ಬೆಳಗಾವಿ. ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆ ಮೂವರು ಯೂಟೂಬರ್ಸ್ ಜೊತೆ ಸೇರಿದ ಆ ನಾಲ್ಕನೆ ವ್ಯಕ್ತಿ ಯಾರು ಎನ್ನುವುದುಈಗ ಚರ್ಚೆಯ ವಸ್ತುವಾಗಿದೆ. ಮೂಲಗಳ ಪ್ರಕಾರ ನಾಲ್ಕನೆಯ ವ್ಯಕ್ತಿ ಯೂಟೂಬರ್ ಅಲ್ಲ.ಬದಲಾಗಿ ಅವನೊಬ್ಬ ಸರ್ಕಾರಿ ನೌಕರ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಈ ಬಂಧಿತರ ಪೋನ್ ಗಳನ್ನು ಜಾಲಾಡಿದ ನಂತರ ಇನ್ನಷ್ಟು ಸತ್ಯ ಭಯಾನಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.