ಬೆಳಗಾವಿಯಲ್ಲಿ ಫೆ.11ರಿಂದ 15 ರವರೆಗೆ ‘ಸತ್ಯಾಮೃತ ಮಹೋತ್ಸವ’

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 53ನೇ ಸಂವತ್ಸರ ಪೂರ್ಣತೆ ನಿಮಿತ್ತ ಐದು ದಿನಗಳ ಧಾರ್ಮಿಕ ಕಾರ್ಯಕ್ರಮ

ಬೆಳಗಾವಿ:
ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 53ನೇ ಸಂವತ್ಸರ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಫೆಬ್ರುವರಿ 11ರಿಂದ 15ರವರೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿರುವ ಶ್ರೀ ಸತ್ಯಪ್ರಮೋದತೀರ್ಥ ಸಭಾಗೃಹದಲ್ಲಿ ‘ಸತ್ಯಾಮೃತ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ.
ಈ ಐದು ದಿನಗಳ ಮಹೋತ್ಸವದ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಫೆಬ್ರುವರಿ 11ರಂದು ಸಂಜೆ 5 ಗಂಟೆಗೆ 1ನೇ ರೈಲ್ವೆ ಗೇಟ್‌ನಿಂದ ಸಭಾಗೃಹದವರೆಗೆ ಬೈಕ್ ಮೆರವಣಿಗೆಯೊಂದಿಗೆ ಭವ್ಯ ಸ್ವಾಗತ ಕಾರ್ಯಕ್ರಮ ನಡೆಯಲಿದೆ.

ಬಳಿಕ ಮಹಿಳಾ ಭಜನಾ ಮಂಡಳಿಗಳಿಂದ ಪೂರ್ಣಕುಂಭ ಸ್ವಾಗತ ನಡೆಯಲಿದೆ. ಸಂಜೆ 6.30ಕ್ಕೆ , ಉದ್ಘಾಟನೆ, ಪಂಡಿತರ ಉಪನ್ಯಾಸ ಹಾಗೂ ಶ್ರೀಪಾದಂಗಳವರ ಅನುಗ್ರಹ ಸಂದೇಶ ನಡೆಯಲಿದೆ.
ಭಜನೆ, ಉಪನ್ಯಾಸ, ಸಂಗೀತ ಕಾರ್ಯಕ್ರಮ
ಫೆಬ್ರುವರಿ 12ರಂದು ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದ್ದು, ಸಂಜೆ 6 ಗಂಟೆಗೆ ಪಂಡಿತರ ಉಪನ್ಯಾಸ ಹಾಗೂ ಶ್ರೀಪಾದಂಗಳವರ ಅನುಗ್ರಹ ಸಂದೇಶ ಇರುತ್ತದೆ.

ಫೆಬ್ರುವರಿ 13ರ ಏಕಾದಶಿ ದಿನ ಮಧ್ಯಾಹ್ನ 3ರಿಂದ 5.30ರವರೆಗೆ ಮಹಿಳಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಸಂಜೆ 6ರಿಂದ 7ರವರೆಗೆ ಪಂಡಿತ ರವೀಂದ್ರ ಕಾತೋಟಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ನಂತರ ಪಂಡಿತರ ಉಪನ್ಯಾಸ ಹಾಗೂ ಶ್ರೀಪಾದಂಗಳವರ ಅಮೃತೋಪದೇಶ ಇರಲಿದೆ.

ಫೆಬ್ರುವರಿ 14ರಂದು ಮಧ್ಯಾಹ್ನ 3ರಿಂದ 5ರವರೆಗೆ ಭಜನೆ ನಡೆಯಲಿದ್ದು, ಸಂಜೆ 5ರಿಂದ 6.30ರವರೆಗೆ ಗುರುಗಳಿಗೆ ಶೇಷ ವಸ್ತ್ರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ನಂತರ ಉಪನ್ಯಾಸ ಹಾಗೂ ಅಮೃತೋಪದೇಶ ನಡೆಯಲಿದೆ.
ಮೃತ್ಯುಂಜಯ ಹೋಮ, ಅಭಿಷೇಕ
ಫೆಬ್ರುವರಿ 15ರಂದು ಬೆಳಿಗ್ಗೆ 6ರಿಂದ 8ರವರೆಗೆ ಮೃತ್ಯುಂಜಯ ಹೋಮ, 8ರಿಂದ 9ರವರೆಗೆ ನದಿಗಳಿಂದ ತರಲಾದ ತೀರ್ಥದಿಂದ ಶ್ರೀಪಾದಂಗಳವರಿಗೆ ಅಭಿಷೇಕ ನಡೆಯಲಿದೆ. ನಂತರ ಸಂಸ್ಥಾನ ಪೂಜೆ ಪ್ರಾರಂಭವಾಗಲಿದ್ದು, ಸರ್ವರಿಗೂ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಪಾದಪೂಜೆ, ಮುದ್ರಾಧಾರಣೆ ವೇಳಾಪಟ್ಟಿ
ಫೆಬ್ರುವರಿ 12ರಂದು ಬೆಳಿಗ್ಗೆ 8ರಿಂದ 11ರವರೆಗೆ ಶ್ರೀ ಸತ್ಯಪ್ರಮೋದತೀರ್ಥ ಸಭಾಗೃಹದಲ್ಲಿ ಪಾದಪೂಜೆ ಹಾಗೂ ಮುದ್ರಾಧಾರಣೆ ನಡೆಯಲಿದೆ.
ಫೆಬ್ರುವರಿ 13ರಂದು ಏಕಾದಶಿ ದಿನ ಮುದ್ರಾಧಾರಣೆ ಮಾತ್ರ ನಡೆಯಲಿದ್ದು,
ಬೆಳಿಗ್ಗೆ 8ರಿಂದ 9: ಶ್ರೀ ವೆಂಕಟೇಶ ದೇವಸ್ಥಾನ, ಮಾರ್ಕೆಟ್, 9ರಿಂದ 10: ಶ್ರೀ ವೆಂಕಟೇಶ ದೇವಸ್ಥಾನ, ವಡಗಾವಿ, 10ರಿಂದ 10.30 ಉತ್ತರಾದಿಮಠ, ಶಹಾಪುರ, 11ರಿಂದ 1ರವರೆಗೆ: ಶ್ರೀ ಸತ್ಯಪ್ರಮೋದತೀರ್ಥ ಸಭಾಗೃಹ, ರಾಣಿ ಚೆನ್ನಮ್ಮ ನಗರ, ಪಾದಪೂಜೆ ಮಾಡಲು ಇಚ್ಛಿಸುವ ಭಕ್ತರು ಮಾಲೆ, ಹಣ್ಣು, ಕಾಯಿ ಸೇರಿದಂತೆ ಅಗತ್ಯ ಪೂಜಾ ಸಾಮಗ್ರಿಗಳನ್ನು ತಂದುಕೊಳ್ಳುವಂತೆ ಕೋರಲಾಗಿದೆ. ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ ಶಾಂತಿಯುತವಾಗಿ ಸಾಲಿನಲ್ಲಿ ನಿಂತು ಸಹಕರಿಸುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!