ಬೆಳಗಾವಿ ಅಜ್ಜಿ‌ ಈಗ ಬ್ರ್ಯಾಂಡ್ ಅಂಬಾಸಿಡರ್..

ಶಾಂತಾಯಿ ವೃದ್ಧಾಶ್ರಮಕ್ಕೆ ರಾಷ್ಟ್ರೀಯ ಗೌರವ;

ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ
ಬೆಳಗಾವಿಯ ಅಜ್ಜಿ ಬ್ರ್ಯಾಂಡ್ ಅಂಬಾಸಿಡರ್..!


ಬೆಳಗಾವಿ.
ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಚಳವಳಿ ಅಡಿಯಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ ಕಾರ್ಯಕ್ರಮಕ್ಕೆ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸುಮನ್ ಅಜ್ಜಿ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.

ಈ ವಿಷಯವನ್ನು ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ವಿಜಯ ಮೋರೆ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕೇಂದ್ರ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ವತಿಯಿಂದ ವಿಶಾಖಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಸುಮನ್ ಅಜ್ಜಿ ಅವರನ್ನು ಒಂದು ವರ್ಷದ ಅವಧಿಗೆ ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಲಾಗಿದೆ. ಇದು ಬೆಳಗಾವಿಗೆ ಹೆಮ್ಮೆಯ ಸಂಗತಿ ಎಂದು ವಿಜಯ ಮೋರೆ ಹೇಳಿದರು.

ವಿಶಾಖಪಟ್ಟಣದಲ್ಲಿ ನಡೆದ 10 ಸಾವಿರ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಸುಮನ್ ಅಜ್ಜಿ ಚಾಲನೆ ನೀಡಿದ್ದು, ಹಿರಿಯ ನಾಗರಿಕರಲ್ಲಿಯೂ ಆರೋಗ್ಯಕರ ಜೀವನಶೈಲಿ ಸಾಧ್ಯ ಎಂಬ ಸಂದೇಶವನ್ನು ದೇಶದ ಮಟ್ಟಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಕಳೆದ 27 ವರ್ಷಗಳಿಂದ ಶಾಂತಾಯಿ ವೃದ್ಧಾಶ್ರಮವನ್ನು ನಡೆಸಲಾಗುತ್ತಿದೆ. ಆಶ್ರಮದಲ್ಲಿರುವ ಅಜ್ಜ- ಅಜ್ಜಿಯರಿಗೆ ಪ್ರತಿದಿನ ವ್ಯಾಯಾಮ, ನಡಿಗೆ ಹಾಗೂ ಆರೋಗ್ಯ ಚಟುವಟಿಕೆಗಳನ್ನು ಕಡ್ಡಾಯವಾಗಿ ಮಾಡಿಸಲಾಗುತ್ತದೆ. ಹಿರಿಯರ ಆರೋಗ್ಯ ಮತ್ತು ಚೈತನ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜು ಗೌವಳಿ, ಸಂತೋಷ ಮಮದಾಪುರ, ಮಾರಿಯಾ ಮೋರೆ, ಶರಲ್ ಮೋರೆ, ಅಲೇನ್ ಮೋರೆ, ಗಂಗಾಧರ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!