Headlines

ಭೂಪಾಲದಲ್ಲಿ 3 ದಿನದ ಸಂವಾದ- ಬೆಳಗಾವಿ ಮೇಯರ್-ಉಪಮೇಯರ್ ಭಾಗಿ

ಸುಸ್ಥಿರ ನಗರಗಳ ದಿಕ್ಕಿನಲ್ಲಿ ರಾಷ್ಟ್ರೀಯ ಚಿಂತನೆ
ಭೋಪಾಲ್ನಲ್ಲಿ 3 ದಿನಗಳ ನೀತಿ ಸಂವಾದ |

ಬೆಳಗಾವಿ
ವೇಗವಾಗಿ ವಿಸ್ತರಿಸುತ್ತಿರುವ ನಗರಗಳು ಎದುರಿಸುತ್ತಿರುವ ಪರಿಸರ, ಮೂಲಸೌಕರ್ಯ ಮತ್ತು ಆಡಳಿತ ಸವಾಲುಗಳ ನಡುವೆ, ಸುಸ್ಥಿರ ನಗರ ಅಭಿವೃದ್ಧಿ ಕುರಿತ ರಾಷ್ಟ್ರೀಯ ಮಟ್ಟದ ನೀತಿ ಸಂವಾದ ಭೋಪಾಲ್ನಲ್ಲಿ ಇಂದು ಮೂರು ದಿನಗಳ ಕಾಲ ಆರಂಭಗೊಂಡಿತು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಮಹಾಪೌರರು ಹಾಗೂ ಉಪಮಹಾಪೌರರು ಈ ಸಂವಾದದಲ್ಲಿ ಭಾಗವಹಿಸಿ, ಪರಿಸರ ಸ್ನೇಹಿ, ಜನಕೇಂದ್ರಿತ ಹಾಗೂ ದೀರ್ಘಕಾಲೀನ ನಗರ ಮಾದರಿ ರೂಪಿಸುವ ಕುರಿತು ಆಳವಾದ ಚರ್ಚ ನಡೆಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ವಿಲಾಸ್ ಜೋಶಿ ಮತ್ತು ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಗವರ್ನಮೆಂಟನ ಜಂಟಿ ಕಾರ್ಯದರ್ಶಿ ಜಗದೀಶ ಹಿರೇಮನಿ ಅವರೂ ಸಹ ಈ ರಾಷ್ಟ್ರೀಯ ಮಟ್ಟದ ಸಂವಾದದಲ್ಲಿ ಭಾಗವಹಿಸಿದ್ದಾರೆ.

ಈ ಸಂವಾದಕ್ಕೆ ಹೋಗುವ ಮುನ್ನ ಶಾಸಕ ಅಭಯ ಪಾಟೀಲರು ಜಗದೀಶ ಹಿರೇಮನಿ, ಮೇಯರ್ ಮತ್ತು ಉಪಮೇಯರ್ ಅವರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿದ್ದರು,
ನಗರಾಭಿವೃದ್ಧಿಯ ದಿಕ್ಕು ಬದಲಾಗಬೇಕಾದ ಅನಿವಾರ್ಯತೆ ಇಂದಿನ ಸನ್ನಿವೇಶದಲ್ಲಿ ಸ್ಪಷ್ಟವಾಗಿದ್ದು, ಈ ಹಿನ್ನೆಲೆಯಲ್ಲೇ ನಡೆದ ನೀತಿ ಸಂವಾದವು ಭವಿಷ್ಯದ ನಗರಗಳಿಗೆ ಮಾರ್ಗಸೂಚಿ ರೂಪಿಸುವ ಮಹತ್ವದ ವೇದಿಕೆಯಾಗಿ ಪರಿಣಮಿಸಿತು.

