ಎಲ್ಅಂಡ್ಟಿ ಕಚೇರಿಯಲ್ಲಿ ಶಾಸಕರ ಪ್ರತಿಭಟನೆೆ!

ಬೆಳಗಾವಿ:ಅಭಿವೃದ್ಧಿ ಹೆಸರಿನಲ್ಲಿ ಆರಂಭವಾದ ಕಾಮಗಾರಿಗಳೇ ಇಂದು ಬೆಳಗಾವಿಗರಿಗೆ ತಲೆನೋವಾಗಿ ಪರಿಣಮಿಸಿವೆ.ಆಮೆಗತಿ, ವಿಳಂಬ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳ ವಿರುದ್ಧ ಎಲ್ಅಂಡ್ಟಿ ಕಂಪನಿಯ ನೀತಿಗೆ ಬೇಸತ್ತು, ನಗರದ ವಿವಿಧ ಬಡಾವಣೆಗಳ ನಾಗರಿಕರು ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಎಲ್ಅಂಡ್ಟಿ ಮುಖ್ಯ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಸ್ತೆಗಳು ತಿಂಗಳುಗಟ್ಟಲೆ ಅಗೆಯಲ್ಪಟ್ಟು ಮರುಸ್ಥಾಪನೆ ಕಾಣದ ಸ್ಥಿತಿ, ಗುಂಡಿಗಳ ರಸ್ತೆಯಲ್ಲಿ ಸಂಚಾರವೇ ಅಪಾಯ, ಕುಡಿಯುವ ನೀರಿಗೆ ದಿನಗಟ್ಟಲೆ ಪರದಾಟ ಈ ಎಲ್ಲಕ್ಕೂ ಎಲ್ಅಂಡ್ಟಿಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಕಿಡಿಕಾರಿದರು….

Read More

ಬಿಸಿಲಲ್ಲೇ ಜಮೀನಿಗೆ ಇಳಿದ RCU ವಿಸಿ

ರೈತರ ಅಳಲು ಕೇಳಿದ ಆರ್ಸಿಯು ಆಡಳಿತ – ಇತಿಹಾಸದ ಮೊದಲ ಮಾನವೀಯ ತಿರುವು. ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡ ಪ್ರದೇಶದಲ್ಲಿ ನೇರ ಸಂವಾದ ರೈತರು ಬೆಳೆಗೆ, ನೀರಿನ ಹರಿವು ಮತ್ತು ಬದುಕಿನ ಭದ್ರತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು ಕಾಮಗಾರಿಯ ತ್ವರಿತ ಸಮಸ್ಯೆಗಳ ಚರ್ಚೆಕುಲಪತಿ ಭರವಸೆ – ನ್ಯಾಯಯುತ ಪರಿಹಾರಸಂಕಷ್ಟ ಪರಿಹಾರಕ್ಕೆ ನೇರ ಕ್ರಮ ಸಿಂಡಿಕೇಟ್ ಸಭೆಯಲ್ಲಿ ಮನವಿ ಸಲ್ಲಿಸಿದ ಸಮಸ್ಯೆಗಳ ಪರಿಶೀಲನೆ. ರೈತರೊಂದಿಗೆ ಭವಿಷ್ಯದ ಸಹಕಾರ ಹಿರೇಬಾಗೇವಾಡಿ/ಬೆಳಗಾವಿ:ಸುಡುವ ಬಿಸಿಲು, ಉರಿಯುವ ನೆಲ… ಆದರೆ ಅದಕ್ಕಿಂತ ಹೆಚ್ಚು ಉರಿಯುತ್ತಿತ್ತು ರೈತರ…

