ಯೂಟೂಬ್ ಹಿಂದೆ ಬ್ಲ್ಯಾಕ್ಮೇಲ್ ದಂಧೆ..?

ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ; ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ.

ಯೂಟೂಬ್ ಮಾಧ್ಯಮದ ಮುಖವಾಡದಲ್ಲಿ ನಡೆದ ವಿಕೃತ ಅಪರಾಧ; ಮಹಿಳಾ ಅಧಿಕಾರಿಯ ಧೈರ್ಯದಿಂದ ಬಹಿರಂಗವಾದ ಬ್ಲ್ಯಾಕ್‌ಮೇಲ್ ಜಾಲ

ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ.

ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಮಾಡಿದ ನಕಲಿ ಮಾಧ್ಯಮಗಿರಿ ಬಯಲು.

ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ ಎಂಬ ಸತ್ಯಕ್ಕೆ ಮತ್ತೊಂದು ಸಾಕ್ಷಿ; ಹಿಡನ್ ಕ್ಯಾಮರಾ–ಕೋಟಿ ಬ್ಲ್ಯಾಕ್‌ಮೇಲ್ ಪ್ರಕರಣ.

ಹಿಡನ್ ಕ್ಯಾಮರಾ, ಕೋಟಿ ಬೇಡಿಕೆ, ಮೌನಕ್ಕೆ ಒತ್ತಡ—ನಕಲಿ ಯೂಟೂಬರ್ಸ್‌ಗಳ ಅಶ್ಲೀಲ ಕಾರ್ಯಾಚರಣೆಯ ಒಳನೋಟ.

ಬೆಳಗಾವಿ
ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಮಾಡಿಕೊಂಡು ಸಮಾಜದಲ್ಲಿ ನಂಬಿಕೆ ಗಳಿಸುವ ಪ್ರಯತ್ನ ಮಾಡುತ್ತಿದ್ದ ಕೆಲ ಯೂಟೂಬಸರ್್, ಅಧಿಕಾರಿಗಳ ಮನೆಗಳೇ ಗುರಿಯಾಗಿಸಿದ್ದಾರೇ ಎಂಬ ಅನುಮಾನಗಳು ಇದೀಗ ಗಂಭೀರವಾಗಿವೆ.

ಬೆಳಗಾವಿಯ ಮಹಿಳಾ ಅಧಿಕಾರಿಯ ಮನೆಯೊಳಗೆ ಸುಲಭವಾಗಿ ಪ್ರವೇಶಿಸಿ, ಕೊಠಡಿಯೊಳಗೆ ರಹಸ್ಯ ಕ್ಯಾಮರಾ ಅಳವಡಿಸುವಷ್ಟು ಧೈರ್ಯ ತೋರಿರುವುದು, ಇದು ಏಕಾಂಗಿಯ ಕೃತ್ಯವಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದರ ಹಿಂದೆ ಇನ್ನೂ ಕೆಲವರು ಕೈವಾಡ ಇರುವ ಅನುಮಾನ ದಟ್ಟವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ತಮ್ಮನ್ನು ಮಾಧ್ಯಮದವರು ಎಂದು ಪರಿಚಯಿಸಿಕೊಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು.

ಯೂಟೂಬ್ ಚಾನೆಲ್, ಕ್ಯಾಮರಾ, ಮೈಕ್ಗಳನ್ನು ಆಯುಧವಾಗಿ ಬಳಸಿಕೊಂಡು, ಗೌಪ್ಯತೆ ಉಲ್ಲಂಘನೆ ಹಾಗೂ ಬ್ಲ್ಯಾಕ್ಮೇಲ್ವೇ ವೃತ್ತಿಯಾಗಿತ್ತು ಎನ್ನಲಾಗಿದೆ.