ಹಸಿರು ನಗರ ಯೋಜನೆಗೆ ಒತ್ತಡ
ನಗರಗಳ ಮಾಸ್ಟರ್ ಪ್ಲಾನ್ಗಳಲ್ಲಿ ಹಸಿರು ಪ್ರದೇಶಗಳು, ಸಾರ್ವಜನಿಕ ಸ್ಥಳಗಳು ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯಕ್ಕೆ ನೀತಿ ಸಂವಾದದಲ್ಲಿ ಬಹುಮತ ದೊರಕಿತು. ಕಾಂಕ್ರೀಟ್ ಕಾಡಾಗಿ ಮಾರ್ಪಡುವ ನಗರಗಳಿಗೆ ಬದಲಾಗಿ, ಮಾನವ ಸ್ನೇಹಿ ನಗರ ವಿನ್ಯಾಸ ಅಗತ್ಯವೆಂದು ಭಾಗವಹಿಸಿದವರು ಹೇಳಿದರು.
ಸ್ವಚ್ಛತೆ-ತ್ಯಾಜ್ಯ ನಿರ್ವಹಣೆಗೆ ಹೊಸ ಚಿಂತನೆ
ಘನ ತ್ಯಾಜ್ಯ ವಿಲೇವಾರಿ, ಮರುಬಳಕೆ (ರಿಸೈಕ್ಲಿಂಗ್) ಹಾಗೂ ಶೂನ್ಯ ತ್ಯಾಜ್ಯ ನಗರಗಳ ಕನಸು ಕುರಿತು ವಿಶೇಷ ಅಧಿವೇಶನಗಳು ನಡೆದವು. ತ್ಯಾಜ್ಯವನ್ನು ಸಮಸ್ಯೆಯಾಗಿ ನೋಡದೇ, ಸಂಪನ್ಮೂಲವಾಗಿ ಬಳಸುವತ್ತ ನಗರಗಳು ಸಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನವೀಕರಿಸಬಹುದಾದ ಇಂಧನ, ಸ್ಮಾರ್ಟ್ ತಂತ್ರಜ್ಞಾನ ಹಾಗೂ ಡಿಜಿಟಲ್ ಆಡಳಿತದ ಸಮರ್ಥ ಬಳಕೆಯಿಂದ ನಗರಗಳನ್ನು ಹಸಿರಾಗಿಸುವುದು ಸಾಧ್ಯ ಎಂಬುದರ ಬಗ್ಗೆ ಚಚರ್ೆ ನಡೆಯಿತು. ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನವೇ ಭವಿಷ್ಯದ ನಗರಗಳ ಶಕ್ತಿ ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

ಮಳೆನೀರು ಸಂಗ್ರಹ, ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯದ ಕುರಿತು ಚರ್ಚ ನಡೆಯಿತು. ಖಾಸಗಿ ವಾಹನ ಅವಲಂಬನೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಸುಸ್ಥಿರ ನಗರಗಳ ಪ್ರಮುಖ ಅಂಶ ಎಂದು ಹೇಳಲಾಯಿತು.
ಈ ಸಂವಾದದಲ್ಲಿ ಭಾಗವಹಿಸಿದ ಮಹಾಪೌರರು ಮತ್ತು ಉಪಮಹಾಪೌರರು ತಮ್ಮ ತಮ್ಮ ನಗರಗಳಲ್ಲಿ ಅನುಸರಿಸುತ್ತಿರುವ ಉತ್ತಮ ಆಡಳಿತ ಮಾದರಿ, ಯಶಸ್ವಿ ಯೋಜನೆಗಳು ಮತ್ತು ಎದುರಿಸುತ್ತಿರುವ ಸವಾಲುಗಳನ್ನು ಹಂಚಿಕೊಂಡರು. ಇದರಿಂದ ಪರಸ್ಪರ ಅನುಭವ ವಿನಿಮಯವಾಗಿದ್ದು, ಇತರೆ ನಗರಗಳಿಗೆ ಸಹ ಅನುಕರಿಸಬಹುದಾದ ಮಾದರಿಗಳು ಹೊರಬಂದವು

Leave a Reply

Your email address will not be published. Required fields are marked *

error: Content is protected !!