Read More

₹400 ಕೋಟಿ ದರೋಡೆ ಆರೋಪ: ತನಿಖೆಗೆ ಬೆಳಗಾವಿ ಪೊಲೀಸರ ಸಹಕಾರ ಕೋರಿದ ಮಹಾ ಪೊಲೀಸ್

ಚೋರ್ಲಾ ಘಾಟ್‌ನಲ್ಲಿ ನಡೆದಿತ್ತೆನ್ನಲಾದ ನಗದು ಲೂಟಿನ ಪ್ರಕರಣ; ಎಸ್‌ಪಿಗೆ ನಾಸಿಕ್ ಪೊಲೀಸರ ಪತ್ರಬೆಳಗಾವಿ:ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದಿತ್ತೆನ್ನಲಾದ ಸುಮಾರು ₹400 ಕೋಟಿ ನಗದು ದರೋಡೆ ಪ್ರಕರಣದ ತನಿಖೆಗೆ ಬೆಳಗಾವಿ ಪೊಲೀಸರ ಸಹಕಾರವನ್ನು ಮಹಾರಾಷ್ಟ್ರ ಪೊಲೀಸರು ಕೋರಿದ್ದಾರೆ. ಈ ಸಂಬಂಧ ನಾಸಿಕ್ ಪೊಲೀಸರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದು, ಪತ್ರ ಸ್ವೀಕರಿಸಿರುವುದನ್ನು ಎಸ್‌ಪಿ ದೃಢಪಡಿಸಿದ್ದಾರೆ.ಪೊಲೀಸ್ ಮೂಲಗಳ ಪ್ರಕಾರ, ನಾಸಿಕ್‌ನ ರಿಯಲ್ ಎಸ್ಟೇಟ್ ಏಜೆಂಟ್ ಸಂದೀಪ್ ಪಾಟೀಲ್ ಅವರು 2026ರ ಜನವರಿ…

Read More

ರೈತರ ಹೊಲದಲ್ಲೇ RCU ವಿಸಿ ಸಭೆ. ಸಂಘರ್ಷದಿಂದ ಸಂವಾದದತ್ತ ಹೊಸ ಹೆಜ್ಜೆ..!

ಇ ಬೆಳಗಾವಿ ವಿಶೇಷಬೆಳಗಾವಿ.ಹಿರೇಬಾಗೇವಾಡಿ ಸಮೀಪ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಾಣ ಯೋಜನೆಯಿಂದ ಹುಟ್ಟಿಕೊಂಡ ವಿವಾದ ಇದೀಗ ಕೇವಲ ಸ್ಥಳೀಯ ಸಮಸ್ಯೆಯಾಗಿ ಉಳಿದಿಲ್ಲ.ರೈತರ ಹೋರಾಟ, ಭೂಮಿ ಹಕ್ಕಿನ ಪ್ರಶ್ನೆ ಮತ್ತು ನಾಳೆ ದಿ. 19ರಂದು ನಡೆಯಲಿರುವ ಮಹತ್ವದ ಸಭೆ. ಈ ಎಲ್ಲ ಬೆಳವಣಿಗೆಗಳು ರಾಜ್ಯದ ಗಮನ ಸೆಳೆಯುವ ಹಂತಕ್ಕೆ ತಲುಪಿವೆ. ವಿಶ್ವವಿದ್ಯಾಲಯದ ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಂಡ ರಸ್ತೆ ಕಾಮಗಾರಿಯು ರೈತರ ಜಮೀನಿಗೆ ಧಕ್ಕೆಯಾಗಿದೆ ಎಂಬ ಆರೋಪ, ಭೂಸ್ವಾಧೀನ ಕಾಯ್ದೆ 2013ರ ಪಾಲನೆಯ ಕುರಿತು ಉಂಟಾದ…

Read More

ವೀರಶೈವ ಲಿಂಗಾಯತ ಚಳವಳಿಯ ನಿಷ್ಠಾವಂತ ಧ್ವನಿ ಮೌನ:

ಭೀಮಣ್ಣ ಖಂಡ್ರೆ – ಹೋರಾಟದಿಂದ ನಾಯಕತ್ವದವರೆಗೆ ಒಂದು ಜೀವಂತ ಪಯಣ Ebelagavi specialಬೆಳಗಾವಿ:ವೀರಶೈವ ಲಿಂಗಾಯತ ಸಮಾಜದ ಹೋರಾಟ, ಸಂಘಟನೆ ಮತ್ತು ಸಾಮಾಜಿಕ ಜಾಗೃತಿಗೆ ತಮ್ಮ ಬದುಕನ್ನೇ ಅರ್ಪಿಸಿದ್ದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಅವರ ನಿಧನದೊಂದಿಗೆ ಒಂದು ಯುಗಕ್ಕೆ ತೆರೆ ಬಿದ್ದಿದೆ. ರಾಜಕೀಯದ ಗದ್ದಲ, ಸಾಮಾಜಿಕ ನ್ಯಾಯದ ಬೇಡಿಕೆಗಳು, ಧಾರ್ಮಿಕ ಗುರುತಿನ ಹೋರಾಟ—ಈ ಎಲ್ಲ ಹಂತಗಳಲ್ಲಿ ಅಚಲವಾಗಿ ನಿಂತಿದ್ದ ಖಂಡ್ರೆ, ಕೇವಲ ನಾಯಕನಲ್ಲ; ಅವರು ಒಂದು ಚಳವಳಿಯ ಸಂಕೇತವಾಗಿದ್ದರು.ಮೂಲದಿಂದಲೇ ಹೋರಾಟದ ಬೀಜಗ್ರಾಮೀಣ ಹಿನ್ನೆಲೆಯಿಂದ ಬಂದ ಭೀಮಣ್ಣ ಖಂಡ್ರೆ,…