ಯೂಟೂಬ್ ಇದ್ದರೆ ಪತ್ರಕರ್ತನಾಗುವುದಿಲ್ಲ…!
ವರ್ಷಗಳ ಪರಿಶ್ರಮ, ನೈತಿಕತೆ, ಹೊಣೆಗಾರಿಕೆ ಎಂಬ ಮೌಲ್ಯಗಳ ಮೇಲೆ ನಿಂತಿರುವ ಪತ್ರಿಕೋದ್ಯಮಕ್ಕೆ, ಇಂತಹ ನಕಲಿ ಯೂಟೂಬಸರ್್ಗಳು ಮಸಿ ಬಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಎಕ್ಸ್ಪೋಸ್ ಹೆಸರಿನಲ್ಲಿ ಖಾಸಗಿ ಜೀವನಕ್ಕೆ ದಾಳಿ, ಬೆದರಿಕೆ, ವಸೂಲಿ ಇವೆಲ್ಲವೂ ಮಾಧ್ಯಮವಲ್ಲ, ಅದು ಅಪರಾಧ ಎಂಬುದನ್ನು ಈ ಪ್ರಕರಣ ನೆನಪಿಸಿದೆ.

ಒಬ್ಬ ಮಹಿಳಾ ಅಧಿಕಾರಿ ಧೈರ್ಯ ತೋರಿಸಿ ಪೊಲೀಸ್ ಮೆಟ್ಟಿಲೇರಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಇಂತಹ ಬ್ಲ್ಯಾಕ್ಮೇಲ್ಗೆ ಮೌನವಾಗಿ ಒಳಗಾದವರು ಎಷ್ಟು? ಅಧಿಕಾರಿಗಳು, ವ್ಯಾಪಾರಿಗಳು, ರಾಜಕೀಯ ಮುಖಂಡರು ಗುರಿಯಾಗಿದ್ದಾರೇ? ಈ ಯೂಟೂಬಸರ್್ಗಳ ಹಿಂದೆ ಇನ್ನೂ ಯಾರಾದರೂ ಇದ್ದಾರೇ? ಎಂಬ ಪ್ರಶ್ನೆಗಳು ಇದೀಗ ನಗರದಲ್ಲಿ ಚಚರ್ೆಗೆ ಗ್ರಾಸವಾಗಿವೆ.

ಡಿಜಿಟಲ್ ಸಾಕ್ಷ್ಯಗಳೇ ತನಿಖೆಯ ಕೀಲಿ
ಆರೋಪಿಗಳ ಮೊಬೈಲ್ ಫೋನ್ಗಳು, ಕ್ಯಾಮರಾಗಳು, ಲ್ಯಾಪ್ಟಾಪ್ಗಳು ಹಾಗೂ ಯೂಟೂಬ್ ಚಾನೆಲ್ಗಳ ಡೇಟಾ ವಶಕ್ಕೆ ಪಡೆಯಲಾಗಿದ್ದು, ಡಿಜಿಟಲ್ ಫಾರೆನ್ಸಿಕ್ ತನಿಖೆ ಆರಂಭವಾಗಿದೆ.

ಹಳೆಯ ವಿಡಿಯೋಗಳು, ಹಣಕಾಸಿನ ವ್ಯವಹಾರಗಳು, ಕರೆ ದಾಖಲೆಗಳು ಎಲ್ಲವನ್ನೂ ಶೋಧಿಸಲಾಗುತ್ತಿದೆ.

ಸಹಿಸುವ ಪ್ರಶ್ನೆಯೇ ಇಲ್ಲ.

ಯಾರೇ ಆಗಿರಲಿ, ಮಾಧ್ಯಮದ ಹೆಸರಿನಲ್ಲಿ ಬ್ಲ್ಯಾಕ್ಮೇಲ್ ಮಾಡಿದರೆ ಕಠಿಣ ಕ್ರಮ ಅನಿವಾರ್ಯ. ಮಹಿಳೆಯರ ಗೌಪ್ಯತೆಗೆ ಧಕ್ಕೆಯಾಗುವ ಯಾವುದೇ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!