Headlines

ಕಾಂಗ್ರೆಸ್ ನಡೆ ‘ಅಸಂವಿಧಾನಿಕ

ಬೆಳಗಾವಿ ಅಕ್ರಮಗಳ ಬಗ್ಗೆ ಬಿಜೆಪಿ ಮೌನ ಪ್ರಶ್ನಾರ್ಹ ಗಂಭೀರ ಪರಿಗಣನೆ ಎಂದ ರಾಜ್ಯಸಭಾ ಸದಸ್ಯ ಬೆಳಗಾವಿ:ರಾಜ್ಯಪಾಲರು ಭಾಷಣ ಮುಗಿಸಿ ಸದನದಿಂದ ಹೊರಡುವ ವೇಳೆ ಅವರನ್ನು ತಡೆಯಲು ಕಾಂಗ್ರೆಸ್ ಶಾಸಕರು ಯತ್ನಿಸಿದ ಘಟನೆ ಅಸಂವಿಧಾನಿಕ ಹಾಗೂ ದುರುದ್ದೇಶಪೂರಿತ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಟುವಾಗಿ ಟೀಕಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನವು ರಾಜಕೀಯ ಗಲಾಟೆಗೆ ಸೀಮಿತವಾಗದೇ ರಾಜ್ಯದ ಅಭಿವೃದ್ಧಿ ವಿಚಾರಗಳತ್ತ ಕೇಂದ್ರೀಕರಿಸಬೇಕಿತ್ತು ಎಂದು ಹೇಳಿದರು.ರಾಜ್ಯಪಾಲರು ಭಾಷಣದ ವೇಳೆ ಸಂಪೂರ್ಣ ಪಠ್ಯವನ್ನು ಓದದೇ ಇರುವ ಕುರಿತು…

Read More

ಕೆಎಲ್‌ಇ ಸೊಸೈಟಿ ಪದಾಧಿಕಾರಿಗಳ ಆಯ್ಕೆ ಅವಿರೋಧ

ಫೆ. 7–8ರಂದು ನಿಗದಿಯಾಗಿದ್ದ ಮತದಾನ ರದ್ದುಬೆಳಗಾವಿ: ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿಯ (ಕೆಎಲ್‌ಇ) ಮುಂದಿನ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೊಸೈಟಿಯ ಚುನಾವಣಾಧಿಕಾರಿಗಳು ಬುಧವಾರ ಅಧಿಕೃತ ಪ್ರಕಟಣೆ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ. ಪ್ರಕಟಣೆಯ ಪ್ರಕಾರ, ಕೌಜಲಗಿ ಮಹಾಂತೇಶ ಶಿವಾನಂದ ಅವರು ಅಧ್ಯಕ್ಷರಾಗಿ, ತಟವಟಿ ಬಸವರಾಜ ಶಿವಲಿಂಗಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಆಡಳಿತ ಮಂಡಳಿಯ ಸದಸ್ಯರಾಗಿ ಕೋರೆ ಅಮಿತ ಪ್ರಭಾಕರ, ಬಾಗೇವಾಡಿ ಪ್ರವೀಣ ಅಶೋಕ, ದೊಡವಾಡ ಪ್ರೀತಿ ಕರಣ,…

