ಪಾಲಿಕೆಯಲ್ಲಿ PID ಬಾಂಬ್…!
ಅಕ್ರಮ ಆಸ್ತಿಗಳಿಗೆ ಸಂಖ್ಯೆ ಕೊಟ್ಟವರು ಯಾರು?ಅಧಿಕಾರಿಗಳಷ್ಟೇ ಅಲ್ಲ, ಒತ್ತಡದ ಸೂತ್ರಧಾರರ ಮೇಲೂ ಕ್ರಮಕ್ಕೆ ಆಗ್ರಹ ಬೆಳಗಾವಿ: ಅಕ್ರಮ ಆಸ್ತಿಗಳಿಗೆ ಪಿಐಡಿ ನೀಡಿದ ಪ್ರಕರಣ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗದ್ದಲ ಎಬ್ಬಿಸಿದೆ. ಅಧಿಕಾರಿಗಳಿಗೆ ನೋಟಿಸ್ ನೀಡಿರುವುದಾಗಿ ಆಡಳಿತ ತಿಳಿಸಿದರೂ, ಸದಸ್ಯರು ಇದನ್ನು ಸಾಲದು ಎಂದಿದ್ದಾರೆ. “ಅಕ್ರಮ ಪಿಐಡಿ ಹಿಂದೆ ಯಾರು ಇದ್ದಾರೆ, ಯಾರ ಒತ್ತಡ ಕೆಲಸ ಮಾಡಿದೆ, ನಕಲಿ ದಾಖಲೆ ನೀಡಿದವರು ಯಾರು?” ಎಂಬ ಪ್ರಶ್ನೆಗಳನ್ನು ಸಭೆಯಲ್ಲಿ ತೀವ್ರವಾಗಿ ಎತ್ತಲಾಯಿತು. ತಪ್ಪಿತಸ್ಥ ಅಧಿಕಾರಿಗಳ ಜೊತೆಗೇ ಅಕ್ರಮ ಪಿಐಡಿ ಮಾಡಿಸಿಕೊಂಡ…

