ಸಂಘಟನೆಗೆ ಬಲ, ಯುವ ಮತದಾರರಿಗೆ ಆಕರ್ಷಣೆ.
ಅನಂತಕುಮಾರ ಹೆಗಡೆ
ಬಿಜೆಪಿಗೆ ಇನ್ನೂ ಅಸೆಟ್ ಯಾಕೆ?
ಅಧಿಕಾರವಿಲ್ಲದೆಯೂ ಹಿಡಿತ ಉಳಿಸಿಕೊಂಡ ನಾಯಕತ್ವದ ರಾಜಕೀಯ ಲೆಕ್ಕಾಚಾರ”
ವೇದಿಕೆಗೆ ಮೌನ, ನೆಲಮಟ್ಟಕ್ಕೆ ಸ್ಪಂದನೆ: ಹೆಗಡೆ ರಾಜಕೀಯದ ಒಳಶಕ್ತಿ”
ಯುವ ಮನಸ್ಸಿನ ಭಾಷೆ, ನೆಲದ ರಾಜಕಾರಣದ ಹಿಡಿತ”
ಕ್ಯಾಡರ್ ರಾಜಕಾರಣದ ಶಕ್ತಿ, ಯುವ ಮತದಾರರ ಸೆಳೆತ”.
ಅಧಿಕಾರದಿಂದ ದೂರವಾದರೂ ಸಂಘಟನೆಗೆ ಶಕ್ತಿ ತುಂಬುವ ನಾಯಕ.
ಇ ಬೆಳಗಾವಿ ವಿಶೇಷ)
ಬೆಂಗಳೂರು.
ರಾಜಕೀಯದಲ್ಲಿ ಕೆಲ ನಾಯಕರು ಅಧಿಕಾರದಲ್ಲಿದ್ದಾಗ ಮಾತ್ರ ಪ್ರಭಾವ ಬೀರುತ್ತಾರೆ. ಆದರೆ ಕೆಲವರು ಅಧಿಕಾರದಿಂದ ದೂರ ಇದ್ದರೂ ಸಂಘಟನೆಗೆ ಶಕ್ತಿ ತುಂಬುವ ವ್ಯಕ್ತಿತ್ವ ಹೊಂದಿರುತ್ತಾರೆ.
ಅನಂತಕುಮಾರ ಹೆಗಡೆ ಆ ಎರಡನೇ ವರ್ಗಕ್ಕೆ ಸೇರುತ್ತಾರೆ ಎಂಬ ಅಭಿಪ್ರಾಯ ಇಂದು ಬಿಜೆಪಿ ವಲಯದಲ್ಲಿ ಗಟ್ಟಿಯಾಗುತ್ತಿದೆ.
ಅವರ ಮರುಪ್ರವೇಶದ ಚಚರ್ೆಗೆ ಕಾರಣ ಕೇವಲ ಹಿಂದುತ್ವದ ಕಠಿಣ ಭಾಷೆ ಅಲ್ಲ, ಪಕ್ಷದ ತಳಮಟ್ಟದ ಸಂಘಟನೆ ಮತ್ತು ಯುವ ಮತದಾರರ ಮೇಲೆ ಅವರ ಹಿಡಿತ.
ರಾಜಕಾರಣದ ಕ್ಯಾಡರ್ ಲೀಡರ್
ಹೆಗಡೆ ಅವರ ರಾಜಕೀಯ ಶಕ್ತಿ ಭಾಷಣಗಳಲ್ಲಷ್ಟೇ ಅಲ್ಲ, ಕ್ಯಾಡರ್ ರಾಜಕಾರಣದಲ್ಲಿ ಅಡಗಿದೆ. ಉತ್ತರ ಕನ್ನಡ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿಶಾಖಾ ಮಟ್ಟದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಸಂಘಪರ ಕಾರ್ಯಕ್ರಮಗಳಲ್ಲಿ ನಿರಂತರ ನಮ್ಮವರಲ್ಲೊಬ್ಬ ಎನ್ನುವ ಭಾವನೆ. ಇವುಗಳು ಅವರನ್ನು ಇತರ ನಾಯಕರಿಗಿಂತ ವಿಭಿನ್ನಗೊಳಿಸುತ್ತವೆ.
ಬಿಜೆಪಿಯೊಳಗಿನ ಕೆಲವರ ಅಭಿಪ್ರಾಯ..
ಚುನಾವಣೆ ಸಮಯದಲ್ಲಿ ವೇದಿಕೆ ಬೇಕಾಗುತ್ತದೆ; ಆದರೆ ಸಂಘಟನೆ ಕಟ್ಟಲು ನೆಲ ಬೇಕು. ಹೆಗಡೆ ಆ ನೆಲದ ನಾಯಕ.