Read More

ಜನಧ್ವನಿಗೆ ಸ್ಪಂದಿಸುವ ಆಡಳಿತಕ್ಕೆ ದಾರಿ ಮಾಡಿದ ಡಾ.ಶಾಲಿನಿ ರಜನೀಶ್

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿಕರ್ತವ್ಯನಿಷ್ಠೆಗೆ ಮತ್ತೊಮ್ಮೆ ಮುದ್ರೆ ಹಾಕಿದ ಮುಖ್ಯ ಕಾರ್ಯದರ್ಶಿ ಬೆಂಗಳೂರು:ಸಾರ್ವಜನಿಕರ ಸಮಸ್ಯೆಗಳು ಆಡಳಿತದ ಮೇಜುಗಳಲ್ಲೇ ನಿಲ್ಲಬಾರದು, ಜನಪ್ರತಿನಿಧಿಗಳ ಧ್ವನಿಗೆ ತಕ್ಷಣ ಸ್ಪಂದನೆ ದೊರಕಬೇಕು ಎಂಬ ಆಡಳಿತಾತ್ಮಕ ಮೌಲ್ಯವನ್ನು ಮತ್ತೊಮ್ಮೆ ಸ್ಪಷ್ಟವಾಗಿ ಪ್ರತಿಪಾದಿಸಿದವರು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್..!ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ನಿರ್ಲಕ್ಷ್ಯಿಸುವ ಪ್ರವೃತ್ತಿಗೆ ತೆರೆ ಎಳೆಯುವ ಉದ್ದೇಶದಿಂದ, ಎಲ್ಲಾ ಅಧಿಕಾರಿಗಳು ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರ ಕರೆಗಳಿಗೆ ಕಡ್ಡಾಯವಾಗಿ ಸ್ಪಂದಿಸಬೇಕು ಎಂಬ ಕಟ್ಟುನಿಟ್ಟಿನ ಸುತ್ತೋಲೆಯನ್ನು ಅವರು ಹೊರಡಿಸಿದ್ದಾರೆ….

Read More

ಮೂರು ಸಾಲು.. ಮೂರು ಪ್ರಶ್ನೆ

ಭಾಷಣ ಅರ್ಧಕ್ಕೇ ನಿಲ್ಲಿಸಿ ಹೊರಟ ರಾಜ್ಯಪಾಲರು. ವಿಧಾನಸೌಧದಲ್ಲಿ ಉರಿದ ಸಂವಿಧಾನಿಕ ಸಂಘರ್ಷ** ಬೆಂಗಳೂರು: ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಸಂಪೂರ್ಣ ಓದದೆ ಕೇವಲ ಮೂರು ಸಾಲುಗಳಲ್ಲಿ ಮುಗಿಸಿ ರಾಜ್ಯಪಾಲರು ಸಭಾಂಗಣ ತೊರೆದ ಘಟನೆ, ಇದು ಶಿಷ್ಟಾಚಾರದ ತಪ್ಪಲ್ಲ—ಇದು ಚುನಾಯಿತ ಸರ್ಕಾರದ ಧ್ವನಿಗೆ ಹಾಕಿದ ಗಂಭೀರ ಸಂವಿಧಾನಿಕ ಪ್ರಶ್ನಾರ್ಥಕ ಗುರುತು. ವಿಧಾನಸೌಧದ ವೇದಿಕೆಯಲ್ಲಿ ಮಾತಾಡದೇ ಹೇಳಿದ ಈ ಮೌನ ನಡೆ, ಕೇಂದ್ರ–ರಾಜ್ಯ ರಾಜಕಾರಣದಲ್ಲಿ ಹೊಸ ಸಂಘರ್ಷಕ್ಕೆ ಕಿಡಿಯಿಟ್ಟಿದ್ದು, “ರಾಜ್ಯಪಾಲರ ಪಾತ್ರ ಏನು?” ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ರಾಜಕೀಯ ವಲಯದ ಮಧ್ಯಕ್ಕೆ…

Read More

3 ಸಾಲು ಓದಿ ಜೈ ಕರ್ನಾಟಕ ಎಂದ ರಾಜ್ಯಪಾಲರು..!

ಬೆಂಗಳೂರು:ಸರ್ಕಾರ ರೂಪಿಸಿ ನೀಡಿದ್ದ ಭಾಷಣವನ್ನು ಸಂಪೂರ್ಣವಾಗಿ ಓದದೆ ರಾಜ್ಯಪಾಲರು ಕೇವಲ ಮೂರು ಸಾಲುಗಳನ್ನು ಓದಿ ಸಭೆಯಿಂದ ಹೊರನಡೆಯುವ ಮೂಲಕ ವಿಧಾನಸಭೆಯ ಇತಿಹಾಸದಲ್ಲೇ ಅಪರೂಪದ ರಾಜಕೀಯ ಗೊಂದಲಕ್ಕೆ ಕಾರಣರಾದ ಘಟನೆ ಸೋಮವಾರ ನಡೆಯಿತು. ಈ ಅಚ್ಚರಿಯ ನಡೆಗೆ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆಗಳಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಸಭಾಮಂದಿರದಲ್ಲಿ ಭಾಷಣ ಆರಂಭಿಸುವ ನಿರೀಕ್ಷೆಯಲ್ಲಿದ್ದಾಗಲೇ ರಾಜ್ಯಪಾಲರು ಮೊದಲ ಮೂರು ಸಾಲುಗಳನ್ನು ಓದಿ, ಉಳಿದ ಭಾಗವನ್ನು ಕೈಬಿಟ್ಟು ಅಚಾನಕ್ ಸಭೆಯಿಂದ ನಿರ್ಗಮಿಸಿದರು. ಇದರಿಂದ ಸದನದಲ್ಲಿ ಕೆಲ ಕ್ಷಣ ಗೊಂದಲ, ನಂತರ…

