ಪ್ರಚಾರದ ಪಿಚ್‌ನಿಂದ ಕ್ರಿಕೆಟ್ ಕ್ರೀಸ್‌ಗೆ ಸಚಿವ ಸತೀಶ್ ಎಂಟ್ರಿ
ಗೋಕಾಕ ಮೈದಾನದಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದ ಜಾರಕಿಹೊಳಿ; ಪುತ್ರ ರಾಹುಲ್ ಸಹ ಸಾಥ್ಗೋಕಾಕ: ರಾಜಕೀಯ ಪ್ರಚಾರದ ಗದ್ದಲದಿಂದ ಸ್ವಲ್ಪ ಹೊರಬಂದು, ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಬೀಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಗೋಕಾಕದಲ್ಲಿ ಎಲ್ಲರ ಗಮನ ಸೆಳೆದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯ ಮುಗಿಸಿ ವಾಪಸ್ಸಾದ ಬೆನ್ನಲ್ಲೇ ಅವರು ಪುತ್ರ ರಾಹುಲ್ ಜಾರಕಿಹೊಳಿ ಅವರೊಂದಿಗೆ ಕ್ರಿಕೆಟ್ ಆಡಿದ ಕ್ಷಣಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸತತ ಚುನಾವಣಾ ಪ್ರಚಾರ, ಸಭೆ-ಸಮಾರಂಭ,…

