕರ್ನಾಟಕದ ಗ್ರಾಮೀಣ ಹಳ್ಳಿಗಳ ಬದುಕಿನಲ್ಲಿ ಕಂಡಿರುವ ದೀರ್ಘಕಾಲದ ಕ್ರಾಂತಿಕಾರಕ ಪ್ರಯತ್ನಕ್ಕೆ ಸಿಕ್ಕ ರಾಷ್ಟ್ರದ ಮುದ್ರೆ ಎನ್ನುವುದು ಸತ್ಯ.

ಬೆಳಗಾವಿಯ ಮಣ್ಣು ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕ ಈಗ ಹೆಮ್ಮೆಯಿಂದ ತಲೆ ಎತ್ತಿ ನೋಡುತ್ತಿದೆ. ಏಕೆಂದರೆ, ಒಬ್ಬ ವ್ಯಕ್ತಿಯ ದೃಷ್ಟಿ, ನಿರಂತರ ಪರಿಶ್ರಮ ಮತ್ತು ಶಿಸ್ತುಗಳಿಂದ, ಗ್ರಾಮೀಣ ಗ್ರಾಮಗಳು ಕೇವಲ ಮೂಲಭೂತ ಸೌಲಭ್ಯಗಳಲ್ಲ, ಗುಣಮಟ್ಟದ ಶಿಕ್ಷಣ ಮತ್ತು ಅತ್ಯಾಧುನಿಕ ಆರೋಗ್ಯ ಸೇವೆಗಳ ಕೇಂದ್ರಗಳಾಗಿ ಪರಿವರ್ತಿತವಾಗಿವೆ..
ಒಂದು ಕಾಲದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಎಂಬುದು ಕೇವಲ ಕನಸಾಗಿತ್ತು. ಎಲ್ಲವೂ ನಗರಕ್ಕೆ ಮಾತ್ರ ಸೀಮಿತವಾಗಿದ್ದವು. ಆದರೆ ಡಾ. ಪ್ರಭಾಕರ ಕೋರೆ ಈ ಸ್ಥಿತಿಯನ್ನು ಪ್ರಶ್ನಿಸಿದವರಲ್ಲ, ಬದಲಾವಣೆಗಾಗಿ ಮುಂದೆ ನಿಂತವರು.

ಗ್ರಾಮಕ್ಕೂ ಗುಣಮಟ್ಟದ ಶಿಕ್ಷಣ ಬೇಕು” “ಬಡವರಿಗೂ ಉತ್ತಮ ಚಿಕಿತ್ಸೆಯನ್ನು ನೀಡಬೇಕು” ಇವು ಅವರ ಕಾರ್ಯದ ದೃಢ ನಿಲುವಾಗಿದ್ದವು.
ಕೋರೆಯವರ ನೇತೃತ್ವದಲ್ಲಿ ಕೆಎಲ್ಇ ಸಂಸ್ಥೆ ಕೇವಲ ಕಾಲೇಜು ಅಥವಾ ಆಸ್ಪತ್ರೆಯ ಸಂಕಲನವಲ್ಲ. ಅದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಸಂಪೂರ್ಣ ವ್ಯವಸ್ಥೆಯಾಯಿತು. ವೈದ್ಯಕೀಯ, ಇಂಜಿನಿಯರಿಂಗ್, ಫಾರ್ಮಸಿ, ನಸಿರ್ಂಗ್, ಶಿಕ್ಷಣ ಪ್ರತಿಯೊಂದು ಕ್ಷೇತ್ರದಲ್ಲೂ ಕೆಎಲ್ಇ ಸಿದ್ಧತೆ, ನಾವೀನ್ಯತೆ ಮತ್ತು ಗುಣಮಟ್ಟದಲ್ಲಿ ದೇಶದ ಎತ್ತರಕ್ಕೆ ಹೋಗಿದೆ.

ವಿಶೇಷವಾಗಿ ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಅತ್ಯಾಧುನಿಕ ಚಿಕಿತ್ಸೆ, ತಜ್ಞ ವೈದ್ಯರು, ಬಡವರಿಗೆ ಕೈಗೆಟುಕುವ ವೆಚ್ಚ . ಈ ಮೂರು ಅಂಶಗಳ ಸಮನ್ವಯವೇ ಅವರ ಸೇವೆಯ ಶಕ್ತಿ.

ಗ್ರಾಮೀಣ ಜನತೆಯ ಕನಸು, ನಗರಮಟ್ಟದ ಸೇವೆ, ಹಾಗೂ ಮಾನವೀಯತೆ.. ಈ ಮೂವರು ಅಂಶಗಳನ್ನು ಒಂದೇ ವ್ಯವಸ್ಥೆಯಲ್ಲಿ ನೇರವಾಗಿ ಅನುಷ್ಠಾನಗೊಳಿಸುವದು ಡಾ. ಕೋರೆ ಅವರ ವೈಶಿಷ್ಟ್ಯ..

ಪದ್ಮಶ್ರೀ ಪ್ರಶಸ್ತಿ ಕೇವಲ ಗೌರವವಲ್ಲ; ಅದು ಉತ್ತರ ಕನರ್ಾಟಕದ ಗ್ರಾಮೀಣ ಹಳ್ಳಿಗಳ ಭವಿಷ್ಯಕ್ಕೆ ದೊರೆತ ರಾಷ್ಟ್ರದ ಒಪ್ಪಿಗೆ. ಇದು ಡಾ. ಕೋರೆ ಮಾತ್ರವಲ್ಲ, ಅವರಿಗೆ ಜೊತೆಯಾಗಿದ್ದ ಶಿಕ್ಷಕರು, ವೈದ್ಯರು, ಸಿಬ್ಬಂದಿ ಮತ್ತು ಸಮಾಜದ ಸಹಾಯಗಾರರ ಪ್ರತಿಯೊಬ್ಬರಿಗೂ ಸಿಕ್ಕ ಸಾಧನೆಯ ಘೋಷಣೆಯಾಗಿದೆ

Leave a Reply

Your email address will not be published. Required fields are marked *

error: Content is protected !!