Read More

ಸರ್ಕಾರ- ರಾಜ್ಯಪಾಲರ ಭಾಷಣದೊಳಗಿನ ಸಂಘರ್ಷ:

ಸರ್ಕಾರ–ರಾಜ್ಯಪಾಲರ ನಡುವೆ ಸಂವಿಧಾನಾತ್ಮಕ ಗಡಿ ರೇಖೆ ಮತ್ತೆ ಪ್ರಶ್ನೆ ಬೆಂಗಳೂರು:ವಿಧಾನಸಭೆಯ ಪವಿತ್ರ ವೇದಿಕೆಯಲ್ಲಿ ಓದಲಾದ ಭಾಷಣವೇ ಈಗ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ರಾಜಕೀಯ–ಸಂವಿಧಾನಾತ್ಮಕ ಸಂಘರ್ಷಕ್ಕೆ ಕೇಂದ್ರಬಿಂದು ಆಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ತಿದ್ದುಪಡಿ, ಆಕ್ಷೇಪ ಮತ್ತು ಕೆಲ ಅಂಶಗಳ ಕೈಬಿಡುವಿಕೆ — ಈ ಎಲ್ಲವು ರಾಜ್ಯಪಾಲರ ಅಧಿಕಾರದ ಮಿತಿ ಮತ್ತು ಆಯ್ಕೆಯಾದ ಸರ್ಕಾರದ ಪ್ರಾಮುಖ್ಯತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲರ ಭಾಷಣವೆಂದರೆ ಸರ್ಕಾರದ ನೀತಿ–ದಿಕ್ಕುಗಳ ಅಧಿಕೃತ ಪ್ರತಿಬಿಂಬ. ಆದರೆ ಇತ್ತೀಚಿನ ಬೆಳವಣಿಗೆಗಳು, “ಭಾಷಣ ಸರ್ಕಾರದ್ದೇ,…

Read More

ಉಸಿರುಗಟ್ಟಿಸಿ ಪತ್ನಿಯ ಕೊಂದ ಪತಿ ಅಂದರ್

ಬೆಳಗಾವಿ:ತವರು ಮನೆಗೆ ಹೊರಟ ಪತ್ನಿಯನ್ನು ತಡೆದುದಕ್ಕೆ ನಡೆದ ಜಗಳ ವಿಕೋಪಕ್ಕೆ ತೆರಳಿ ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಪತಿರಾಯನೊಬ್ಬಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ನೇಗಿನಾಳದ ಫಕ್ಕಿರಪ್ಪ ಗಿಲಕ್ಕನವರ ಪತ್ನಿ ರಾಜೇಶ್ವರಿ ಗಿಲಕ್ಕನವರ (21) ಎಂದು ಗುರುತಿಸಲಾಗಿದೆ. ಆರೋಪಿತನಾದ ಆಕೆಯ ಗಂಡ ಕೃಷಿಕ ನೇಗಿನಾಳದ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರ (28) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಾಜೇಶ್ವರಿ ಹಾಗೂ ಫಕ್ಕಿರಪ್ಪ ಅವರಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯಾದ ಮೂರು ವರ್ಷವಾದರೂ…

Read More

ಬಾಕಿ ರಸ್ತೆಗಳಿಗೆ ವೇಗ; ಕೇಂದ್ರದಿಂದ ಶ್ಲಾಘನೆ ಸತೀಶ್‌ ಜಾರಕಿಹೊಳಿ ಕಾರ್ಯಕ್ಕೆ ಗಡ್ಕರಿ ಮೆಚ್ಚುಗೆ