Read More

ರೈತ ವಿರೋಧಿ ಆರ್ಸಿಯು ನೀತಿ?ಜನವರಿ 19ರ ಸಭೆಗೆ ರೈತರ ಬಹಿಷ್ಕಾರ –

ಭೂಮಿಯಲ್ಲೇ ಸಂವಾದ ಬೇಕೆಂಬ ರೈತರ ಹಠ. ಸಮಸ್ಯೆ ನಮ್ಮ ಜಮೀನಿನಲ್ಲಿದೆ. ಚರ್ಚೆಯೂ ಅಲ್ಲಿಯೇ ನಡೆಯಬೇಕು.” ಪೂರ್ವಾನುಮತಿ ಇಲ್ಲದ ಕಾಮಗಾರಿಗಳು:* ಅಸಮಾಧಾನದ ಬೇರು ಬೆಳಗಾವಿ:ರೈತರ ಭೂಮಿ, ಬದುಕು ಮತ್ತು ಭವಿಷ್ಯದ ಮೇಲೆ ನೇರ ಪರಿಣಾಮ ಬೀರುವ ತೀರ್ಮಾನಗಳನ್ನು ರೈತರಿಲ್ಲದೇ ಕೈಗೊಳ್ಳಬಹುದೇ?ಈ ಪ್ರಶ್ನೆಯೇ ಇಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಆರ್ಸಿಯು) ಆಡಳಿತದ ಎದುರು ನಿಂತಿದೆ.ಕಳೆದ ಹಲವು ದಿನಗಳಿಂದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಆರ್ಸಿಯು, ಇದೀಗ ಮತ್ತೊಂದು ಗಂಭೀರ ವಿವಾದಕ್ಕೆ ಸಿಲುಕಿದೆ. ಜನವರಿ 19ರಂದು ವಿಶ್ವವಿದ್ಯಾಲಯ…

Read More

ಏಸೀಲಿ ಸಭೆ ಬೇಡ – ಹೊಲದಲ್ಲೇ ತೀರ್ಮಾನ!”

ಹಿರೇಬಾಗೇವಾಡಿ ರೈತರ ಐತಿಹಾಸಿಕ ಘೋಷಣೆ: RCU ರಸ್ತೆ ವಿರುದ್ಧ ಕಠಿಣ ನಿಲುವು ಬೆಳಗಾವಿ:ಹಿರೇಬಾಗೇವಾಡಿ ರೈತರು ಮತ್ತೊಮ್ಮೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ (RCU) ವಿರುದ್ಧ ಸಿಡಿದೆದ್ದಿದ್ದಾರೆ. ಗುಡ್ಡದ ಮಲ್ಲಪ್ಪನ ಜಾಗೆಯ ಮೂಲಕ ವಿವಿಗೆ ಹೋಗುವ ರಸ್ತೆ ನಿರ್ಮಾಣದಲ್ಲಿ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ರೈತರು ಅಭೂತಪೂರ್ವ ತೀರ್ಮಾನ ಕೈಗೊಂಡಿದ್ದಾರೆ . ನಮ್ಮ ಭೂಮಿಯ ವಿಚಾರ ಏಸಿ ಕೊಠಡಿಯಲ್ಲಿ ಅಲ್ಲ, ನಮ್ಮ ಹೊಲದ ಮಧ್ಯೆ ತೀರ್ಮಾನವಾಗಬೇಕು.ರೈತರ ಯಾವುದೇ ಪೂರ್ವಾನುಮತಿ ಇಲ್ಲದೇ ಇದ್ದ ರಸ್ತೆಯನ್ನು ಬಿಟ್ಟು, ಫಲವತ್ತಾದ ಜಮೀನಿನೊಳಗೆ…