ರಾಜ್ಯ ಬಿಜೆಪಿಯಲ್ಲಿ ಇಂದು ದೊಡ್ಡ ಸವಾಲು ಎಂದರೆ, ಕಾರ್ಯಕರ್ತರಲ್ಲಿ ಉತ್ಸಾಹ ಉಳಿಸುವುದು, ಸಂಘಟನೆಗೆ ತೀಕ್ಷ್ಣತೆ ನೀಡುವುದು. ಈ ಹಂತದಲ್ಲಿ ಹೆಗಡೆ ಅವರಂತಹ ನಾಯಕ,
ಕಾರ್ಯಕರ್ತರನ್ನು ಭಾವನಾತ್ಮಕವಾಗಿ ಜೋಡಿಸುವ ಶಕ್ತಿ ಹೊಂದಿದ್ದಾರೆ ಎನ್ನುವುದು ಪಕ್ಷದ ಒಳಚಚರ್ೆ.
ಹೀಗಾಗಿ ಅವರು ಮರಳಿದರೆ, ಅದು ಚುನಾವಣೆಯ ಮುಖವಲ್ಲ. ಸಂಘಟನೆಗೆ ಎಂಜಿನ್ ಆಗಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.
ಹೆಗಡೆ ಚರಿಷ್ಮಾದ ಅಡಗಿದ ಬಲ..
ಹೆಗಡೆ ಅವರ ಭಾಷೆ, ಶೈಲಿ, ನಿಲುವುಗಳು, ಯುವ ಮತದಾರರಲ್ಲಿ ಒಂದು ವರ್ಗಕ್ಕೆ ನೇರ, ಅಂಜದ, ವ್ಯವಸ್ಥೆಗೆ ಸವಾಲು ಹಾಕುವ ಧ್ವನಿಯಾಗಿ ಕಾಣುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಳೆಯ ಭಾಷಣಗಳು ಇನ್ನೂ ಸುತ್ತಾಡುತ್ತಿವೆ ರಾಜಕೀಯವಾಗಿ ಸರಿಯಾಗಿರಬೇಕಿಲ್ಲ ಎನ್ನುವ ಧಾಟಿ ಯುವಕರನ್ನು ಸೆಳೆಯುತ್ತದೆ. ಇವೆಲ್ಲವೂ ಹೆಗಡೆ ಅವರನ್ನು ಯುವ ಮತದಾರರ ನಡುವೆ ಚಚರ್ಿತ ನಾಯಕನಾಗಿಯೇ ಉಳಿಸಿವೆ.

ಬಿಜೆಪಿಗೆ ಏಕೆ ಇದು ಮುಖ್ಯ?
ರಾಜ್ಯದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೇವಲ ಆಡಳಿತ ಸಾಧನೆ ಸಾಕಾಗುತ್ತಿಲ್ಲ.
ಭಾವನೆ, ಗುರುತು, ಐಡೆಂಟಿಟಿ ರಾಜಕಾರಣವೂ ಅಗತ್ಯ. ಈ ಖಾಲಿ ಜಾಗದಲ್ಲಿ ಹೆಗಡೆ ಅವರಂತಹ ನಾಯಕನ ಪಾತ್ರವನ್ನು ಬಿಜೆಪಿ ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

ಒಬ್ಬ ನಾಯಕನಿಗಿಂತ ದೊಡ್ಡ ಚಿತ್ರ
ಅನಂತಕುಮಾರ ಹೆಗಡೆ ಕುರಿತು ನಡೆಯುತ್ತಿರುವ ಈ ಚರ್ಚೆ,
ವಾಸ್ತವವಾಗಿ ಬಿಜೆಪಿಯ ಭವಿಷ್ಯದ ರಾಜಕೀಯ ಧಾಟಿಯ ಬಗ್ಗೆ ನಡೆಯುತ್ತಿರುವ ಚಚರ್ೆ.
ಸಂಘಟನೆಗೆ ಬಲ ನೀಡುವ, ಯುವಕರನ್ನು ಸೆಳೆಯುವ ನಾಯಕತ್ವಕ್ಕೆ ಪಕ್ಷ ಮರಳುತ್ತದೆಯೇ?ಅಥವಾ ಮಿತವಾದ ರಾಜಕೀಯದಲ್ಲೇ ಮುಂದುವರಿಯುತ್ತದೆಯೇ?
ಹೆಗಡೆ ಅವರ ಚರಿಷ್ಮಾ ಕ್ಷೀಣಿಸಿಲ್ಲ. ಅದು ಶಾಂತ ಸ್ಥಿತಿಯಲ್ಲಿ ಇದೆ ಅಷ್ಟೇ. ಪಕ್ಷ ಅವಕಾಶ ಕೊಟ್ಟರೆ, ಅದು ಮತ್ತೆ ಉಗ್ರವಾಗಿ ವ್ಯಕ್ತವಾಗಬಹುದು.
ರಾಜಕೀಯದಲ್ಲಿ ಕೆಲವೊಮ್ಮೆ ಬೆಂಕಿ ಕಾಣಿಸದಿದ್ದರೂ ಒಳಗೆ ಉರಿಯುತ್ತಲೇ ಇರುತ್ತದೆ. ಏನಂತಿರಾ ಕಮೆಂಟ್ ಮಾಡಿ. ನಮಸ್ಕಾರ