ನವ ದೆಹಲಿ/ಬೆಳಗಾವಿ:ಕರ್ನಾಟಕದಲ್ಲಿ ವರ್ಷಗಳಿಂದ ಅತಂತ್ರವಾಗಿದ್ದ ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಹೊಸ ಚೈತನ್ಯ ತುಂಬುವಲ್ಲಿ ರಾಜ್ಯ ಸರ್ಕಾರ ಸಾಧನೆ ಮಾಡಿದೆ. ದೀರ್ಘಕಾಲ ಬಾಕಿ ಉಳಿದಿದ್ದ 48 ರಸ್ತೆ ಯೋಜನೆಗಳ ಪೈಕಿ 39 ಯೋಜನೆಗಳನ್ನು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ನೇತೃತ್ವದಲ್ಲಿ ಇತ್ಯರ್ಥಪಡಿಸಿರುವುದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಗಡ್ಕರಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರು ರಾಜ್ಯದ ರಸ್ತೆ ಮತ್ತು…

Read More

ವಿಜ್ಞಾನಕ್ಕೆ ವಿಶ್ವ ವೇದಿಕೆ: ಬೆಳಗಾವಿಯಲ್ಲಿ IASC–2026 ಆರಂಭ

ದೇಶ–ವಿದೇಶದ ಖ್ಯಾತ ವಿಜ್ಞಾನಿಗಳ ಸಂಗಮ • ಮೂರು ದಿನಗಳ ಅಂತರರಾಷ್ಟ್ರೀಯ ಚರ್ಚೆ. ಬೆಳಗಾವಿ:ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳಗಾವಿಗೆ ಅಂತರರಾಷ್ಟ್ರೀಯ ಮೆರಗು ತಂದಿರುವ ಅಂತರರಾಷ್ಟ್ರೀಯ ಅನಾಲಿಟಿಕಲ್ ಸೈನ್ಸ್ ಕಾಂಗ್ರೆಸ್ (IASC)–2026 ಬುಧವಾರ ನಗರದ ಕೆಎಲ್‌ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ಆರಂಭವಾಗಲಿದೆ . ಜನವರಿ 22ರಿಂದ 24ರವರೆಗೆ ನಡೆಯಲಿರುವ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳ ಜೊತೆಗೆ ವಿದೇಶಗಳಿಂದ ಖ್ಯಾತ ವಿಜ್ಞಾನಿಗಳು, ಅಕಾಡೆಮಿಷಿಯನ್‌ಗಳು, ಸಂಶೋಧಕರು ಹಾಗೂ ಕೈಗಾರಿಕಾ ತಜ್ಞರು ಆಗಮಿಸಿದ್ದಾರೆ.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (RCU) ರಸಾಯನಶಾಸ್ತ್ರ ವಿಭಾಗ, ಇಂಡಿಯನ್…

Read More

ಖಾನಾಪುರ ಮುಗೀತು… ಈಗ ಬೆಳಗಾವಿ ದಕ್ಷಿಣಕ್ಕೆ!

ಸತ್ತವನ ಹೆಸರಲ್ಲೇ ಮತ್ತೊಂದು ಭೂ ವ್ಯವಹಾರ – 7 ಎಕರೆ 32 ಗುಂಟೆ ‘ಮಾರಾಟ’ಅಧಿಕಾರಿಗಳ ಪಾತ್ರದ ಮೇಲೆ ಗಂಭೀರ ಅನುಮಾನ ಬೆಳಗಾವಿ:ಗಡಿನಾಡು ಬೆಳಗಾವಿಯಲ್ಲಿ ಸತ್ತವರ ಹೆಸರಿನಲ್ಲಿ ಭೂ ಕಬಳಿಕೆ ನಡೆಯುತ್ತಿದೆ ಎಂಬ ಆತಂಕಕಾರಿ ವಿಚಾರ ಈಗ ಮತ್ತೊಂದು ಹಂತ ತಲುಪಿದೆ. ಖಾನಾಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 37 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಈಗಾಗಲೇ ವರದಿ ಪ್ರಕಟವಾಗಿತ್ತು.ಇದೀಗ ಅದೇ ವ್ಯಕ್ತಿಯ ಹೆಸರಿನಲ್ಲಿ ಬೆಳಗಾವಿ ದಕ್ಷಿಣ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೂ ಸುಮಾರು 7 ಎಕರೆ…

Read More
error: Content is protected !!