Read More

ಸೋಮವಾರದವರೆಗೆ RCU ಕಾಮಗಾರಿ ಬಂದ್

ಹಿರೇಬಾಗೇವಾಡಿ ಬಳಿ ರೈತರ ಪ್ರತಿಭಟನೆ. RCU ರೈತ ವಿರೋಧಿ ನೀತಿಗೆ ಬೇಸತ್ತ ರೈತರು. ರಸ್ತೆ ಮತ್ತು‌ ಪೈಪಲೈನ್ ಕಾಮಗಾರಿಯನ್ನು ಸೋಮವಾರದವರೆಗೆ ಬಂದ್ ಮಾಡಿಸಿದ ರೈತರು. ವಿಸಿ ಬರೋವರೆಗೂ ಕೆಲಸ ಬಂದ್. ಸೋಮವಾರ ರೈತರ ಜೊತೆ ಜಮೀನಿನಲ್ಲಿಯೇ ಸಭೆ ನಡೆಸಲು ತೀರ್ಮಾನ. ಬೆಳಗಾವಿ. ಹಿರೇಬಾಗೇವಾಡಿ ಗ್ರಾಮದ ರೈತರು ಮತ್ತೇ ರಾಣಿ ಚನ್ನಮ್ಮ ವಿವಿ ವಿರುದ್ಧ ಸಿಡಿದೆದ್ದಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿ ಸೇರಿದಂತೆ ಇನ್ನೂ ಕೆಲ‌ ವಿಷಯವನ್ನು ಮುಂದಿಟ್ಡುಕೊಂಡು ರೈತರು ಆಕ್ರೋಶಿತಗೊಂಡಿದ್ದಾರೆ. ರಾಣಿ ಚನ್ನಮ್ಮ ವಿವಿಯವರು ರೈತರ ಪೂರ್ವಾನುಮತಿ ಇಲ್ಲದೇ…

Read More

ಅಭಯ ಪಾಟೀಲರ ಹಠವೇ ಗೆಲುವಿನ ಹಾದಿ – ಪವಾರ್–ಜಾಧವ್ ಅನರ್ಹತೆ ರದ್ದು.

ಖಾವು ಕಟ್ಟಾ ಪ್ರಕರಣದಲ್ಲಿ ಸತ್ಯಕ್ಕೆ ಜಯ. ಬೆಳಗಾವಿ,ಖಾವು ಕಟ್ಟಾ ಅಂಗಡಿ ಹಂಚಿಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದ ಸತ್ಯಕ್ಕೆ ಕಾನೂನು ಮುದ್ರೆ ಬಿದ್ದಿದೆ. ನಗರಸೇವಕರಾದ ಮಂಗೇಶ ಪವಾರ್ ಮತ್ತು ಜಯಂತ ಜಾಧವ್ ಅವರನ್ನು ಅನರ್ಹಗೊಳಿಸಿದ್ದ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯದ ನಿರ್ಣಯ, ಈ ಹೋರಾಟದ ಹಿಂದೆ ನಿಂತಿದ್ದ ಶಾಸಕ ಅಭಯ ಪಾಟೀಲರ ಹಠ ಮತ್ತು ದೃಢ ನಿಲುವಿಗೆ ದೊರೆತ ನೈತಿಕ ಜಯವಾಗಿಯೇ ಕಾಣುತ್ತಿದೆ. ಅನರ್ಹತೆಯ ರಾಜಕೀಯಕ್ಕೆ ಬ್ರೇಕ್..2020ರಲ್ಲಿ ನಡೆದ ಖಾವು ಕಟ್ಟಾ ಅಂಗಡಿಗಳ ಹರಾಜು…

Read More

ಸಾಕ್ಷ್ಯ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ’

ಬೆಳಗಾವಿ ಪಾಲಿಕೆಯಲ್ಲಿ ದಾಖಲೆಗಳ ಯುದ್ಧ ! ಸಾಕ್ಷ್ಯ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ’ಬೆಳಗಾವಿ. ನಗರಸೇವಕರ ಆರೋಪಗಳಿಗೆ 7 ದಿನಗಳ ಗಡುವು – ಮಾನನಷ್ಟ ಮೊಕದ್ದಮೆ ಎಚ್ಚರಿಕೆ. ಪರಿಷತ್ ಸಭೆಯಲ್ಲಿ ರವಿ ಧೋತ್ರೆ ಮಾಡಿದ ಗಂಭೀರ ಆರೋಪಗಳು ಪಾಲಿಕೆಯನ್ನು ಬೆಚ್ಚಿಬೀಳಿಸಿವೆ. ವಿರೇಶ ಗದಗಿನರನ್ನು ಮರಳಿ ನೇಮಕ ಮಾಡಿದರೇ? ದಾಖಲೆ ಕೊಡಿ ಎಂದು ಉಪ ಆಯುಕ್ತರ ನೇರ ಸವಾಲು. ಇ–ಆಸ್ತಿ ತಿರಸ್ಕಾರ ವಿವಾದ‘ಅವರ ವಾರ್ಡ್‌ನ ಅರ್ಜಿ ಅಲ್ಲ, ದಾಖಲೆ ಅಪೂರ್ಣ’ – ಉಪ ಆಯುಕ್ತರ ಸ್ಪಷ್ಟನೆ. ಬೆಳಗಾವಿ ಗಡಿನಾಡ ಬೆಳಗಾವಿ ಮಹಾನಗರ…

Read More
error: Content is protected !!