Headlines

2028 ಕ್ಕೆ ಸತೀಶ ಜಾರಕಿಹೊಳಿ ಸಿಎಂ ಆಗಲಿ- ಸ್ವಾಮೀಜಿ ಆಶಯ

ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಆಶಯ

ಯಮಕನಮರಡಿ.(ಬೆಳಗಾವಿ ಜಿಲ್ಲೆ)
2028ಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹತ್ತರಗಿಯ ಸುಕ್ಷೇತ್ರ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಹತ್ತರಗಿಯಲ್ಲಿ ನಿರ್ಮಾಣಗೊಂಡ ನೂತನ ಗ್ರಾಮ ಸ್ವರಾಜ್ ಸೌಧ (ಗ್ರಾಮ ಪಂಚಾಯತ್ ಕಟ್ಟಡ) ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯವನ್ನು ಮುನ್ನಡೆಸುವ ಎಲ್ಲ ಅರ್ಹತೆ, ಅನುಭವ ಮತ್ತು ದೃಢ ನಿಲುವು ಹೊಂದಿರುವ ಸತೀಶ ಜಾರಕಿಹೊಳಿ ಅವರು 2028ರಲ್ಲಿ ಮುಖ್ಯಮಂತ್ರಿಯಾಗಲಿ ಎಂಬುದು ಈ ಭಾಗದ ಜನರ ಆಶಯವೂ ಹೌದು ಎಂದು ಅವರು ಸ್ಪಷ್ಟಪಡಿಸಿದರು

ಜ.26ರ ಗಣರಾಜ್ಯೋತ್ಸವದ ದಿನ ಹತ್ತರಗಿ ಗ್ರಾಮ ಸ್ವರಾಜ್ ಸೌಧವನ್ನು ಈ ಭಾಗದ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ. ಇದು ಕೇವಲ ಕಟ್ಟಡವಲ್ಲ, ಆಡಳಿತ ಮತ್ತು ಜನರ ನಡುವಿನ ಸೇತುವೆ ಎಂದು ಸ್ವಾಮೀಜಿ ಹೇಳಿದರು.

ಕಟ್ಟಡ ಸುಂದರವಾದರೆ ಸಾಲದು
ನೂತನ ಗ್ರಾಮ ಸ್ವರಾಜ್ ಸೌಧವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಗ್ರಾಮ ಪಂಚಾಯತ್ ಕಟ್ಟಡ ಸುಂದರವಾಗಿದ್ದರೆ ಮಾತ್ರ ಸಾಲದು. ಗ್ರಾಮದ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಸರಕಾರದ ಸೌಲಭ್ಯಗಳು ಜನರ ಮನೆಬಾಗಿಲಿಗೆ ತಲುಪಬೇಕು ಎಂದು ಹೇಳಿದರು.
ಗ್ರಾಮ ವಿಕಾಸ ಯೋಜನೆಯಡಿ ಪ್ರತಿ ವಾಡರ್್ಗೆ ಸುಮಾರು 4 ಕೋಟಿ ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದೆಯೂ ಪ್ರಾಮಾಣಿಕ ಪ್ರಯತ್ನ ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಗ್ರಾಮ ಪಂಚಾಯತ್ ಪಿಡಿಒ ಆನಂದ ಹೊಳೆನ್ನವರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಹಿರಿಯ ಮುಖಂಡ ರವೀಂದ್ರ ಜಿಂಡ್ರಾಳಿ, ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ ಪಟ್ಟೋಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ತಾಪಂ ಇಒ ಟಿ.ಆರ್. ಮಲ್ಲಾಡದ, ಹುಕ್ಕೇರಿ ಪಂ.ರಾ.ಇಂ ಉಪವಿಭಾಗದ ನಿವೃತ್ತ ಎಇ ಎ.ಬಿ. ಪಟ್ಟಣಶೆಟ್ಟಿ, ಎಸ್.ಎ. ಬೂಸಗೋಳ, ಗ್ರಾಪಂ ಅಧ್ಯಕ್ಷ ಸಮೀರ ಬೇಪಾರಿ, ಉಪಾಧ್ಯಕ್ಷೆ ಅಕ್ಷತಾ ಭೀಮಗೋಳ, ಯಮಕನಮರಡಿ ಸಿಪಿಐ ಜಾವೀದ್ ಮುಶಾಪುರಿ, ಚಿಕ್ಕೋಡಿ ಪಂ.ರಾ.ಇಂ ವಿಭಾಗದ ಎಇ ಪ್ರವೀಣ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!